ಮಡಿಕೇರಿ, ಮಾ.೨೬: ಸೂರ್ಯ ಮರೆಯಾಗಿ ಕತ್ತಲು ಆವರಿಸುತ್ತಿದ್ದಂತೆ ಮಂಜಿನ ನಗರಿಯಲ್ಲಿ ಕೇಸರಿ ಕಲರವ ಸೃಷ್ಟಿಯಾಯಿತು. ಎಲ್ಲೆಡೆ ರಾಮನಾಮ ಸ್ತುತಿ ಕೇಳಿಬರುತ್ತಿತ್ತು. ಜೈ ರಾಮ, ಜೈ ಆಂಜನೇಯ ಉದ್ಘೋಷ ಮುಗಿಲು ಮುಟ್ಟಿತ್ತು. ಮಹಿಳೆಯರು, ಮಕ್ಕಳಾದಿಯಾಗಿ ರಾಜಬೀದಿಯಲ್ಲಿ ಮೆರವಣಿಗೆ ನಡೆಸಿದರು. ಆಕರ್ಷಕ ಮಂಟಪ, ಸ್ತಬ್ಧಚಿತ್ರಗಳು, ಕಲಾತಂಡಗಳು ಮೆರವಣಿಗೆಗೆ ಮತ್ತಷ್ಟು ಮೆರುಗು ನೀಡಿದವು.
ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ರಾಮನವಮಿ ಅಂಗವಾಗಿ ಶ್ರೀ ಕೋದಂಡ ರಾಮ ದೇವಾಲಯದ ರಾಮೋತ್ಸವ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ರಾಮೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.
ಮೊದಲು ಮಲ್ಲಿಕಾರ್ಜುನ ನಗರದ ಕೋದಂಡರಾಮ ದೇವಾಲಯದಲ್ಲಿ ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿಸಿ ಸಮಿತಿ ಅಧ್ಯಕ್ಷ ಕೆ.ಎಂ.ಬಿ. ಗಣೇಶ್ ಕೊಡುಗೆಯಾಗಿ ನೀಡಿದ ಪಲ್ಲಕ್ಕಿಯಲ್ಲಿ ಕೋದಂಡ ರಾಮ ಪರಿವಾರದ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಮೆರವಣಿಗೆ ನಡೆಸಿ ಗಾಂಧಿ ಮೈದಾನಕ್ಕೆ ತರಲಾಯಿತು.
ಗಾಂಧಿ ಮೈದಾನದಿಂದ ಸಂಜೆ ೬.೩೦ಕ್ಕೆ ಆರಂಭಗೊAಡ ಶೋಭಾಯಾತ್ರೆಗೆ ಸಮಾಜಸೇವಕ ಕೋಚಮಂಡ ಬೋಪಣ್ಣ, ಮಾನವ ಹಕ್ಕು ಹಾಗೂ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ರಾಜ್ಯಾಧ್ಯಕ್ಷ ಅವರೆಮಾದಂಡ ಶರಣ್ ಪೂಣಚ್ಚ, ರಾಮೋತ್ಸವ ಸಮಿತಿ ಅಧ್ಯಕ್ಷ ಕೆ.ಎಂ.ಬಿ. ಗಣೇಶ್, ನಗರಸಭಾ ಅಧ್ಯಕ್ಷೆ ಪಿ. ಕಲಾವತಿ, ಕೋದಂಡರಾಮ ದೇವಾಲಯ ಟ್ರಸ್ಟ್ ಪ್ರಧಾನ ಸಲಹೆಗಾರ ಜಿ. ರಾಜೇಂದ್ರ, ಪ್ರಮುಖರಾದ ಬಿ.ಜಿ. ಅನಂತಶಯನ, ಜಯಂತಿ ಶೆಟ್ಟಿ, ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚುಮ್ಮಿ ದೇವಯ್ಯ ಸೇರಿದಂತೆ ಇನ್ನಿತರರು ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು.
ಮೇಳೈಸಿದ ಸಾಂಸ್ಕೃತಿಕ ವೈಭವ
ನಗರದ ಗಾಂಧಿ ಮೈದಾನದಲ್ಲಿ ಜಮಾಯಿಸಿದ ಸಾರ್ವಜನಿಕರು ಆಕರ್ಷಕ ಶೋಭಾಯಾತ್ರೆಯಲ್ಲಿ ಪಾಲ್ಗೊಂಡರು. ವೈವಿಧ್ಯಮಯ ಕಲಾತಂಡಗಳಿAದ ಸಾಂಸ್ಕೃತಿಕ ಕಾರ್ಯಕ್ರಮಗಳು ಮೆರವಣಿಗೆಯಲ್ಲಿ ಮೇಳೈಸಿದವು.
ಆರಂಭದಲ್ಲಿ ಕಳಸಹೊತ್ತ ಮಹಿಳೆಯರು ಮುನ್ನಡೆದರೆ, ಅವರ ಹಿಂಬದಿಯಲ್ಲಿ ಮಡಿಕೇರಿಯ ಶ್ರೀ ರಾಮಾಂಜನೇಯ ಭಜನಾ ಮಂಡಳಿ, ಕತ್ತಲೆಕಾಡು ಗ್ರಾಮದ ವಿನಾಯಕ ಸೇವಾ ಟ್ರಸ್ಟ್ ಭಜನಾ ತಂಡದಿAದ ರಾಮ ಸಂಕೀರ್ತನೆ, ವೀರಾಜಪೇಟೆ ನಾಟ್ಯಾಂಜಲಿ ತಂಡದ ೬೦ ವಿದ್ಯಾರ್ಥಿಗಳಿಂದ ಭಜನಾ ಕುಣಿತ, ಚಾಮರಾಜನಗರದ ಬಾಲು ಮತ್ತು ತಂಡದಿAದ ಕೀಲು ಕುದುರೆ ಕುಣಿತ, ಕೇರಳದ ವಯನಾಡಿನ ಶಿವಪಯ್ಯ ತಂಡದಿAದ ಅಮ್ಮಕೊಡ ನೃತ್ಯ, ಕ್ಯಾಲಿಕಟ್ನ ತಂಡವೊAದರಿAದ ಪಂಚ ದೇವರ ಕೇರಳ ಥೈಯಂ, ಚಂಡೆವಾದ್ಯ ಮೇಳ, ಬಾಗಲಕೋಟೆಯ ಮಾಳಿಂಗರಾಯ ತಂಡದಿAದ ಡೊಳ್ಳು ಕುಣಿತ, ಗೊಂಬೆ ಕುಣಿತ, ಸುಳ್ಯದ ತಂಡದಿAದ ಹುಲಿ ಕುಣಿತ ಇವುಗಳು ಮೆರವಣಿಗೆಯ ಮೆರುಗನ್ನು ಹೆಚ್ಚಿಸಿದವು.
ರಾಜಬೀದಿಯಲ್ಲಿ ಮೆರವಣಿಗೆ
ಗಾಂಧಿ ಮೈದಾನದಿಂದ ಮಂಗೇರಿರ ಮುತ್ತಣ್ಣ ವೃತ್ತದ ಮೂಲಕ ಚೌಕಿ ಮಾರ್ಗವಾಗಿ ಮಹದೇವಪೇಟೆಗೆ ತೆರಳಿ, ಬನ್ನಿ ಮಂಟಪದಿAದ ಕೋದಂಡ ರಾಮ ದೇವಾಲಯ ತನಕ ೪ಐದನೇ ಪುಟಕ್ಕೆ
೪ಐದನೇ ಪುಟಕ್ಕೆ ನಡೆದ ಶೋಭಾಯಾತ್ರೆ ರಾಮೋತ್ಸವ ಸಂಭ್ರಮವನ್ನು ಇಮ್ಮಡಿಗೊಳಿಸಿತು.
ಉತ್ಸವ ಮೂರ್ತಿಗಳನ್ನು ಪಲ್ಲಕ್ಕಿಯಲ್ಲಿಟ್ಟು ಅದನ್ನು ವ್ರತಧಾರಿಗಳು ಹೊತ್ತು ಸಾಗಿದರು. ಕೇಸರಿ ಶಾಲು, ಪೇಟ ಧರಿಸಿ, ಕೈಯಲ್ಲಿ ಕೇಸರಿ ಧ್ವಜ ಹಿಡಿದು ಸಾರ್ವಜನಿಕರು ರಾಜಬೀದಿಯಲ್ಲಿ ಹೆಜ್ಜೆಹಾಕಿದರು. ಮೆರವಣಿಗೆಯ ಅಲ್ಲಲ್ಲಿ ಆಕರ್ಷಕ ಸಿಡಿಮದ್ದಿನ ಪ್ರದರ್ಶನ ಬಾನೆತ್ತರದಲ್ಲಿ ಬೆಳಕಿನ ರಂಗವಲ್ಲಿ ಮೂಡಿಸಿತು. ರಾಮ, ಆಂಜನೇಯ ಘೋಷಣೆಗಳೊಂದಿಗೆ ಮೆರವಣಿಗೆ ಅತ್ಯಂತ ಶಿಸ್ತುಬದ್ಧ ಹಾಗೂ ಯಶಸ್ವಿಯಾಗಿ ನಡೆಯಿತು.
ಓಂಕಾರ್ ತಂಡದಿAದ ಶ್ರೀ ರಾಮ ವಿಗ್ರಹ ಹಾಗೂ ಪ್ರಭಾವಳಿ ಹೊತ್ತ ಮಂಟಪ, ಕೋದಂಡರಾಮ ದೇವಾಲಯದ ರಾಮ ಮತ್ತು ಬೃಹತ್ ಎತ್ತರದ ಆಂಜನೇಯ ಮೂರ್ತಿಗಳ ಸ್ತಬ್ಧಚಿತ್ರ, ಕೋಟೆ ಮಹಾಗಣಪತಿ ತಂಡದ ಚಾಮುಂಡೇಶ್ವರಿ ಮೂರ್ತಿಯ ಮಂಟಪ ಭಕ್ತಿಯ ಅಲೆ ಎಬ್ಬಿಸಿತು.
ಮೆರವಣಿಗೆ ಹಿನ್ನೆಲೆ ಕೆಲಕಾಲ ಸಂಚಾರ ದಟ್ಟಣೆ ಏರ್ಪಟ್ಟರೂ ಸಂಚಾರಿ ಪೊಲೀಸರು ಒಂದು ಬದಿಯಲ್ಲಿ ಹಾಗೂ ಪರ್ಯಾಯ ರಸ್ತೆಯಲ್ಲಿ ವಾಹನಗಳ ಓಡಾಟಕ್ಕೆ ಅನುವು ಮಾಡಿಕೊಟ್ಟರು. ರಸ್ತೆಯ ಇಕ್ಕೆಲಗಳಲ್ಲಿ ನಿಂತು ಜನರು ಶೋಭಾಯಾತ್ರೆಯನ್ನು ಕಣ್ತುಂಬಿಕೊAಡರು. ರಾಮೋತ್ಸವ ಅಂಗವಾಗಿ ಕೋದಂಡರಾಮ ದೇವಾಲಯದಲ್ಲಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಡಿವೈಎಸ್ಪಿ ಸೂರಜ್, ವೃತ್ತ ನಿರೀಕ್ಷಕ ಪಿ.ಕೆ. ರಾಜು, ಠಾಣಾಧಿಕಾರಿ ಅನ್ನಪೂರ್ಣ ನೇತೃತ್ವದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಸಂಭ್ರಮಿಸಿದ ಮಹಿಳೆಯರು
ಮೆರವಣಿಗೆಯಲ್ಲಿ ವಿಶೇಷವಾಗಿ ಮಹಿಳೆಯರು ಭಕ್ತಿಗೀತೆಗಳಿಗೆ ತಾಳಹಾಕುತ್ತಾ ರಸ್ತೆಯಲ್ಲಿ ಕುಣಿಯುತ್ತ ಸಂಭ್ರಮಿಸಿದ್ದು, ವಿಶೇಷವಾಗಿತ್ತು.