ಮಡಿಕೇರಿ, ಮಾ. ೨೬: ಮುಳಿಯ ಗೋಲ್ಡ್ & ಡೈಮಂಡ್ಸ್ ತನ್ನ ಗ್ರಾಹಕರಿಗಾಗಿ “ಡೈಮಂಡ್ ಫೆಸ್ಟ್” ವಿಶೇಷ ಉತ್ಸವವನ್ನು ತಾ. ೨೭ ರಿಂದ ಆರಂಭಿಸುತ್ತಿದೆ. ‘ವೈಡೆಸ್ಟ್ ರೇಂಜ್, ಎಂಡ್‌ಲೆಸ್ ವಾವ್ಸ್!’ ಎಂಬ ಘೋಷಣೆಯೊಂದಿಗೆ ಈ ಉತ್ಸವ ನಡೆಯಲಿದೆ.
ಫೆಸ್ಟ್ನ ಅಂಗವಾಗಿ ಗ್ರಾಹಕರು ರೂ. ೫೦,೦೦೦ ಹೆಚ್ಚಿನ ಖರೀದಿಗೆ ಖಚಿತ ಉಡುಗೊರೆಯನ್ನು ಪಡೆಯಬಹುದಾಗಿದೆ. ಜೊತೆಗೆ, ಲಕ್ಕಿ ಡ್ರಾ ಮೂಲಕ ಬಂಪರ್ ಬಹುಮಾನವಾಗಿ ಎಲೆಕ್ಟಿçಕ್ ಸ್ಕೂಟರ್ ಗೆಲ್ಲುವ ಅವಕಾಶವೂ ಇದೆ. ವಜ್ರದ ಆಭರಣಗಳ ಮೇಲೆ ಶೇ. ೯೫ ಎಕ್ಸ್ಚೇಂಜ್ ಮತ್ತು ಶೇ. ೯೦ ಬೈಬ್ಯಾಕ್ ಸೌಲಭ್ಯವನ್ನು ಸಂಸ್ಥೆ ನೀಡುತ್ತಿದೆ. ಪುತ್ತೂರು, ಬೆಳ್ತಂಗಡಿ, ಮಡಿಕೇರಿ ಹಾಗೂ ಗೋಣಿಕೊಪ್ಪ ಶಾಖೆಗಳಲ್ಲಿ ಡೈಮಂಡ್ ಫೆಸ್ಟ್ ನಡೆಯುತ್ತದೆ.