ಐಗೂರು, ಮಾ. ೧೮: ಗರಗಂದೂರಿನ ಶ್ರೀ ಕುರುಂಬಾAಬಿಕ ಭಗವತಿ ದೇವಾಲಯದಲ್ಲಿ ವಾರ್ಷಿಕ ಭರಣಿ ಪೂಜೆಯು ಶ್ರದ್ಧಾಭಕ್ತಿಯಿಂದ ಎರಡು ದಿನಗಳ ಕಾಲ ನೆರವೇರಿತು. ದೇವಾಲಯವು ತಳಿರು ತೋರಣ, ಹೊಂಬಾಳೆ ಮತ್ತು ಹೂವಿನ ಅಲಂಕಾರಗಳಿAದ ಶೃಂಗಾರಗೊAಡಿತ್ತು.
ಪ್ರಥಮ ಪೂಜೆಯು ಕುಶಾಲನಗರದ ಅರ್ಚಕರಾದ ಪುರುಷೋತ್ತಮ ತಂಡದವರಿAದ ನಡೆದು, ದುರ್ಗಾ ಹೋಮ ,ಭಗವತಿ ಸೇವೆ, ಕಲಾಭಿಷೇಕ, ಅಲಂಕಾರ ಪೂಜೆ, ಭೂತ ಗಣಗಳಿಗೆ ಅಭಿಷೇಕ ,ನೈವೇದ್ಯ ಅರ್ಪಣೆ ನಡೆಯಿತು. ದ್ವಿತೀಯ ದಿನದ ಪೂಜೆಯು ರಾಜನ್ ಸ್ವಾಮಿಯ ನೇತೃತ್ವದಲ್ಲಿ ನಡೆದು ಭಗವತಿ ದೇವಿ , ಕಂಡ ಕರ್ಣ, ಮತ್ತು ಗುಳಿಗ ಸ್ವಾಮಿಗೆ ಹೂವಿನ ಅಲಂಕಾರ , ಗುರುದಿ ತಿಲಕ್ಕಂ ಮತ್ತು ಗುರುದಿ ಪೂಜೆ ನೆರವೇರಿತು. ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಹೊತ್ತ ಭಕ್ತಾದಿಗಳು ದೇವಿಯ ಆಶೀರ್ವಚನ ಪಡೆದರು. ಪ್ರಸಾದ ವಿನಿಯೋಗ ಅನ್ನಸಂತರ್ಪಣೆ ನಡೆಯಿತು. ಸುಂಟಿಕೊಪ್ಪ ಮಾದಾಪುರ ಮತ್ತು ಗರಗಂದೂರಿನ ಭಕ್ತಾದಿಗಳು ಪೂಜೆಯಲ್ಲಿ ಭಾಗವಹಿಸಿದ್ದರು.