ಮಡಿಕೇರಿ, ಮಾ. ೨೧: ಕೊಡಗಿನಲ್ಲಿ ಆನೆ-ಮಾನವ ಸಂಘರ್ಷಕ್ಕೆ ಸಂಬAಧಿಸಿದAತೆ ಭಾರತೀಯ ಜನತಾ ಪಾರ್ಟಿ ಸಲ್ಲದ ರಾಜಕಾರಣ ಮಾಡುತ್ತಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ವೀರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್. ಪೊನ್ನಣ್ಣ ಟೀಕಿಸಿದರು.
ನಗರದ ಸುದರ್ಶನ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಡಾನೆ ಧಾಳಿಯಿಂದ ಇತ್ತೀಚೆಗೆ ಬೆಟ್ಟತ್ತೂರು, ಸಿದ್ದಾಪುರ, ಕುಶಾಲನಗರದಲ್ಲಿ ಮೂರು ಸಾವು ಸಂಭವಿಸಿದೆ. ಈ ಬಗ್ಗೆ ತನಗೆ ಅತೀವ ನೋವಿದೆ. ಆನೆ-ಮಾನವ ಸಂಘರ್ಷ ತಡೆಗಾಗಿ ಕಲಾಪದಲ್ಲಿ ಚರ್ಚಿಸಿ ಅರಣ್ಯ ಸಚಿವರ ನೇತೃತ್ವದಲ್ಲಿ ಅಧಿಕಾರಿಗಳ ಸಭೆಯನ್ನು ನಡೆಸಿ ಅಗತ್ಯ ಕ್ರಮಗಳನ್ನು ಜರುಗಿಸಲಾಗುತ್ತಿದೆ. ಹೀಗಿದ್ದರೂ ಕೂಡ ಬಿಜೆಪಿಯವರು ಪ್ರತಿಭಟನೆ, ರಸ್ತೆ ತಡೆಗಳನ್ನು ಮಾಡುವ ಮೂಲಕ ಸಾವಿನ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ಬಿಜೆಪಿ ಶಾಸಕರ ಅವಧಿಯಲ್ಲಿ ಆನೆ ಧಾಳಿಯಿಂದ ಯಾವುದೇ ಸಾವು ಸಂಭವಿಸಿರಲಿಲ್ಲವೆ? ಎಂದು ಪ್ರಶ್ನಿಸಿದ ಪೊನ್ನಣ್ಣ, ಬಿಜೆಪಿ ಶಾಸಕರ ಅವಧಿಯಲ್ಲಿ ಕಾಡಾನೆಗಳಿಂದ ಸಾವು ಸಂಭವಿಸಿದಾಗ ಅವರೇನು ಕ್ರಮಕೈಗೊಂಡಿದ್ದರು ಎಂಬುದನ್ನು ತಿಳಿಸಲಿ; ನಾವು ಕೂಡ ಅದನ್ನೇ ಮಾಡುತ್ತೇವೆ ಎಂದು ಮಾರ್ಮಿಕವಾಗಿ ನುಡಿದರು. ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಬಿಜೆಪಿ ಶಾಸಕರ ಅವಧಿಯಲ್ಲಿಯೇ ಕಾಡಾನೆಗಳಿಂದ ಹೆಚ್ಚಿನ ಸಾವು ಸಂಭವಿಸಿದೆ. ಆದರೆ ಆ ಸಂದರ್ಭದಲ್ಲಿ ವಿಪಕ್ಷದಲ್ಲಿದ್ದ ಕಾಂಗ್ರೆಸ್ ಸಾವಿನ ಮೇಲೆ ರಾಜಕಾರಣ ಮಾಡಿರಲಿಲ್ಲ ಎಂದರಲ್ಲದೆ ಬಿಜೆಪಿ ಅವಧಿಯಲ್ಲಿ ಸಾವು ಸಂಭವಿಸಿದಾಗ ಬಿಜೆಪಿ ಶಾಸಕರುಗಳು ರಾಜಿನಾಮೆ ನೀಡಿದ್ದರೆ? ಎಂದು ಪ್ರಶ್ನಿಸಿದರು.
ಕೇಂದ್ರ ಸರ್ಕಾರ ಆನೆ ಯೋಜನೆ ಹಾಗೂ ಹುಲಿ ಯೋಜನೆಯಡಿ ರೂ. ೨೯೦ ಕೋಟಿ ಅನುದಾನ ಮೀಸಲಿಟ್ಟಿದೆ. ಇದರಲ್ಲಿ ನೆರೆಯ ಕೇರಳ ರಾಜ್ಯಕ್ಕೆ ದೊಡ್ಡ ಮೊತ್ತದ ನೆರವು ನೀಡಿರುವ ಕೇಂದ್ರ ಸರಕಾರ ಇದುವರೆಗೂ ಕರ್ನಾಟಕ ರಾಜ್ಯಕ್ಕೆ ಕಾಡಾನೆ ನಿಯಂತ್ರಣ ಸಂಬAಧ ಒಂದು ರೂಪಾಯಿ ಅನುದಾನವನ್ನೂ ನೀಡಿಲ್ಲ. ಸುಮಾರು ೨೫ ವರ್ಷಗಳ ಕಾಲ ಕೊಡಗಿನ ಜನತೆ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಆದರೆ ಕೊಡಗಿನ ಜನರ ಸಮಸ್ಯೆಗೆ ಕೇಂದ್ರ ಸರಕಾರ ಸ್ಪಂದಿಸುತ್ತಿಲ್ಲ. ಆದ್ದರಿಂದ ಬಿಜೆಪಿಯವರು ಕೇಂದ್ರದ ಅನುದಾನ ತರುವ ನಿಟ್ಟಿನಲ್ಲಿ ಪ್ರಯತ್ನಿಸಲಿ, ಅನುದಾನ ತಂದು ಆನೆ-ಮಾನವ ಸಂಘರ್ಷ ತಡೆಗೆ ಅವರೇ ಪರಿಹಾರ ಕಾರ್ಯ ಕೈಗೊಂಡು ಫೋಟೋ ಹಾಕಿಸಿಕೊಳ್ಳಲಿ; ಅದನ್ನು ಬಿಟ್ಟು ನಮ್ಮ ಮೇಲೆ ವೃಥಾ ಆರೋಪ ಮಾಡುವುದು ಬೇಡ ಎಂದು ಪೊನ್ನಣ್ಣ ಹೇಳಿದರು.
ಕಾಡಾನೆ ಹಾವಳಿ ನಿಯಂತ್ರಣ ಸಂಬAಧ ಮುಂಜಾಗ್ರತಾ ಕಾರ್ಯಗಳಿಗಾಗಿ ಇನ್ನೂ ಕೂಡ ೨೯೦ ಕೋಟಿ ಹಣ ಬೇಕಾಗಿದೆ. ಕೇಂದ್ರ ಸರ್ಕಾರ ಆನೆ ಯೋಜನೆ - ಹುಲಿ ಯೋಜನೆಗೆ ಮೀಸಲಿಟ್ಟಿರುವ ಅನುದಾನದಲ್ಲಿ ಶೇ೭೦ ರಷ್ಟು ಹಣ ವಿನಿಯೋಗವಾಗದೆ ಹಾಗೇ ಉಳಿದಿದ್ದು ಅದನ್ನು ಕೊಡಿಸುವ ಕೆಲಸವನ್ನು ಬಿಜೆಪಿಯವರು ಮಾಡಲಿ. ಕಾಡಾನೆಗಳ ನಿಯಂತ್ರಣ ಸಂಬAಧ ಈಗಾಗಲೇ ಅರಣ್ಯ ಸಚಿವರು, ಅಧಿಕಾರಿಗಳ ಸಭೆ ನಡೆಸಿ ಅರಣ್ಯ ಇಲಾಖೆಗೆ ವಾಹನಗಳು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಕೆಲಸವಾಗಿದೆ. ತೊಂದರೆ ನೀಡುವ ಆನೆಗಳನ್ನು ಗುರುತಿಸಿ ಸೆರೆಹಿಡಿಯುವ ಕಾರ್ಯವೂ ನಡೆಯಲಿದೆ. ಆನೆಗಳನ್ನು ಸೆರೆಹಿಡಿದ ಕೂಡಲೇ ಪರಿಸರವಾದಿಗಳು ಪ್ರಕರಣ ದಾಖಲಿಸುತ್ತಾರೆ. ಇದರ ನಡುವೆಯೂ ನಮ್ಮ ಕರ್ತವ್ಯವನ್ನು ನಾವು ಮಾಡುತ್ತಿದ್ದೇವೆ. ಆನೆ-ಮಾನವ ಸಂಘರ್ಷ ಕೊನೆಗೊಳ್ಳಲೇಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಸಕಾರಾತ್ಮಕವಾಗಿ ಸ್ಪಂದಿಸಿ ನಮ್ಮೊಂದಿಗೆ ಕೈ ಜೋಡಿಸಬೇಕು. ಆನೆ-ಮಾನವ ಸಂಘರ್ಷ ವಿಚಾರದಲ್ಲಿ ರಾಜ್ಯ ಸರ್ಕಾರದಷ್ಟೇ ಕೇಂದ್ರ ಸರ್ಕಾರಕ್ಕೂ ಹೊಣೆಗಾರಿಕೆ ಇದೆ. ಆದ್ದರಿಂದ ಕೇಂದ್ರ ಸರ್ಕಾರದಿಂದ ಅನುದಾನ ಸಿಗದಿರುವ ಬಗ್ಗೆ ಸಂಸತ್ನಲ್ಲಿ ಪ್ರಸ್ತಾಪವಾಗಲಿ; ರಾಜ್ಯ ಸರ್ಕಾರದಿಂದ ಏನಾಗಬೇಕೂ ಅದನ್ನು ತಾನು ಪ್ರಾಮಾಣಿಕವಾಗಿ ಮಾಡಿಸುತ್ತೇನೆ. ಆನೆ ದಾಳಿ ಮಾಡಲಿ ಎಂದು ಅರಣ್ಯ ಇಲಾಖೆ ಹೇಳುವುದಿಲ್ಲ; ಆನೆ ದಾಳಿ ವಿಚಾರದಲ್ಲಿ ಅರಣ್ಯ ಇಲಾಖೆಯವರ ನಿರ್ಲಕ್ಷö್ಯವಿದ್ದರೆ ಅವರ ವಿರುದ್ಧವೂ ಕ್ರಮವಾಗುತ್ತದೆ. ಪ್ರತಿಭಟನೆ ನೆಪದಲ್ಲಿ ಮಹಿಳಾ ಅಧಿಕಾರಿಯೊಂದಿಗೆ ಸೌಜನ್ಯವಿಲ್ಲದಂತೆ ವರ್ತಿಸುವುದು, ಶವವನ್ನು ತೆಗೆಯಲು ಬಿಡಬಾರದು ಎಂಬAತಹ ಹೇಳಿಕೆಗಳು ಸರಿಯಲ್ಲ ಎಂದು ಪೊನ್ನಣ್ಣ ನುಡಿದರು.
ಸರ್ಫೇಸಿ ಕಾಯ್ದೆ-ಕೇಂದ್ರ ಕ್ರಮ ಕೈಗೊಳ್ಳಲಿ
ಸರ್ಫೇಸಿ ಕಾಯ್ದೆಯಡಿ ಆನ್ಲೈನ್ನಲ್ಲಿ ಕಾಫಿ ತೋಟಗಳ ಹರಾಜು ಸ್ಥಗಿತಗೊಂಡಿದೆ ಎಂಬುದು ಬಿಜೆಪಿ ಸೃಷ್ಟಿಸಿರುವ ಸುಳ್ಳು ಎಂದು ಆರೋಪಿಸಿದ ಪೊನ್ನಣ್ಣ, ಹರಾಜು ನಡೆಯುತ್ತಿದೆ ಎಂದು ಕಾಫಿ ಬೆಳೆಗಾರರೇ ತನಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದರು. ಬಿಜೆಪಿ ಸುಳ್ಳು ಸುದ್ದಿ ಹಬ್ಬಿಸಿ ಬೆಳೆಗಾರರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದು, ಕೇಂದ್ರ ಸರ್ಕಾರ ಸರ್ಫೇಸಿ ಕಾಯ್ದೆಗೆ ತಿದ್ದುಪಡಿ ತಂದು ಬೆಳೆಗಾರರ ರಕ್ಷಣೆಗೆ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದರು. ವಾಜಪೇಯಿ ಅವರ ಅವಧಿಯಲ್ಲಿ ಈ ಕಾಯ್ದೆ ಜಾರಿಗೆ ಬಂದಿದ್ದು, ಈಗ ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿರುವುದರಿಂದ ಬೆಳೆಗಾರರಿಗೆ ತೊಂದರೆ ಆಗದಂತೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬಹುದಾಗಿದೆ ಎಂದು ಅಭಿಪ್ರಾಯಪಟ್ಟ ಪೊನ್ನಣ್ಣ ಸರ್ಫೇಸಿ ಕಾಯ್ದೆ ಸಂಬAಧ ಸುಳ್ಳು ಪ್ರಚಾರ ಮಾಡಿದವರು ಜನರ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿದರು.
ಬಜೆಟ್ನಲ್ಲಿ ಕೊಡಗಿಗೆ ಒತ್ತು
ಈ ಬಾರಿಯ ಬಜೆಟ್ನಲ್ಲಿ ಕೊಡಗು ಜಿಲ್ಲೆಗೆ ಮುಖ್ಯಮಂತ್ರಿಗಳು ಹೆಚ್ಚಿನ ಒತ್ತು ನೀಡಿದ್ದಾರೆ. ಶ್ರಮಿಕ ವಸತಿ ಶಾಲೆ, ಕ್ರೀಡಾ ತರಬೇತಿ ಕೇಂದ್ರಕ್ಕೆ ಅನುದಾನ, ಕೊಡವ ಅಭಿವೃದ್ಧಿ ನಿಗಮ ಘೋಷಣೆಯಾಗಿದೆ. ಎಲ್ಲಾ ಹಾಡಿಗಳಿಗೂ ರಸ್ತೆ, ವಿದ್ಯುತ್ಚ್ಛಕ್ತಿ ಕಲ್ಪಿಸುವ ಕೆಲಸ ಆಗುತ್ತಿದೆ. ಕೊಡಗಿನ ರಸ್ತೆಗಳ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ಬರಲಿದೆ ಎಂದು ಪೊನ್ನಣ್ಣ ಹೇಳಿದರು.
ಗೋಷ್ಠಿಯಲ್ಲಿ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಅರುಣ್ ಮಾಚಯ್ಯ, ಮಾಜಿ ಎಂ.ಎಲ್.ಸಿ. ವೀಣಾ ಅಚ್ಚಯ್ಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ಪ್ರಧಾನ ಕಾರ್ಯದರ್ಶಿ ಕೊಲ್ಯದ ಗಿರೀಶ್, ಪ್ರಚಾರ ಸಮಿತಿ ಅಧ್ಯಕ್ಷ ಟಿ.ಪಿ. ರಮೇಶ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.