ಸೋಮವಾರಪೇಟೆ, ಮಾ. ೨೪: ಪ್ರಸಕ್ತ ವರ್ಷದ ರಾಮನವಮಿ ಉತ್ಸವ ಆಚರಣೆಗೆ ಸೋಮವಾರಪೇಟೆಯಲ್ಲಿ ಭರದ ಸಿದ್ಧತೆಗಳು ನಡೆಯುತ್ತಿವೆ. ಪಟ್ಟಣವನ್ನು ಕೇಸರಿ ಬಂಟಿAಗ್ಸ್ಗಳಿAದ ಅಲಂಕರಿಸಲಾಗಿದೆ.

ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ತಾ. ೨೭ರ ಸಂಜೆ ಸ್ತಬ್ಧಚಿತ್ರಗಳ ಶೋಭಾಯಾತ್ರೆ ನಡೆಯಲಿದ್ದು, ಗ್ರಾಮ ಸಮಿತಿ, ಯುವಕ ಸಂಘಗಳು ಸ್ತಬ್ಧಚಿತ್ರಗಳ ತಯಾರಿಯಲ್ಲಿ ನಿರತವಾಗಿವೆ. ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಪುಟ್ಟಪ್ಪ ವೃತ್ತವನ್ನು ಕೇಸರಿ ಬಂಟಿAಗ್ಸ್ಗಳಿAದ ಸಿಂಗರಿಸಲಾಗಿದೆ. ಇಲ್ಲಿನ ಶ್ರೀ ಆಂಜನೇಯಸ್ವಾಮಿ ದೇವಾಲಯ ಸಮಿತಿ ವತಿಯಿಂದ ತಾ.೨೭ರಂದು ಶ್ರೀ ರಾಮನವಮಿ ಉತ್ಸವ ಆಚರಿಸಲಾಗುತ್ತಿದ್ದು, ಈ ಪ್ರಯುಕ್ತ ಪ್ರತಿ ದಿನ ವಿಶೇಷ ಅಲಂಕಾರ, ಪೂಜೆಗಳು ನಡೆಯುತ್ತಿವೆ. ಶ್ರೀರಾಮನ ಉತ್ಸವ ಮೂರ್ತಿಗೆ ಶ್ರೀಗಂಧ, ವೀಳ್ಯದೆಲೆ, ಬೆಣ್ಣೆ, ಕೇಸರಿ, ತುಳಸಿ, ಕುಂಕುಮ, ಹೂವಿನ ಮತ್ತು ಮುತ್ತಿನ ಆಲಂಕಾರ ಮಾಡಿ ಪೂಜೆ ಸಲ್ಲಿಸಲಾಗುತ್ತಿದೆ. ತಾ. ೨೭ ರ ಸಂಜೆ ೬ ಗಂಟೆಯಿAದ ಶ್ರೀರಾಮಾಂಜನೇಯೋತ್ಸವ ಮೆರವಣಿಗೆ ಪಟ್ಟಣದಲ್ಲಿ ನಡೆಯಲಿದೆ ಎಂದು ದೇವಾಲಯ ಸಮಿತಿಯ ಅಧ್ಯಕ್ಷ ಬನ್ನಳ್ಳಿ ಗೋಪಾಲ್ ತಿಳಿಸಿದ್ದಾರೆ. ಕಳೆದ ೬೦ ವರ್ಷಗಳಿಂದಲೂ ಅಂಜನೇಯ ದೇವಾಲಯದಲ್ಲಿ ರಾಮನವಮಿ ಆಚರಿಸಿಕೊಂಡು ಬರಲಾಗುತ್ತಿದೆ. ಸಂಜೆ ಪಟ್ಟಣದಲ್ಲಿ ಉತ್ಸವ ಮೂರ್ತಿಯ ಮೆರವಣಿಗೆ ನಡೆಯುತ್ತದೆ. ತಾ. ೨೭ರಂದು ಪಾನಕ ವಿತರಣೆ, ಅನ್ನದಾನ ನಡೆಯಲಿದೆ. ಈಗಾಗಲೇ ಅಂದಾಜು ೪.೫೦ ಕೋಟಿ ರೂ.ಗಳ ವೆಚ್ಚದಲ್ಲಿ ಆಂಜನೇಯ ದೇವಾಲಯ ನಿರ್ಮಾಣವಾಗುತ್ತಿದ್ದು, ಪ್ರಸ್ತುತ ಶೇ.೭೦ರಷ್ಟು ಕೆಲಸಗಳು ಮುಗಿದಿವೆ ಎಂದು ದೇವಾಲಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸೀತಾರಾಮ್ ಮಾಹಿತಿ ನೀಡಿದ್ದಾರೆ. ದೇವಾಲಯ ನಿರ್ಮಾಣಕ್ಕೆ ಆನೇಕ ದಾನಿಗಳು ಧನಸಹಾಯ ಮಾಡಿದ್ದಾರೆ. ದೇವಾಲಯ ಪೂರ್ಣಗೊಳ್ಳಲು ಒಂದು ಕೋಟಿ ರೂ.ಗಳಷ್ಟು ಕಾಮಗಾರಿ ನಡೆಯಬೇಕಿದೆ. ಆದಷ್ಟು ಶೀಘ್ರವಾಗಿ ದೇವಾಲಯವನ್ನು ಲೋಕಾರ್ಪಣೆಗೊಳಿಸಲು ಸಮಿತಿ ಕಾರ್ಯೋನ್ಮುಖವಾಗಿದೆ ಎಂದು ಪ್ರಮುಖರು ತಿಳಿಸಿದ್ದಾರೆ.