ಗುಡ್ಡೆಹೊಸೂರು, ಮಾ. ೧೮: ಇಲ್ಲಿಗೆ ಸಮೀಪದ ಮಾದಪಟ್ಟಣ ಗ್ರಾಮದ ಶ್ರೀ ಶನೇಶ್ವರ ಹಾಗೂ ಮಹಿಶ ಮರ್ದಿನಿ ದೇವಸ್ಥಾನದ ೧೭ನೇ ವಾರ್ಷಿಕೊತ್ಸವ ಆದ್ದೂರಿಯಾಗಿ ನಡೆಯಿತು. ಮಹಿಶ ಮರ್ದಿನಿ (ಹನ್ಯಾಳಮ್ಮ) ದೇವಸ್ಥಾನದ ನೂತನ ಶಿಖರ ಪ್ರತಿಷ್ಠಾಪನ ಮಹೋತ್ಸವ ಇದೇ ಸಂದರ್ಭ ನಡೆಯಿತು. ಮೂರು ದಿನಗಳ ಕಾಲ ದೇವಸ್ಥಾನದಲ್ಲಿ ವಿವಿಧ ಪೂಜಾ ಕಾರ್ಯ ಮತ್ತು ಹೋಮ ಹವನಗಳು ನಡೆದವು. ಎರಡು ದಿನಗಳು ಕಾವೇರಿ ನದಿಯಿಂದ ಕಳಶ ಮೆರವಣಿಗೆ ನಡೆಸಲಾಯಿತು.

ಪೂಜಾ ಕಾರ್ಯವನ್ನು ಅರ್ಚಕರಾದ ಜೋಗಯ್ಯ ಮತ್ತು ಅಕ್ಷಯ್ ನೆರವೇರಿಸಿದರು. ಎರಡು ದಿನಗಳು ಕೂಡ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.