ಕೂಡಿಗೆ, ಮಾ. ೨೬: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭುವನಗಿರಿ ಗ್ರಾಮದಲ್ಲಿರುವ ಕುಶಾಲನಗರದ ಪುರಸಭೆಯ ಕಸ ವಿಲೇವಾರಿ ಘಟಕದಲ್ಲಿ ರೂ೩.೫೦ ಕೋಟಿ ವೆಚ್ಚದಲ್ಲಿ ಪಾರಂಪರಿಕ ಕಸ ವಿಲೇವಾರಿಗೆ ಟೆಂಡರ್ ಪಡೆದ ಟೆಂಡರ್ದಾರರು ನೂತನ ಯಂತ್ರಗಳ ಮೂಲಕ ಕಸ ವಿಲೇವಾರಿ ಕಾರ್ಯವನ್ನು ಪ್ರಾಯೋಗಿಕವಾಗಿ ಆರಂಭಿಸಿದ್ದಾರೆ.
ಕಳೆದ ೧೫ ವರ್ಷಗಳಿಂದಲೂ ಕಸ ವಿಲೇವಾರಿ ಘಟಕದಿಂದ ಸುತ್ತಮುತ್ತಲಿನ ಪ್ರದೇಶಗಳ ಗ್ರಾಮಸ್ಥರಿಗೆ ದುರ್ವಾಸನೆಯಿಂದಾಗಿ ಸಮಸ್ಯೆಗಳಾಗುತ್ತಿದ್ದು, ಅನೇಕ ಬಾರಿ ಗ್ರಾಮಸ್ಥರು ಪುರಸಭೆ ಅಧಿಕಾರಿ ವರ್ಗದವರಿಗೆ ಮನವಿ ಸಲ್ಲಿಸಿ ಸಮಸ್ಯೆ ಪರಿಹಾರಕ್ಕೆ ಮನವಿ ಮಾಡಿದ್ದರು.
ಈ ಸಾಲಿನಲ್ಲಿ ಸ್ವಚ್ಛ ಭಾರತ್ ಯೋಜನೆ ಅಡಿ ಘಟಕದ ಕೇಂದ್ರದಲ್ಲಿ ನೂತನ ಯಂತ್ರಗಳು ಬಳಕೆಯ ಮೂಲಕ ಕಸ ವಿಲೇವಾರಿ ತ್ವರಿತಗೊಳಿಸಲು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂಥರ್ ಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದ್ದರು.
ಕುಶಾಲನಗರ ಪುರಸಭೆ ಮುಖ್ಯಾಧಿಕಾರಿ ಗಿರೀಶ್ ಕುಮಾರ್ ಮತ್ತು ಆರೋಗ್ಯ ಅಧಿಕಾರಿ ಉದಯ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಪಾರಂಪರಿಕ ಕಸ ವಿಲೇವಾರಿ ಕಾಮಗಾರಿಯು ಟೆಂಡರ್ದಾರರಿAದ ಇದೀಗ ನಡೆಯುತ್ತಿದೆ.
ಅಲ್ಲದೆ ರೂ.೭೫ ಲಕ್ಷ ವೆಚ್ಚದ ೪ ನೂತನ ಕಸ ವಿಲೇವಾರಿ ಯಂತ್ರಗಳು, ಮತ್ತು ರೂ.೩೩ ಲಕ್ಷ ವೆಚ್ಚದಲ್ಲಿ ಅದಕ್ಕೆ ಸಂಬAಧಿಸಿದ ಕಸ ಜಾರಣಿ, ಹಸಿಕಸ, ಒಣಕಸ ಮತ್ತು ಪ್ಲಾಸ್ಟಿಕ್ಗಳು ಬೇರೆ ಬೇರೆ ವಿಭಾಗಗಳಾಗಿ ಬೇರ್ಪಡಲು ಹಲವಾರು ಯಂತ್ರಗಳ ಅಳವಡಿಕೆ ನಡೆದಿದೆ. ಯಾವುದೇ ರೀತಿಯ ದುರ್ವಾಸನೆ ಬಾರದ ಹಾಗೆ ವಿವಿಧ ಯಂತ್ರಗಳ ಅಳವಡಿಕೆಯ ಕಾರ್ಯವು ಕಸಿ ವಿಲೇವಾರಿ ಘಟಕದಲ್ಲಿ ನಡೆಯುತ್ತಿದೆ.
ಇದರ ಜೊತೆಯಲ್ಲಿ ಜಿಲ್ಲಾಧಿಕಾರಿಗಳ ಕಛೇರಿಯ ಮುಖೇನ ಜಿಲ್ಲಾ ನಗರಾಭಿವೃದ್ಧಿ ಕೋಶದ ಮೂಲಕ ಮಡಿಕೇರಿ, ವೀರಾಜಪೇಟೆ, ಕುಶಾಲನಗರ ಕಸ ವಿಲೇವಾರಿ ಘಟಕದಲ್ಲಿರುವ ಹಳೆ ಕಸವನ್ನು ತೆಗೆದು ಬೇರೆಡೆಗೆ ಸ್ಥಳಾಂತರಿಸುವ ಮತ್ತು ಅದರಲ್ಲಿರುವ ಹಸಿ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಮತ್ತು ಒಣ ಕಸವನ್ನು ಬೇರ್ಪಡಿಸುವುದು ಸೇರಿದಂತೆ ಘಟಕದ ತಡೆಗೋಡೆ ಎತ್ತರ ಹೆಚ್ಚಿಸುವಿಕೆ, ಉತ್ತಮವಾದ ರಸ್ತೆಯ ವ್ಯವಸ್ಥೆ, ವಿವಿಧ ಕಟ್ಟಡಗಳ ಅಭಿವೃದ್ಧಿಗೆ ಪೂರಕವಾಗುವಂತೆ ರೂ.೧೨ ಕೋಟಿ ವೆಚ್ಚದ ಕಾಮಗಾರಿಯ ಟೆಂಡರ್ ಪ್ರಕ್ರಿಯೆಯು ನಡೆದಿದ್ದು, ಭುವನಗಿರಿ ಕಸ ವಿಲೇವಾರಿ ಘಟಕಗಳ ಕೇಂದ್ರದಲ್ಲಿಯೂ ಕಾಮಗಾರಿಯು ಆರಂಭಗೊAಡಿದೆ. ಮೊದಲ ಹಂತವಾಗಿ ಹಸಿ ಕಸವನ್ನು ಪುಡಿ ಮಾಡುವ ಯಂತ್ರಗಳಿಗೆ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿದೆ, ಇದಕ್ಕೆ ಸಂಬAಧಿಸಿದAತೆ ಕುಶಾಲನಗರ ಪುರಸಭೆಯ ಕಾರ್ಮಿಕ ವೃಂದದವರಿಗೆ ಅದಕ್ಕೆ ಸಂಬAಧಿಸಿದ ತರಬೇತಿಯನ್ನು ಬೆಂಗಳೂರು ಸೇರಿದಂತೆ ವಿವಿಧೆಡೆಗಳಲ್ಲಿ ನೀಡಲಾಗಿದೆ.
ಟೆಂಡರ್ ಪಡೆದಿರುವ ಗುತ್ತಿಗೆದಾರ ಹಳೆಯ ಕಸವನ್ನು ಸಂಪೂರ್ಣವಾಗಿ ಘಟಕದಿಂದ ತೆಗೆದು ಅದರಲ್ಲಿರುವ ಪ್ಲಾಸ್ಟಿಕ್, ಒಣ ಕಸ ಸೇರಿದಂತೆ ಬೇರೆ ಬೇರೆ ಹಂತಗಳಲ್ಲಿ ವಿಭಾಗ ಮಾಡಿ ಸಿಮೆಂಟ್ ಕಾರ್ಖಾನೆಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದಾರೆ ಎಂದು ಆರೋಗ್ಯ ಅಧಿಕಾರಿ ಉದಯ್ ಕುಮಾರ್ ತಿಳಿಸಿದ್ದಾರೆ.
ಇದರ ಜೊತೆಯಲ್ಲಿ ಕುಶಾಲನಗರ ರೋಟರಿ ಕ್ಲಬ್ನ ೫೦ ವರ್ಷದ ಸಂಭ್ರಮ ಆಚರಣೆ ಅಂಗವಾಗಿ ಕೂಡ್ಲೂರು ಕೈಗಾರಿಕಾ ಕೇಂದ್ರದಲ್ಲಿರುವ ಎಸ್.ಎಲ್.ಎನ್ ಘಟಕದ ಸಿ.ಎಸ್.ಆರ್ ಸಾರ್ವಜನಿಕ ಸೇವಾ ನಿಧಿಯ ಹಣ ರೂ.೨೦ ಲಕ್ಷ ವೆಚ್ಚದಲ್ಲಿ ಘಟಕದ ಕೇಂದ್ರದಲ್ಲಿ ಹಸಿ ಕಸವನ್ನು ಗೊಬ್ಬರವಾಗಿ ಪರಿವರ್ತಿಸಲು ಅನುಕೂಲ ಕಲ್ಪಿಸುವ ಹಿತದೃಷ್ಟಿಯಿಂದ ಕೂಡ ಯಂತ್ರವನ್ನು ಅಳವಡಿಕೆ ಮಾಡಲಾಗಿದೆ.
ನೂತನ ತಂತ್ರಜ್ಞಾನದ ಯಂತ್ರಗಳ ಅಳವಡಿಕೆ ಮೂಲಕ ಸಮರ್ಪಕವಾಗಿ ಕಸ ವಿಲೇವಾರಿ ಮತ್ತು ಯಾವುದೇ ರೀತಿಯಲ್ಲಿ ಸ್ಥಳೀಯರಿಗೆ ಅನಾನುಕೂಲಗಳು ಆಗದಂತೆ ಪುರಸಭೆಯ ವತಿಯಿಂದ ಸಮಗ್ರವಾದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಪುರಸಭೆಯ ಮುಖ್ಯಾಧಿಕಾರಿ ಗಿರೀಶ್ ತಿಳಿಸಿದ್ದಾರೆ.
ಕೆ.ಕೆ. ನಾಗರಾಜಶೆಟ್ಟಿ