ವಿಶೇಷ ವರದಿ: ಹೆಚ್.ಕೆ. ಜಗದೀಶ್
ಗೋಣಿಕೊಪ್ಪಲು, ಮಾ. ೨೨ : ವಾಣಿಜ್ಯ ನಗರ ಗೋಣಿಕೊಪ್ಪ ದಿನೇ ದಿನೇ ಬೆಳೆಯುತ್ತಿದೆ. ವಿವಿಧ ಬಡಾವಣೆಗಳು ತಲೆಎತ್ತುತ್ತಿವೆ. ನಗರದಲ್ಲಿ ದೊಡ್ಡ ದೊಡ್ಡ ಕಟ್ಟಡಗಳು, ಹೊಟೇಲ್ಗಳು, ಮಾಲ್ಗಳು ಕೂಡ ಕೆಲಸ ನಿರ್ವಹಿಸುತ್ತಿವೆ. ಬಹುತೇಕ ಜನರು ಗೋಣಿಕೊಪ್ಪ ನಗರಕ್ಕೆ ವಿವಿಧ ಭಾಗದಿಂದ ಆಗಮಿಸುತ್ತಿದ್ದಾರೆ. ಇದರಿಂದಾಗಿ ನಗರದಲ್ಲಿ ಪ್ರತಿನಿತ್ಯ ಕಸಗಳು ಹೆಚ್ಚು ಹೆಚ್ಚು ಸಂಗ್ರಹವಾಗುತ್ತಿವೆ. ಕಳೆದೆರಡು ತಿಂಗಳಿನಿAದ ಸಂಗ್ರಹವಾಗಿರುವ ಕಸಗಳು ಬೇರೆಡೆಗೆ ಸಾಗಾಟವಾಗುತ್ತಿಲ್ಲ. ಬದಲಾಗಿ ಗೋಣಿಕೊಪ್ಪ ಮೈಸೂರು ಮುಖ್ಯರಸ್ತೆಯ ಹರಿಶ್ಚಂದ್ರಪುರದ ರಸ್ತೆ ಬದಿಯಲ್ಲಿ ಗೋಣಿಕೊಪ್ಪ ಗ್ರಾಮ ಪಂಚಾಯಿತಿಯ ಕಸದ ರಾಶಿಯನ್ನು ಗುಡ್ಡದ ರೂಪದಲ್ಲಿ ಸಂಗ್ರಹಿಸಿಡಲಾಗಿದೆ.
ಜನನಿಬಿಡ ಪ್ರದೇಶ ಪಟ್ಟಣದ ಅನತಿ ದೂರದಲ್ಲಿರುವ ೩ನೇ ವಾರ್ಡಿನ ಸೇತುವೆ ಬಳಿಯಲ್ಲಿಯೂ ಕಸದ ರಾಶಿ ಸಂಗ್ರಹವಾಗಿದೆ. ಪ್ರತಿನಿತ್ಯ ನಗರದಲ್ಲಿ ಸಂಗ್ರಹವಾಗುವ ಕಸದ ರಾಶಿಯನ್ನು ಚೀಲದಲ್ಲಿ ತುಂಬಿ ಇಡಲಾಗುತ್ತಿದೆ. ಕಸದರಾಶಿಗಳು ಇದೀಗ ತುಂಬಿಹೋಗಿದ್ದು, ವಿಪರೀತ ಗಾಳಿಗೆ ಚೆಲ್ಲಾಡುತ್ತಿವೆ. ಸಂಗ್ರಹವಾಗಿರುವ ಕಸವನ್ನು ಸಾಗಾಟ ಮಾಡಲು ಟೆಂಡರ್ ಆಗಿದ್ದರೂ ಸಂಗ್ರಹವಾಗಿರುವ ಕಸವನ್ನು ಸಾಗಿಸಲು ಗುತ್ತಿಗೆದಾರರು ಆಸಕ್ತಿ ತೋರದಿರುವುದು ಕಂಡುಬAದಿದೆ.
ಕಳೆದ ೨ ತಿಂಗಳ ಹಿಂದೆ ಕಸದ ರಾಶಿಗಳು ನಗರದಲ್ಲಿ ಕಂಡು ಬರುತ್ತಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ ಆಡಳಿತ ವ್ಯವಸ್ಥೆಯ ಇಚ್ಚಾಶಕ್ತಿಯ ಕೊರತೆಯಿಂದ ಪರಸ್ಪರ ಹೊಂದಾಣಿಕೆ ಇಲ್ಲದಿರುವುದು ಕಸದ ರಾಶಿಗೆ ಮುಕ್ತಿ ಸಿಗುತ್ತಿಲ್ಲ ಎಂದು ಹೇಳಲಾಗುತ್ತಿದೆ. ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷರ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ನಡುವೆ ಕಳೆದ ಹಲವಾರು ತಿಂಗಳಿನಿAದ ಶೀತಲ ಸಮರ ಮುಂದುವರೆಯುತ್ತಿದ್ದು, ಕಸದ ರಾಶಿಗೂ ಇದೇ ಸಮಸ್ಯೆ ಎನ್ನಲಾಗುತ್ತಿದೆ.
ಪ್ರತಿನಿತ್ಯ ಪೌರ ಕಾರ್ಮಿಕರು ಒಣ ಕಸಗಳನ್ನು ವಿಂಗಡಣೆ ಮಾಡುವ ಮೂಲಕ, ಚೀಲಗಳಲ್ಲಿ ಸಂಗ್ರಹಿಸಿ ಇಡುತ್ತಿದ್ದಾರೆ. ಕೆಲವು ಚೀಲಗಳಲ್ಲಿ ಹಸಿ ಕಸಗಳು ಮಿಶ್ರಿತಗೊಂಡು ಅವುಗಳನ್ನು ಬೀದಿ ನಾಯಿಗಳು ಎಳೆದು ರಸ್ತೆಯಲ್ಲಿ ಹರಡುತ್ತಿವೆ. ಇದರಿಂದಾಗಿ ದುರ್ನಾತ ಹರಡಲಾರಂಭಿಸಿದೆ. ೩ನೇ ವಿಭಾಗದ ಸೇತುವೆ ಬಳಿಯಿಂದ ವಿವಿಧ ಬಡಾವಣೆಗಳಿಗೆ ತೆರಳುವ ಮಕ್ಕಳೂ ಸೇರಿದಂತೆ ನಾಗರಿಕರು ಮೂಗುಮುಚ್ಚಿಕೊಂಡು ತೆರಳುವ ಪರಿಸ್ಥಿತಿ ಸಾಮಾನ್ಯವಾಗಿದೆ.
ಕಸದ ಸಮಸ್ಯೆಗೆ ಮುಕ್ತಿ ನೀಡಲು ಈ ಹಿಂದೆ ಶಾಸಕ ಪೊನ್ನಣ್ಣ ಸ್ಪಷ್ಟ ಸೂಚನೆ ನೀಡಿದ್ದರೂ ಯಾವುದೇ ಪ್ರಯೋಜನ ಕಾಣುತ್ತಿಲ್ಲ. ಒಣ ಕಸಗಳನ್ನು ಸಂಗ್ರಹಿಸಲು ಅರುವತ್ತೊಕ್ಲು ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಟ್ಟುವಿನಲ್ಲಿ ವ್ಯವಸ್ಥೆ ಇದ್ದರೂ ಈ ಬಗ್ಗೆ ಸಂಗ್ರಹಕ್ಕೆ ಬೇಕಾದ ವ್ಯವಸ್ಥೆಗಳು ನಡೆಯುತ್ತಿಲ್ಲ. ಕಸ ಸಂಗ್ರಹಣೆಯನ್ನು ಸಾಗಿಸಲು ಗುರುತುಪಡಿಸಲಾದ ಗುತ್ತಿಗೆದಾರ ಸರಿಯಾಗಿ ಸ್ಪಂದಿಸದೇ ಇರುವುದು ಕಸದ ಸಮಸ್ಯೆ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಉಲ್ಬಣಗೊಳ್ಳಲು ಕಾರಣವಾಗುತ್ತಿದೆ. ಪ್ರತಿನಿತ್ಯ ಗ್ರಾಮ ಪಂಚಾಯಿತಿಯ ಪೌರ ಕಾರ್ಮಿಕರು ಪಂಚಾಯಿತಿ ವಾಹನಗಳಲ್ಲಿ ನಗರದ ೮ ವಾರ್ಡ್ಗಳಿಂದ ಕಸವನ್ನು ಸಂಗ್ರಹಿಸುತ್ತಿದ್ದಾರೆ. ಅಲ್ಲದೆ ಮುಂಜಾನೆ ಹಾಗೂ ಸಂಜೆ ವೇಳೆಯಲ್ಲಿ ಪಟ್ಟಣದಲ್ಲಿರುವ ಅಂಗಡಿ ಮುಂಗಟ್ಟು ಹಾಗೂ ಹೊಟೇಲ್ ಇತ್ಯಾದಿಗಳಿಂದ ಕಸವನ್ನು ಸಂಗ್ರಹಿಸುತ್ತಲೇ ಬರುತ್ತಿದ್ದಾರೆ. ಸಂಗ್ರಹವಾಗುವ ಕಸಗಳನ್ನು ಚೀಲಗಳಲ್ಲಿ ತುಂಬಿ ಒಂದರ ಮೇಲೆ ಒಂದರAತೆ ಇಡುತ್ತಿರುವುದರಿಂದ ಕಸದ ರಾಶಿಗಳು ಗುಡ್ಡಗಳಾಗಿ ಮಾರ್ಪಡುತ್ತಿವೆ.
ಕೊಡಗಿನ ಪ್ರತಿಷ್ಠಿತ ಗ್ರಾಮ ಪಂಚಾಯಿತಿಯಾಗಿರುವ ಗೋಣಿಕೊಪ್ಪವು ಪಟ್ಟಣ ಪಂಚಾಯಿತಿಗೂ ಮೀರಿ ಬೆಳೆಯುತ್ತಿದೆ. ಬಡಾವಣೆಗಳಲ್ಲಿ ನಿವೇಶನಗಳ ಬೆಲೆಗಳು ಗಗನಕ್ಕೇರುತ್ತಿವೆ. ಆದಾಯವು ಕೂಡ ಉತ್ತಮವಾಗಿ ಸಂಗ್ರಹವಾಗುತ್ತಿದ್ದರೂ ಕಸದ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುವಲ್ಲಿ ಗ್ರಾಮ ಪಂಚಾಯಿತಿ ಸಫಲವಾಗಿಲ್ಲ. ಪಟ್ಟಣ ಬೆಳೆಯುತ್ತಿದ್ದಂತೆ ಕಸದ ಸಂಗ್ರಹವೂ ಕೂಡ ಹೆಚ್ಚಾಗುತ್ತಿದೆ. ಆದರೆ ಕಸವನ್ನು ಸಂಗ್ರಹಿಸಿ ಇಡಲು ಸ್ಥಳದ ಅಭಾವ ಮಾತ್ರ ಹಲವು ವರ್ಷಗಳಿಂದ ಬಗೆ ಹರಿಸಲಾಗದ ಪರಿಸ್ಥಿತಿಯಲ್ಲಿಯೇ ಮುಂದುವರೆಯುತ್ತಿದೆ.