ಸೋಮವಾರಪೇಟೆ, ಮಾ. ೨೭: ಸಮೀಪದ ನಗರಳ್ಳಿಯಲ್ಲಿರುವ ಕೂತಿನಾಡು ಶ್ರೀ ಸಬ್ಬಮ್ಮ ದೇವಿಯ ದೇವರ ಮನೆ ಪ್ರತಿಷ್ಠಾಪನಾ ಮಹೋತ್ಸವ ನಗರಳ್ಳಿ ದೇವಸ್ಥಾನ ಬನದಲ್ಲಿ ನಡೆಯಿತು.
ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ದೇವಾಲಯದ ಅರ್ಚಕ ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ಕಳೆದ ಎರಡು ದಿನದಿಂದ ಹಲವು ಪೂಜಾ ಕಾರ್ಯಕ್ರಮ ನಡೆದು ಇಂದು ಪ್ರತಿಷ್ಠಾಪನೆ, ಬಿಂಬಶುದ್ದಿ, ಕಲಾವೃದ್ಧಿ ಹೋಮ, ಕಳಸ ಸ್ಥಾಪನೆ ಹಾಗೂ ಮಹಾಮಂಗಳಾರತಿ ನಡೆಯಿತು.
ಶ್ರೀ ಸಬ್ಬಮ್ಮ ದೇವಿಯು ಕೂತಿ, ಯಡದಂಟೆ, ನಗರಳ್ಳಿ, ಕುಂದಳ್ಳಿ, ಹೆಮ್ಮನಗದ್ದೆ, ಕನ್ನಳ್ಳಿ, ಬೇಕನಳ್ಳಿ, ಹಳ್ಳಿಯೂರು, ಬೆಟ್ಟದಳ್ಳಿ, ಬೆಟ್ಟದಕೊಪ್ಪ, ಜಕ್ಕನಳ್ಳಿ, ಇನಕನಳ್ಳಿ, ಕೊತ್ತನಳ್ಳಿ, ಕುಡಿಗಾಣ, ಬೆಂಕಳ್ಳಿ, ಬೀಕಳ್ಳಿ, ನಾಡ್ನಳ್ಳಿ, ತಡ್ಡಿಕೊಪ್ಪ ಹಾಗೂ ಸಕಲೇಶಪುರ ತಾಲೂಕಿನ ಓಡಳ್ಳಿ ಗ್ರಾಮಗಳ ಗ್ರಾಮದೇವತೆಯಾಗಿದ್ದು ಈ ಭಾಗದ ಭಕ್ತಾದಿಗಳು ಪಾಲ್ಗೊಂಡಿದ್ದರು.
ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸಿ.ಎನ್. ಬೋಪ್ಪಯ್ಯ, ಗೌರವ ಅಧ್ಯಕ್ಷ ಕೆ.ಬಿ. ಜಗದೀಶ್, ಕಾರ್ಯದರ್ಶಿ ಕೆ.ಯು. ಜಗದೀಶ್, ಖಜಾಂಚಿ ಎನ್.ಬಿ. ಸುರೇಶ್, ಜಿ.ಆರ್. ಸುರೇಶ್, ಬಿ.ಪಿ. ಪ್ರದೀಪ್ ಕುಮಾರ್, ಎನ್.ಪಿ. ರುದ್ರಪ್ಪ, ಎನ್.ಬಿ. ರಮೇಶ್, ಬಿ.ಎಂ. ಪ್ರಕಾಶ್, ಕೆ.ಕೆ. ರಜಿತ್ ಇದ್ದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಧನಸಹಾಯ ನೀಡಿದ ದಾನಿಗಳನ್ನು ಸನ್ಮಾನಿಸಲಾಯಿತು. ಈ ಸಂದರ್ಭ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ಕೂತಿ ಗ್ರಾಮಾಧ್ಯಕ್ಷ ಜಯರಾಮ್, ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಕೆ.ಎಂ. ಲೋಕೇಶ್, ಕೂತಿನಾಡು ಶ್ರೀ ಸಬ್ಬಮ್ಮ ದೇವರ ಸಮಿತಿಯ ಮಾಜಿ ಅಧ್ಯಕ್ಷ ಕೆ.ಟಿ. ಜೋಯಪ್ಪ, ದಾನಿಗಳಾದ ಎನ್.ಎಂ. ಚಂದ್ರಶೇಖರ್, ಕೆ.ಟಿ. ನಂದೀಶ್, ಕೃಷ್ಣ, ಪ್ರಕಾಶ್ ಸೇರಿದಂತೆ ಸಮಿತಿ ಸದಸ್ಯರು, ದಾನಿಗಳು ಉಪಸ್ಥಿತರಿದ್ದರು.