ಕೂಡಿಗೆ, ಮಾ. ೨೯: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ. ಬಸವನತ್ತೂರು ಗ್ರಾಮದಲ್ಲಿ ಯುಗಾದಿ ಹಬ್ಬದ ಅಂಗವಾಗಿ ಗ್ರಾಮದ ಯುವಕರ ತಂಡಗಳಿಗೆ ನಡೆದ ವಾಲಿಬಾಲ್ ಪಂದ್ಯಾವಳಿಯಲ್ಲಿ ಬಸವನತ್ತೂರು ರೋಹಿತ್ ಫ್ರೆಂಡ್ಸ್ ತಂಡ ಪ್ರಥಮ ಸ್ಥಾನಗಳಿಸಿ ನಗದು ಹಾಗೂ ಟ್ರೋಫಿ ತನ್ನದಾಗಿಸಿಕೊಂಡಿತು.
ಗ್ರಾಮದ ಯುವ ಸಂಘಟನೆ ಮತ್ತು ಗ್ರಾಮಸ್ಥರು ಸೇರಿ ಸಂಪ್ರದಾಯದAತೆ ಯುಗಾದಿ ಹಬ್ಬದ ಪ್ರಯುಕ್ತ ಎಂಟನೇ ವರ್ಷದ ವಾಲಿಬಾಲ್ ಪಂದ್ಯಾಟ ಹಾಗೂ ಬಸವೇಶ್ವರ ದೇವಸ್ಥಾನದ ಪೂಜಾ ಕಾರ್ಯಕ್ರಮಗಳು ನೆರವೇರಿಸಿದವು.
ವಾಲಿಬಾಲ್ ಪಂದ್ಯಾಟದಲ್ಲಿ ಪ್ರಥಮ ಬಹುಮಾನ ರೋಹಿತ್ ಫ್ರೆಂಡ್ಸ್, ದ್ವಿತೀಯ ಬಹುಮಾನ ಧ್ವನಿ ಕನ್ಸ್ಟ್ರಕ್ಷನ್ ಬಸವನತ್ತೂರು. ತೃತೀಯ ಬಹುಮಾನ ಕಿರಣ್ ಫ್ರೆಂಡ್ಸ್ ತಂಡಗಳು ಪಡೆದುಕೊಂಡವು.
ಬಹುಮಾನ ವಿತರಣೆಯನ್ನು ಕೂಡುಮಂಗಳೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕೆ.ಎಂ. ಚಂದ್ರುಮೂಡ್ಲಿಗೌಡ ನೆರವೇರಿಸಿದರು.
ಈ ಸಂದರ್ಭ ವ್ಯವಸ್ಥಾಪಕ ರವಿ ಪಕ್ಷಿ, ಸತೀಶ್, ತೋಪಯ್ಯ, ರೋಹಿತ್, ಕೃಷ್ಣ. ಅಭಿಲಾಶ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.