ಮಡಿಕೇರಿ ಮಾ. ೨೪: ಥೈಲ್ಯಾಂಡ್‌ನ ರಚ್ಚುಪುರಿ ಸ್ಟೇಡಿಯಂನಲ್ಲಿ ಇತ್ತೀಚೆಗೆ ನಡೆದ ಅಂತರರಾಷ್ಟಿçÃಯ ಮಟ್ಟದ ೩೦ನೇ ಥೈಲ್ಯಾಂಡ್ ಮಾಸ್ಟರ್ಸ್ ಅಥ್ಲೆಟಿಕ್‌ನಲ್ಲಿ ೬೦ರ ವಯೋಮಿತಿಯ ವಿಭಾಗದಲ್ಲಿ ಮಡಿಕೇರಿಯ ನಿವೃತ್ತ ಶುಶ್ರೂಷಕಿ ಅಧೀಕ್ಷಕಿ ಬಂಗಾಡುಮನೆ ವಸಂತಿ ಅವರು ೧ ಚಿನ್ನ ಮತ್ತು ೧ ಬೆಳ್ಳಿಯ ಪದಕವನ್ನು ಪಡೆದುಕೊಂಡಿದ್ದಾರೆ.
ಭಾರತ, ಫಿಲಿಫೈನ್ಸ್, ಯುಎಸ್‌ಎ, ನೆದರ್‌ಲ್ಯಾಂಡ್, ಇಸ್ರೇಲ್, ಮಲೇಶಿಯಾ, ಸಿಂಗಾಪುರ್, ಶ್ರೀಲಂಕಾ, ಥೈಲ್ಯಾಂಡ್ ಸೇರಿದಂತೆ ೧೦ ದೇಶಗಳ ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.