ಮಡಿಕೇರಿ, ಮಾ. ೨೬: ಭಾರತೀಯ ರಿಸರ್ವ್ ಬ್ಯಾಂಕ್ (ಆರ್.ಬಿ.ಐ.) ವಿವಿಧ ನಿಯಮಗಳ ಉಲ್ಲಂಘನೆಯ ಆಕ್ಷೇಪದಂತೆ ಮೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗಳು (ಡಿ.ಸಿ.ಸಿ.) ಮತ್ತು ಎರಡು ನಗರ ಸಹಕಾರ ಬ್ಯಾಂಕ್‌ಗಳಿಗೆ ದಂಡ ವಿಧಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಇದರಲ್ಲಿ ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಕೂಡ ಸೇರಿದೆ. ಆರ್.ಬಿ.ಐ. ಮತ್ತು ನಬಾರ್ಡ್ ನಡೆಸಿದ ಮೇಲ್ವಿಚಾರಣೆ ಮತ್ತು ಪರಿಶೀಲನೆಗಳ ನಂತರ ಈ ಕ್ರಮ ತೆಗೆದುಕೊಳ್ಳಲಾಗಿದೆ. ಮಾರ್ಚ್ ೨೦೨೫ ರ ಹಣಕಾಸು ಸ್ಥಿತಿ ಆಧರಿಸಿ ಈ ಮೇಲ್ವಿಚಾರಣೆ ನಡೆದಿದೆ ಎನ್ನಲಾಗಿದೆ.

ಕೊಡಗು ಡಿ.ಸಿ.ಸಿ. ಬ್ಯಾಂಕ್‌ಗೆ ಸಂಬAಧಿಸಿದAತೆ ಬ್ಯಾಂಕ್ ರೆಗ್ಯುಲೇಷನ್ ಆ್ಯಕ್ಟ್ ಉಲ್ಲಂಘಿಸಿ ನಿರ್ದೇಶಕರಿಗೆ ಸಂಬAಧಿಸಿದ ಸಾಲಗಳನ್ನು ಮಂಜೂರು ಮಾಡಿರುವುದನ್ನು ಆಕ್ಷೇಪಿಸಲಾಗಿದೆ. ಈ ಪ್ರಕರಣದಂತೆ ರೂ. ೧ ಲಕ್ಷ ದಂಡ ವಿಧಿಸಲಾಗಿದೆ.