ಮಡಿಕೇರಿ, ಮಾ. ೨೧: ಕೊಡವರ ಕೊಡವ ಲ್ಯಾಂಡ್ ಹಕ್ಕೊತ್ತಾಯವು ಸೇರಿದಂತೆ ಸಿಎನ್ಸಿಯ ಸರ್ವ ಸಂವಿಧಾನಿಕ ಬೇಡಿಕೆಯು ಸಮಂಜಸ ಮತ್ತು ಅರ್ಥಪೂರ್ಣ ಎಂದು ಪ್ರಮುಖರು ಅಭಿಮತ ವ್ಯಕ್ತಪಡಿಸಿದರು.
ನಗರದ ಹೊರವಲಯದ ಕ್ಯಾಪಿಟಲ್ ವಿಲೇಜ್ನಲ್ಲಿ ಅಂತರರಾಷ್ಟಿçÃಯ ಜನಾಂಗೀಯ ತಾರತಮ್ಯ ದಿನದಂದು ಸಿಎನ್ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಅವರ ನೇತೃತ್ವದಲ್ಲಿ ಆಯೋಜಿಸಿದ ವಿಚಾರ ಗೋಷ್ಠಿಯಲ್ಲಿ ರಾಜ್ಯಸಭಾ ಮಾಜಿ ಸದಸ್ಯÀ ಡಾ. ಎಲ್. ಹನುಮಂತಯ್ಯ ಮತ್ತು ನ್ಯಾಯವಾದಿ ಕೆ.ಪಿ. ಬಾಲಸುಬ್ರಹ್ಮಣ್ಯ ಅವರು ಭಾಗವಹಿಸಿ ಅಭಿಪ್ರಾಯಗಳನ್ನು ಹಂಚಿಕೊAಡರು.
ಮುಖ್ಯ ಅತಿಥಿಗಳಾಗಿದ್ದ ರಾಜ್ಯಸಭಾ ಮಾಜಿ ಸದಸ್ಯ ಡಾ. ಎಲ್ ಹನುಮಂತಯ್ಯ ಮಾತನಾಡಿ, ಕೊಡವರು ಮರೆಯಾದರೆ ಜನಾಂಗದ ಅಸ್ಮಿತೆ ಉಳಿಯುವುದಿಲ್ಲ. ಕೊಡವರಿಗೆ ಸಂವಿಧಾನಿಕ ಹಕ್ಕು ದೊರಕುವುದಿಲ್ಲ. ಈ ನಿಟ್ಟಿನಲ್ಲಿ ಕೊಡವ ಹೆಗ್ಗುರುತಾದ ಅಪರೂಪದ ಹಬ್ಬ ಹರಿದಿನ, ಭಾಷೆ , ಆರಾಧನಾ ಪದ್ಧತಿ, ಆಹಾರ ಪದ್ಧತಿ, ಉಡುಗೆ ತೊಡುಗೆ, ಶವ ಸಂಸ್ಕಾರ, ಸಪ್ತಪದಿ ಇಲ್ಲದ ಮದುವೆ, ಜಾನಪದ ನೃತ್ಯ ಮತ್ತು ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಹಾಡುಗಳನ್ನು ಮತ್ತು ಮಾನವ ಶಾಸ್ತç, ಜನಾಂಗೀಯ ನರಶಾಸ್ತçದ ಎಲ್ಲ ವಿಧಿ ವಿಧಾನಗಳನ್ನು ಮುಂದುವರೆಸಿ ಜತನದಿಂದ ಕಾಪಾಡಬೇಕೆಂದು ಕರೆ ನೀಡಿದರು.
ವಕೀಲ ಕೆ.ಪಿ ಬಾಲಸುಬ್ರಮಣ್ಯ ಮಾತನಾಡಿ, ಕೊಡವರು ಕೊಡಗಿನ ಆದಿಮಸಂಜಾತರು, ಕೊಡವರು ಪ್ರತ್ಯೇಕ ರೇಸ್ ಅಥವಾ ಮೂಲ ವಂಶಸ್ತ ಜನಾಂಗವಾಗಿದ್ದು, ಈ ಜನಾಂಗದ ನೆಲೆ ಮತ್ತು ನೆಲ ಇಲ್ಲಿಯೇ ಇದೆ. ಭೂದೇವಿ, ಜಲದೇವಿ, ಪೂರ್ವಿಕರು, ಮಂದ್ ಮತ್ತು ಸೂರ್ಯ ಚಂದ್ರ, ಅಗಲಿದವರ ಆತ್ಮ ಪೂಜಿಸುವ ಸಂಪ್ರದಾಯ ಇಡೀ ದೇಶದಲ್ಲೇ ಬೇರೆ ಯಾರೂ ಪಾಲಿಸುವುದಿಲ್ಲ. ಈ ಕಾರಣದಿಂದಾಗಿ ಕೊಡವರು ಸಂವಿಧಾನದಲ್ಲಿ ತಾವು ಬೇರೆ ಜನಾಂಗವೆAದು ಪರಿಗಣಿಸಲ್ಪಡಬೇಕು. ಹಾಗೆ ಪರಿಗಣಿಸಲ್ಪಡಬೇಕಾದರೆ ಮುಂಬರುವ ೨೦೨೭ರ ರಾಷ್ಟಿçÃಯ ಜನ ಗಣತಿಯಲ್ಲಿ ತಾವು ಕೊಡವರು ಪ್ರತ್ಯೇಕವೆಂದು ಗುರುತಿಸಲ್ಪಡಬೇಕೆಂದು ಅಭಿಪ್ರಾಯಪಟ್ಟರಲ್ಲದೆ ಈ ಸಂಬAಧ ತಪಸ್ಸಿನಂತೆ ಅವಿರತವಾಗಿ ಹೋರಾಡುತ್ತಿರುವ ಸಿಎನ್ಸಿಗೆ ಬೆಂಬಲಿಸಬೇಕೆAದು ಕರೆ ನೀಡಿದರು.
ಜಾನಪದ ಸಂಶೋಧಕಿ ಪ್ರೊ. ಡಾ. ಮುಲ್ಲೆಂಗಡ ರೇವತಿ ಪೂವಯ್ಯ ಮಾತನಾಡಿ, ಕೊಡವರ ಶ್ರೀಮಂತ ಜಾನಪದ ಪರಂಪರೆ ಸುಮಾರು ೪.೫ ಸಾವಿರ ವರ್ಷಗಳ ಸುದೀರ್ಘ ಹಿನ್ನೆಲೆ ಹೊಂದಿದೆ ಎಂದರು. ಕೊಡವ ಭಾಷಾ ಸಮೃದ್ಧಿ, ಕೊಡವ ಜನಾಂಗೀಯ ಹಿರಿಮೆ ಹೆಗ್ಗುರುತಿನ ಬಗ್ಗೆ ಸುಧೀರ್ಘ ಪ್ರಬಂಧ ಮಂಡಿಸಿದರು.
ಹೈ ಕೋರ್ಟ್ ಹಿರಿಯ ವಕೀಲ ಎಂ.ಟಿ. ನಾಣಯ್ಯ ಮಾತನಾಡಿ, ಸಿಎನ್ಸಿಯ ೩೬ ವರ್ಷಗಳ ದೀರ್ಘ ಹೋರಾಟಕ್ಕೆ ಎಲ್ಲ ಕೊಡವರು ತನು ಮನ ಸಹಾಯ ನೀಡಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮಕ್ಕೂ ಮುನ್ನ ಅತಿಥಿಗಳಿಗೆ ಬಾಳೆ ಕಡಿಯುವ ಗೌರವ ಅರ್ಪಿಸಲಾಯಿತು. ಅತಿಥಿಗಳೆಲ್ಲರೂ ಗಾಳಿಯಲ್ಲಿ ಬಂದೂಕಿನ ಮೂಲಕ ಗುಂಡು ಹಾರಿಸಿದರು. ತದನಂತರ ದುಡಿ ಕೊಟ್ಟ್ ಪಾಟ್ ಮೂಲಕ ವೇದಿಕೆಗೆ ಅತಿಥಿಗಳನ್ನು ಬರ ಮಾಡಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಕಲಿಯಂಡ ಮೀನಾ ಪ್ರಕಾಶ್, ಪುಲ್ಲೇರ ಸ್ವಾತಿ ಕಾಳಪ್ಪ, ಪಟ್ಟಮಡ ಲಲಿತಾ ಗಣಪತಿ, ಲೆಫ್ಟಿನೆಂಟ್ ಕರ್ನಲ್ ಬಿ. ಎಂ. ಪಾರ್ವತಿ, ನಂದೇಟಿರ ಕವಿತಾ ಸುಬ್ಬಯ್ಯ, ಚೋಳಪಂಡ ಜ್ಯೋತಿ ನಾಣಯ್ಯ, ಅರೆಯಡ ಸವಿತಾ ಗಿರೀಶ್, ನಂದಿನೆರವAಡ ನಿಶಾ ಅಚ್ಚಯ್ಯ, ಪಚ್ಚರಂಡ ಶಾಂತಿ ಪೂನ್ನಪ್ಪ, ಅಜ್ಜಿನಕಂಡ ಇನಿತಾ ಮಾಚಯ್ಯ, ನಾಯಕಂಡ ಶಾಂತಿ, ಮಾಚ್ಚರಂಡ ಸಿಂಧು. ಕಲಿಯಂಡ ಪ್ರಕಾಶ್, ಬಾಚರಣಿಯಂಡ ಚಿಪ್ಪಣ್ಣ, ಪುಳ್ಳಂಗಡ ನಟೇಶ್, ಪಟ್ಟಮಡ ಕುಶ, ಅಜ್ಜಿಕುಟ್ಟಿರ ಲೋಕೇಶ್, ಚಂಬAಡ ಜನತ್, ನಂದೇಟಿರ ರವಿ ಸುಬ್ಬಯ್ಯ, ಬೊಟ್ಟಂಗಡ ಗಿರೀಶ್, ಬಿದ್ದಂಡ ಅಚ್ಚಯ್ಯ, ಕೊಂಗೇಟಿರ ಅನಿಲ್ ಕುಟ್ಟಪ್ಪ, ಕುಕ್ಕೆರ ಜಯ ಚಿಣ್ಣಪ್ಪ, ಮಣವಟ್ಟಿರ ಜಗದೀಶ್, ಕಿರಿಯಮಡ ಶೆರಿನ್, ಮಂದಪAಡ ಮನೋಜ್ ಮಂದಣ್ಣ, ಉದಿಯಂಡ ಚೆಂಗಪ್ಪ, ಪೊರಿಮಂಡ ದಿನಮಣಿ ಪೂವಯ್ಯ, ಪೆಮ್ಮುಡಿಯಂಡ ವೇಣು ಅಪ್ಪಣ್ಣ, ಮಣವಟ್ಟಿರ ಚಿಣ್ಣಪ್ಪ, ಬೇಪಡಿಯಂಡ ದಿನು, ಚೋಳಪಂಡ ನಾಣಯ್ಯ, ಬೇಪಡಿಯಂಡ ಬಿದ್ದಪ್ಪ, ಪುಟ್ಟಿಚಂಡ ಡಾನ್ ದೇವಯ್ಯ, ನಂದಿನೆರವAಡ ವಿಜು, ಸೋಮೆಯಂಡ ರೇಷ, ಅಪ್ಪನೆರವಂಡ ವಿನು, ಬಡುವಂಡ ವಿಜಯ, ಚಂಗAಡ ಚಾಮಿ ಪಳಂಗಪ್ಪ, ನಂದಿನೆರವAಡ ಅಯ್ಯಣ್ಣ, ಅಜ್ಜಿನಕಂಡ ಸನ್ನಿ ಮಾಚಯ್ಯ, ಪಾಲೇಕಂಡ ಪ್ರಧಾನ್ ಪೂಣಚ್ಚ, ನಂದೇಟಿರ ಜೀವನ್, ಅಳಮಂಡ ಲವ, ಪೂಳಂಡ ಪೂವಯ್ಯ, ಪುಲ್ಲೇರ ಕಾಳಪ್ಪ, ಅರೆಯಡ ಗಿರೀಶ್, ಪೊರಿಮಂಡ ಅವಿನಾಶ್, ಮುಲ್ಲೆಂಗಡ ದರ್ಶನ್ ಸುಬ್ಬಯ್ಯ, ಪಟ್ಟಮಡ ಪೃಥ್ವಿ ಹಾಜರಿದ್ದರು. ಕಲಿಯಂಡ ಪ್ರಕಾಶ್ ಸ್ವಾಗತಿಸಿದರು. ಅಜ್ಜಿಕುಟ್ಟಿರ ಲೋಕೇಶ್ ವಂದಿಸಿದರು. ನಂದಿನೆರವAಡ ನಿಶಾ ಅಚ್ಚಯ್ಯ ಕಾರೋಣ ಪಾಟ್ ಹಾಡಿದರು. ಬಾಚರಣಿಯಂಡ ಚಿಪ್ಪಣ್ಣ ನಿರೂಪಿಸಿದರು