ಮಡಿಕೇರಿ, ಮಾ. ೨೬: ೨೬ನೆಯ ವರ್ಷದ ಕೊಡವ ಕೌಟುಂಬಿಕ ಹಾಕಿ ಉತ್ಸವಕ್ಕೆ ೩೮೨ ಕುಟುಂಬ ತಂಡಗಳು ಹೆಸರು ನೋಂದಾಯಿಸಿಕೊAಡಿವೆ. ಹಾಕಿ ನಮ್ಮೆ ಶುಭಾರಂಭಕ್ಕೆ ಇನ್ನು ಕೇವಲ ೧೦ ದಿನಗಳು ಮಾತ್ರ ಬಾಕಿ ಉಳಿದಿದ್ದು, ಈ ಬಾರಿಯ ಚೇನಂಡ ಕಪ್‌ಗೆ ನಾಪೋಕ್ಲು ಪಟ್ಟಣ ಸಜ್ಜುಗೊಳ್ಳುತ್ತಿದೆ. ತಂಡಗಳ ನೋಂದಣಿ ಬಹುತೇಕ ಪೂರ್ಣಗೊಂಡಿದ್ದು, ಟೈಸ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಮಹಿಳಾ ಹಾಕಿಗೆ ೫೦ಕ್ಕೂ ಅಧಿಕ ತಂಡಗಳ ನೋಂದಣಿಯಾಗಿದೆ. ಮಹಿಳಾ ಹಾಕಿ ತಂಡಗಳ ನೋಂದಣಿಗೆ ಇನ್ನಷ್ಟು ಕಾಲಾವಕಾಶವಿರುವುದರಿಂದ ನೋಂದಣಿ ಪ್ರಕ್ರಿಯೆ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಇನ್ನೂ ಪ್ರಗತಿಯಲ್ಲಿದೆ. ಉತ್ಸವ ಜರುಗುವ ಚೆರಿಯಪರಂಬುವಿನ ಜನರಲ್ ತಿಮ್ಮಯ್ಯ ಮುಖ್ಯ ಕ್ರೀಡಾಂಗಣದಲ್ಲಿ ಗ್ಯಾಲರಿ, ವೇದಿಕೆ, ಮಳಿಗೆಗಳು ಇತ್ಯಾದಿ ಕೆಲಸ ಕಾರ್ಯಗಳು ಬಹುತೇಕ ಅಂತಿಮ ಹಂತದಲ್ಲಿದೆ.

ಏ. ೨ ರಿಂದ ತರಬೇತಿ ಶಿಬಿರ

ಚೇನಂಡ ಕಪ್ ಅಂಗವಾಗಿ ಈ ಬಾರಿ ಆಯೋಜಿಸಲಾಗಿದ್ದ ಪ್ರಾಥಮಿಕ ಹಾಗೂ ಪ್ರೌಢಶಾಲಾ ತಂಡಗಳ ಹಾಕಿ ಪಂದ್ಯಾವಳಿ ಮೂಲಕ ಆಯ್ಕೆ ಮಾಡಲಾಗಿರುವ ಯುವ ಪ್ರತಿಭೆಗಳಿಗೆ ಏ. ೨ ರಿಂದ ತರಬೇತಿ ಶಿಬಿರ ಆರಂಭಗೊಳ್ಳಲಿದೆ. ಈ ಮಕ್ಕಳೊಂದಿಗೆ ಆಸಕ್ತಿ ಇರುವ ಇತರರೂ ಪಾಲ್ಗೊಳ್ಳಬಹುದು. ಮಾಹಿತಿಗೆ ವಿಪಿನ್ ಗಣಪತಿ - ೯೦೩೫೧೯೮೪೩೪ ಅವರನ್ನು ಸಂಪರ್ಕಿಸಬಹುದು.