ಮಡಿಕೇರಿ, ಮಾ. ೨೫: ಬೆಟ್ಟಗೇರಿ ಉದಯ ಆಂಗ್ಲ ಮಾಧ್ಯಮ ಶಾಲೆಯ ೧೦ನೇ ತರಗತಿಯ ವಿದ್ಯಾರ್ಥಿಗಳಿಬ್ಬರ ಪ್ರವೇಶಪತ್ರ ವಿಚಾರಕ್ಕೆ ಸಂಬAಧಿಸಿದAತೆ ಶಿಕ್ಷಣ ಇಲಾಖೆಯ ಅಧಿಕಾರಿಗಳ ಮೇಲೆ ಕ್ರಮಕೈಗೊಂಡು ತನಿಖೆ ನಡೆಸಬೇಕು. ಈ ವಿಚಾರದಲ್ಲಿ ಹೋರಾಟಕ್ಕೂ ಸಿದ್ಧವಿರುವುದಾಗಿ ಆಡಳಿತ ಮಂಡಳಿ ತಿಳಿಸಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಅಧ್ಯಕ್ಷ ತಳೂರು ಎ. ಕಿಶೋರ್ ಕುಮಾರ್ ಅವರು, ಬೆಟ್ಟಗೇರಿಯ ಉದಯ ವಿದ್ಯಾಸಂಸ್ಥೆಯ ಇಬ್ಬರು ವಿದ್ಯಾರ್ಥಿಗಳಿಗೆ ೧೦ನೇ ತರಗತಿ ಪರೀಕ್ಷೆ ಬರೆಯಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ರಜೆ ದಿನವಾದ ಭಾನುವಾರ ಖಾಸಗಿ ಹೊಟೇಲ್‌ನಲ್ಲಿ ಪ್ರವೇಶ ಪತ್ರ ನೀಡಿರುವುದು ನಿಯಮಬಾಹಿರ ಕ್ರಮವಾಗಿದ್ದು, ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ದಿನಾಂಕ ೨೨-೦೩-೨೦೨೬ ರ ಭಾನುವಾರ ರಜೆ ದಿನ ಶಾಸಕರ ಸಮ್ಮುಖದಲ್ಲಿ ಖಾಸಗಿ ಹೊಟೇಲ್‌ನಲ್ಲಿ ಮಕ್ಕಳಿಗೆ ಪರೀಕ್ಷೆ ಬರೆಯಲು ಪ್ರವೇಶ ಪತ್ರ ನೀಡಿರುವುದು ಎಷ್ಟು ಸರಿ? ಶಾಸಕರು ಅಧಿಕಾರಿಯನ್ನು ಹಿಡಿತದಲ್ಲಿಟ್ಟುಕೊಂಡು ಕೆಲಸ ಮಾಡಿಸುವ ಬದಲು ಪ್ರವೇಶ ಪತ್ರ ನೀಡುವ ಅಗತ್ಯವೇನಿತ್ತು, ಶಾಸಕರೇ ಪ್ರವೇಶ ಪತ್ರ ನೀಡುವುದಾದರೆ ಸ್ಥಳೀಯ ಉಪನಿರ್ದೆಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕರ್ತವ್ಯ ಏನು ಎಂದು ಪ್ರಶ್ನಿಸಿದ್ದಾರೆ.
ಬೇಜವಾಬ್ದಾರಿ ವರ್ತನೆ ತೋರಿದÀ ಅಧಿಕಾರಿಗಳ ವಿರುದ್ಧ ಸ್ಥಳೀಯ ಶಾಸಕರು ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಶಾಲಾ ಆಡಳಿತ ಮಂಡಳಿ ಆಗ್ರಹಿಸುತ್ತದೆ. ಅಲ್ಲದೆ ಶಿಕ್ಷಣಾಧಿಕಾರಿಗಳ ವಿರುದ್ಧ ಹೋರಾಟಕ್ಕೆ ಆಡಳಿತ ಮಂಡಳಿಯು ಸಜ್ಜಾಗಿದೆ ಎಂದು ತಳೂರು ಎ.ಕಿಶೋರ್ ಕುಮಾರ್ ತಿಳಿಸಿದ್ದಾರೆ.
ಉದಯ ವಿದ್ಯಾಸಂಸ್ಥೆಯು ೧೯೬೬ರಲ್ಲಿ ಪ್ರಾರಂಭವಾಗಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನಡೆಯುತ್ತಿತ್ತು. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾದÀ ಕಾರಣ ಕನ್ನಡ ಮಾಧ್ಯಮವು ಸ್ಥಗಿತಗೊಂಡಿದೆ. ಆದರೆ ಆಂಗ್ಲ ಮಾಧ್ಯಮವು ಎಲ್‌ಕೆಜಿಯಿಂದ ೧೦ನೇ ತರಗತಿವರೆಗೆ ಇಲ್ಲಿಯವರೆಗೂ ವ್ಯವಸ್ಥಿತವಾಗಿ ಉತ್ತಮ ಫಲಿತಾಂಶದೊAದಿಗೆ ನಡೆದುಕೊಂಡು ಬಂದಿದೆ.
ಇದಕ್ಕೆ ಪೂರಕವಾಗಿ ಉದಯ ವಿಧ್ಯಾಸಂಸ್ಥೆಯ ಆಡಳಿತ ಮಂಡಳಿಯ ವತಿಯಿಂದ ಇಲಾಖೆ ಅಧಿಕಾರಿಗಳ ಕಿರುಕುಳದ ವಿರುದ್ಧ ರಾಜ್ಯ ಉಚ್ಚನ್ಯಾಯಾಲಯದಲ್ಲಿ W.P ಓo ೧೮೧೪೧/೨೦೨೪ ರಲ್ಲಿ ಮೊಕದ್ದಮ್ಮೆ ದಾಖಲಿಸಲಾಗಿದ್ದು ನ್ಯಾಯಾಲಯದ ಆದೇಶ ಪ್ರಕಾರ ಸಂಸ್ಥೆಗೆ ತೊಂದರೆ ಕೊಡಬಾರದೆಂದು ಆದೇಶವಾಗಿರುತ್ತದೆ. ಆದರೂ ಸಂಬAಧಿಸಿದ ಶಿಕ್ಷಣ ಅಧಿಕಾರಿಗಳು ಏನೂ ಕ್ರಮ ಕೈಗೊಳ್ಳದಾಗ ಮತ್ತೊಮ್ಮೆ ಶಿಕ್ಷಣ ಇಲಾಖೆಯ ವಿರುದ್ಧ W.P ಓo ೩೩೪೯೩/೨೦೨೪ ರಲ್ಲಿ ಮೊಕದ್ದಮೆ ಹೂಡಿದ್ದು ಮಕ್ಕಳಿಗೆ ಯಾವುದೇ ತೊಂದರೆ ಮಾಡಬಾರದೆಂದು ನ್ಯಾಯಾಲಯವು ಆದೇಶ ನೀಡಿದ್ದು, ಸದರಿ ಆದೇಶದಂತೆ ಅಂದಿನ ಶಿಕ್ಷಣ ಅಧಿಕಾರಿಗಳು ಪೂರಕ ಕ್ರಮಕೈಗೊಂಡಿರುವುದು ಸ್ಪಷ್ಟವಾಗಿರುತ್ತದೆ.
ತದನಂತರ ಆಗಿಂದ್ದಾಗೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೆಶಕರು ಮತ್ತು ಕ್ಷೇತ್ರ ಶಿಕ್ಷಣ ಅಧಿಕಾರಿಗಳು ಉದ್ದೇಶ ಪೂರಕವಾಗಿ ನಿರಾಕರಣೆ ಮಾಡಿರುವುದರ ಬಗ್ಗೆ W.P ಓo ೮೫೦೬/೨೦೨೬ ರ ಪ್ರಕಾರ ಸಂಬAಧಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಮೇಲೆ ಮೊಕÀÀದ್ದಮ್ಮೆ ಹೂಡಿದ್ದು, ಆ ಆದೇಶದ ಪ್ರಕಾರ ಸಂಬAಧಿಸಿದ ೧೭ ವಿಧ್ಯಾರ್ಥಿಗಳಿಗೂ ಪರೀಕ್ಷೆ ಬರೆಯಲು ಅವಕಾಶ ಮಾಡಲು ರಾಜ್ಯ ಉಚ್ಚನ್ಯಾಯಾಲಯವು ಆದೇಶ ನೀಡಿದ್ದರೂ ಸಂಬAಧಿಸಿದ ಉಪನಿರ್ದೆಶಕರು ಮತ್ತು ಕ್ಷೇತ್ರ ಶಿಕ್ಷಣ ಅಧಿಕಾರಿಗಳು ನಿರ್ಲಕ್ಷö್ಯ ಮಾಡಿರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
೧೭ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ರಾಜ್ಯ ಉಚ್ಚನ್ಯಾಯಾಲಯವು ಆದೇಶ ನೀಡಿದ್ದರೂ, ಇಬ್ಬರು ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ನೀಡದೆ ನಿರಾಕರಣೆ ಮಾಡಿದ್ದು, ಇದು ಉಚ್ಚನ್ಯಾಯಾಲಯದ ಆದೇಶದ ಉಲ್ಲಂಘನೆಯಾಗಿದೆ.
ಈ ಬಗ್ಗೆ ಮೊಕದ್ದಮ್ಮೆಯನ್ನು ಹೂಡಲಾಗುವುದು, ಅಲ್ಲದೆ W.P ಓo ೩೩೪೯೩/೨೦೨೪ ರಲ್ಲಿ ಉಚ್ಚನ್ಯಾಯಾಲಯದ ಆದೇಶವು ಇತ್ಯಾರ್ಥವಾಗದೇ ಉಳಿದಿದ್ದು, ಸಂಬAಧಿಸಿದ ಶಿಕ್ಷಣ ಅಧಿಕಾರಿಗಳು ರಾಜಕೀಯ ಮಾಡಿರುವುದನ್ನು ಆಡಳಿತ ಮಂಡಳಿ ಖಂಡಿಸುತ್ತದೆ ಎಂದು ತಳೂರು ಎ.ಕಿಶೋರ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.