ಮಡಿಕೇರಿ, ಮಾ. ೨೯: ಜಿಪಿಟಿಯಂತಹ ತಾಂತ್ರಿಕ ಮಾಧ್ಯಮವನ್ನು ಹೆಚ್ಚು ಬಳಕೆ ಮಾಡುತ್ತಿದ್ದರೆ ನಮ್ಮ ಮನಸ್ಸಿನ ಕ್ರಿಯಾಶೀಲತೆ ನಾಶವಾಗಿ ಮೆದುಳಿನ ಮೇಲೆ ದುಷÀ್ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿರುವುದರಿಂದ ಅಗತ್ಯಕ್ಕೆ ತಕ್ಕಂತೆ ಎಐ, ಜಿಪಿಟಿಯಂತಹ ಮಾಧ್ಯಮವನ್ನು ಬಳಸುವ ಮೂಲಕ ಮಾನಸಿಕ ಮತ್ತು ದೈಹಿಕ ಆರೋಗ್ಯದ ಕಡೆ ಗಮನ ನೀಡಿ ಎಂದು ಆಯುಷ್ ಇಲಾಖೆಯ ಹಿರಿಯ ವೈದ್ಯಾಧಿಕಾರಿ ಡಾ. ಶುಭಾ ಕೆ.ಜಿ. ವಿದ್ಯಾರ್ಥಿಗಳಿಗೆ ಕರೆ ನೀಡಿ, ಕೊಡಗು ವಿಶ್ವವಿದ್ಯಾಲಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕೆ.ಎಂ. ಕಾರ್ಯಪ್ಪ ಕಾಲೇಜಿನ ಮಹಿಳಾ ಘಟಕ ಹಾಗೂ ಸಮಾಜಶಾಸ್ತç ಮತ್ತು ರಾಜ್ಯಶಾಸ್ತç ವಿಭಾಗಗಗಳ ಸಂಯುಕ್ತ ಆಶ್ರಯದಲ್ಲಿ ಅಂತರರಾಷ್ಟಿçÃಯ ಮಹಿಳಾ ದಿನಾಚರಣೆ ಅಂಗವಾಗಿ "ಹೆಲ್ದಿ ಹ್ಯಾಬಿಟ್ಸ್ - ಹ್ಯಾಪಿ ಲೈಫ್" ವಿಷಯದ ಕುರಿತು ಆಯೋಜಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಯೌವ್ವನದಲ್ಲಿ ಯುವತಿಯರು ಚರ್ಮ ಸಂರಕ್ಷಣೆ ಸಂಬAಧ ಹೆಚ್ಚು ಜಾಗ್ರತೆ ವಹಿಸುವ ನಿಟ್ಟಿನಲ್ಲಿ ಆರೋಗ್ಯಕರ ಆಹಾರ ಸೇವಿಸಬೇಕು. ಆಯಾಯ ಕಾಲಮಾನಕ್ಕೆ ತಕ್ಕಂತೆ ಆಹಾರ ಸೇವನೆಯೂ ಯೌವ್ವನದಲ್ಲಿ ಮುಖ್ಯವಾಗುತ್ತದೆ.

ಮೊಬೈಲ್ ಬಳಕೆಯು ಹೆಚ್ಚಾದಂತೆ ಯುವಪೀಳಿಗೆಯಲ್ಲಿ ಇದು ವ್ಯತಿರಿಕ್ತ ಪರಿಣಾಮ ಬೀರುತ್ತದೆ. ದೈಹಿಕವಾಗಿಯೂ ಮೊಬೈಲ್‌ನ ಅತೀ ಬಳಕೆಯು ಗಂಭೀರ ಪರಿಣಾಮ ಬೀರುತ್ತದೆ ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹನಿರ್ದೇಶಕಿ ಮೇಪಾಡಂಡ ಸವಿತಾ ಕೀರ್ತನ್ ಮಾತನಾಡಿ, ವಿದ್ಯಾರ್ಥಿಗಳು ಹೇಗೆ ದುಶ್ಚಟಗಳಿಗೆ ಒಳಗಾಗುತ್ತಿದ್ದಾರೆ. ಮೊಬೈಲ್ ದುರ್ಬಳಕೆಯಿಂದ ದಿಕ್ಕು ತಪ್ಪುತ್ತಿದ್ದಾರೆ ಎಂಬ ಬಗ್ಗೆ ವಿವರಿಸಿ, ಜೀವನದಲ್ಲಿ ತೆಗೆದು ಕೊಳ್ಳಬೇಕಾದ ಸರಿಯಾದ ನಿರ್ಧಾರಗಳು ಮತ್ತು ಪೌಷ್ಟಿಕ ಆಹಾರದ ಮಹತ್ವ ಕುರಿತು ಜಾಗೃತಿ ಮೂಡಿಸಿದರು.

ಕಾಲೇಜಿನ ಪ್ರಾಂಶುಪಾಲ ಮೇ. ಪ್ರೊ. ರಾಘವ ಬಿ. ಮಾತನಾಡಿ, ಮಹಿಳಾ ದಿನಾಚರಣೆಯು ಒಂದು ದಿನದ ಆಚರಣೆಗೆ ಸೀಮಿತವಾಗಿರಬಾರದು. ಪ್ರಸ್ತುತ ಸಮಾಜದಲ್ಲಿ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಸ್ತಿçÃಯ ಮಹತ್ವದ ಬಗ್ಗೆ ತಿಳಿಯುವ ಅಗತ್ಯತೆ ಇದೆ ಎಂದು ಹೇಳಿದರು.

ಕಾಲೇಜಿನ ಮಹಿಳಾ ಘಟಕದ ಸಂಯೋಜಕಿ ಪ್ರೊ. ನಯನಾ ಕಶ್ಯಪ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭ ಕಾಲೇಜಿನ ಮಹಿಳಾ ಸ್ವಚ್ಛತಾ ಸಿಬ್ಬಂದಿಯ ಅವಿರತ ಶ್ರಮ, ಸೇವೆ ಗುರುತಿಸಿ ಅವರನ್ನು ಗೌರವಿಸಲಾಯಿತು. ತಾವು ಯಾವುದೇ ದುಶ್ಚಟಗಳಿಗೆ ಒಳಗಾಗುವುದಿಲ್ಲ ಹಾಗೂ ಆರೋಗ್ಯಕರ ಜೀವನ ನಡೆಸುತ್ತೇವೆ ಎಂದು ಕಾರ್ಯಾಗಾರದಲ್ಲಿ ಪಾಲ್ಗೊಂಡ ವಿದ್ಯಾರ್ಥಿನಿಯರು ಪ್ರತಿಜ್ಞೆ ಸ್ವೀಕರಿಸಿದರು.

ವಿದ್ಯಾರ್ಥಿನಿಯರಾದ ಸಪ್ನಾ ಶೇಠ್ ಮತ್ತು ಚೋಂದಮ್ಮ ಪ್ರಾರ್ಥಿಸಿ, ರಾಜ್ಯಶಾಸ್ತç ವಿಭಾಗದ ಸಂಯೋಜಕಿ ಪ್ರೊ. ಗಾಯತ್ರಿ ದೇವಿ ಸ್ವಾಗತಿಸಿದರು. ಸಮಾಜಶಾಸ್ತç ವಿಭಾಗದ ಮುಖ್ಯಸ್ಥೆ ಡಾ. ಎ.ಎನ್. ಗಾಯತ್ರಿ ವಂದಿಸಿದರು. ರಾಜ್ಯಶಾಸ್ತç ವಿಭಾಗದ ಡಾ. ಶ್ರುಂಗಾರ್ ನಿರೂಪಿಸಿದರು. ಕಾಲೇಜಿನ ಬೋಧಕರಾದ ಆಲೋಕ್ ಬಿಜೈ, ಯೋಗಾನಂದ, ಶರತ್, ಡಾ. ಭೈರವಿ, ಕನ್ನಿಕಾ ಪ್ರಕಾಶ್, ಡಾ. ವಿಜಯಲತ, ದೇವಮ್ಮ, ಡಾ. ಅಮೃತ ಮತ್ತು ಡಾ. ನಳಿನಿ ಉಪಸ್ಥಿತರಿದ್ದರು.