ಮಡಿಕೇರಿ, ಮಾ. ೧೮: ಹತ್ತನೇ ತರಗತಿ ಪರೀಕ್ಷೆ ಬರೆಯಲು ಪರೀಕ್ಷೆ ಪ್ರವೇಶ ಪತ್ರ ಲಭಿಸದ ಹಿನ್ನೆಲೆಯಲ್ಲಿ ಈರ್ವರು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ವಂಚಿತರಾಗಿದ್ದಾರೆ.
ಬೆಟ್ಟಗೇರಿಯ ಉದಯ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರಥಮ್ ಹಾಗೂ ತಮೀಮ್ ಎಂಬ ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾದವರಾಗಿದ್ದಾರೆ. ಪ್ರೌಢಶಾಲೆಯಲ್ಲಿ ೧೭ ಮಂದಿ ವಿದ್ಯಾರ್ಥಿಗಳು ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಈ ಪೈಕಿ ೧೫ ಮಂದಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಪ್ರವೇಶ ಪತ್ರ ಬಂದಿದೆ. ಆದರೆ ಈ ಈರ್ವರಿಗೆ ಮಾತ್ರ ಬಂದಿಲ್ಲ. ಹಾಗಾಗಿ ಪರೀಕ್ಷೆಯಿಂದ ಹೊರಗುಳಿಯುವಂತಾಗಿದೆ.
ಪರೀಕ್ಷೆಗೆ ಹೊರಟಿದ್ದರು.
ಎಲ್ಲ ವಿದ್ಯಾರ್ಥಿಗಳಂತೆ ಈ ವಿದ್ಯಾರ್ಥಿಗಳು ಕೂಡ ಬೆಳಿಗ್ಗೆ ಪರೀಕ್ಷೆಗೆ ತಯಾರಾಗಿ ಹೊರಟಿದ್ದರು. ಪ್ರವೇಶ ಪತ್ರ ಪಡೆಯಲೆಂದು ಶಾಲೆಗೆ ತೆರಳಿದ ಸಂದರ್ಭ ೧೫ ಮಂದಿಗೆ ಮಾತ್ರ ಪ್ರವೇಶ ಪತ್ರ ಬಂದಿದ್ದು, ಇವರುಗಳಿಗೆ ಬಾರದಿರುವದು ಗೋಚರಿಸಿದೆ. ಪರೀಕ್ಷೆಗೆ ಹೊರಟಿದ್ದವರಿಗೆ ಪರೀಕ್ಷೆ ಬರೆಯಲು ಸಾಧ್ಯವಾಗದ ಕಾರಣ ಕಣ್ಣೀರು ಹಾಕುತ್ತಿದ್ದುದು ಕಂಡು ಬಂದಿತು.
ಮೊದಲೇ ನೀಡಿದ್ದರೆ ಆಗುತ್ತಿತ್ತು..!
ಪ್ರವೇಶ ಪತ್ರವನ್ನು ಮೊದಲೇ ವಿತರಣೆ ಮಾಡಿದ್ದರೆ ಈರ್ವರಿಗೆ ಬಂದಿಲ್ಲವೆAಬದು ತಿಳಯುತ್ತಿತ್ತು. ಅವಾಗ ತರಿಸಿಕೊಳ್ಳುವ ಅವಕಾಶವೂ ಇತ್ತು. ಆದರೆ, ಕಳೆದ ಬಾರಿ ಮಕ್ಕಳು ಪತ್ರವನ್ನು ಕಳೆದುಕೊಂಡಿದ್ದರಿAದ ಈ ಬಾರಿ ಪರೀಕ್ಷೆಯ ದಿನವೇ ನೀಡುವದಾಗಿ ಶಾಲಾ ಆಡಳಿತ ಮಂಡಳಿಯವರು ತೀರ್ಮಾನ ಮಾಡಿ ತಿಳಿಸಿದ್ದರೆನ್ನಲಾಗಿದೆ. ಅಲ್ಲದೆ ನಿನ್ನೆ ಸಂಜೆ ಪೋಷಕರಿಗೆ ಕರೆ ಮಾಡಿದ ಆಡಳಿತ ಮಂಡಳಿಯವರು ಈರ್ವರಿಗೆ ಪ್ರವೇಶ ಪತ್ರ ಬಂದಿಲ್ಲ, ನಾಳೆಯ ಪರೀಕ್ಷೆಗೆ ಹೋಗುವದು ಬೇಡ, ಎಲ್ಲ ಸರಿ ಮಾಡಿಕೊಡುತ್ತೇವೆ ಎಂದು ತಿಳಿಸಿದ್ದಾರೆ. ಆದರೂ ಇಂದು ಬೆಳಿಗ್ಗೆ ವಿದ್ಯಾರ್ಥಿಗಳು ಶಾಲೆಗೆ ತೆರಳಿದಾಗ ಈರ್ವರಿಗೆ ಬಾರದಿರುವದು ಖಾತರಿಯಾಗಿದೆ
ನಿನ್ನೆ ಬಂದಿದೆ..!
ಆದರೆ, ಉದಯ ಶಾಲೆಗೆ ೯ ಹಾಗೂ ೧೦ನೇ ತರಗತಿ ನಡೆಸಲು ಅನುಮತಿ ಇಲ್ಲವೆಂಬ ಕಾರಣಕ್ಕಾಗಿ ಶಿಕ್ಷಣ ಇಲಾಖೆ ೪ಆರನೇ ಪುಟಕ್ಕೆ
(ಮೊದಲ ಪುಟದಿಂದ) ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ನೀಡಲು ನಿರಾಕರಿಸಿತ್ತೆಂಬದು ತಿಳಿದು ಬಂದಿದೆ. ನಂತರದಲ್ಲಿ ಆಡಳಿತ ಮಂಡಳಿಯವರು ನ್ಯಾಯಾಲಯದ ಮೂಲಕ ಅನುಮತಿ ಪಡೆದು ಪ್ರವೇಶ ಪತ್ರಕ್ಕೆ ಕೋರಿದ ಮೇರೆಗೆ ನಿನ್ನೆ ಇಲಾಖಾ ಅಧಿಕಾರಿಗಳು ಪ್ರವೇಶ ಪತ್ರ ನೀಡಿದ್ದಾರೆ. ಈ ಸಂದರ್ಭದಲ್ಲಿ ಈರ್ವರ ಹೆಸರು ಬಿಟ್ಟು ಹೋಗಿರುವದಾಗಿ ತಿಳಿದು ಬಂದಿದೆ.
ಎರಡು ಕಾರಣ..!
ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ಸಿಗದಿರಲು ಶಿಕ್ಷಣ ಇಲಾಖೆಯಲ್ಲಿ ಎರಡು ಕಾರಣಗಳನ್ನು ನೀಡಲಾಗಿದೆ. ಓರ್ವ ವಿದ್ಯಾರ್ಥಿಯ ಹಾಜರಾತಿ ಸಂಖ್ಯೆ ಕಡಿಮೆ ಇದೆ ಎಂದು ಹೇಳಲಾಗಿದೆ. ಆದರೆ ಶಾಲೆಯಲ್ಲಿ ಶೇ.೯೦ರಷ್ಟು ಹಾಜರಾತಿ ಇದೆ ಎಂದು ಪೋಷಕರು ಹೇಳುತ್ತಾರೆ. ಮತ್ತೋರ್ವ ವಿದ್ಯಾರ್ಥಿಯನ್ನು ಶಾಲಾ ಆಡಳಿತ ಮಂಡಳಿ ವರ್ಗಾವಣೆ ಪತ್ರ ನೀಡಿ ಕಳುಹಿಸಿದೆ ಎಂದು ಕಾರಣ ನೀಡಲಾಗಿದೆ ಎಂದು ಪೋಷಕರು ಹೇಳುತ್ತಾರೆ.
ಪೋಷಕರ ಪ್ರತಿಭಟನೆ
ತಮ್ಮ ಮಕ್ಕಳು ಪರೀಕ್ಷೆಯಿಂದ ವಂಚಿತರಾಗಿರುವ ವಿಷಯ ತಿಳಿದ ಪೋಷಕರು ಇಂದು ಬೆಳಿಗ್ಗೆ ಶಾಲಾವರಣಕ್ಕೆ ಆಗಮಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ. ರಸ್ತೆಗೂ ಆಗಮಿಸಿ ರಸ್ತೆ ತಡೆಗೆ ಮುಂದಾದಾಗ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಮನವೊಲಿಸಿ ರಸ್ತೆ ತಡೆಯಾಗದಂತೆ ಕ್ರಮ ಕೈಗೊಂಡರು. ತಮ್ಮ ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗಿರುವದರಿAದ ಪೋಷಕರು ಆಕ್ರೋಶ ವ್ಯಕ್ತಪಡಿಸಿದರು.
ಪೂರಕ ಪರೀಕ್ಷೆಗೆ ಅವಕಾಶ
ಪರೀಕ್ಷೆಯಿಂದ ವಂಚಿತರಾಗಿರುವ ವಿದ್ಯಾರ್ಥಿಗಳಿಗೆ ಮುಂದೆ ನಡೆಯಲಿರುವ ಎರಡನೇ ಹಂತದ ಪರೀಕ್ಷೆಯಲ್ಲಿ ಅವಕಾಶ ಮಾಡಿಸಿಕೊಡಲಾಗುವದೆಂದು ಶಾಲಾ ಆಡಳಿತ ಮಂಡಳಿಯವರು ಪೋಷಕರನ್ನು ಸಮಾಧಾನ ಮಾಡಲೆತ್ನಿಸಿದ್ದಾರೆ. ಆದರೆ, ಪರೀಕ್ಷೆ ವಂಚಿತ ವಿದ್ಯಾರ್ಥಿಗಳು ಇಂದಿನ ಒಂದು ಪರೀಕ್ಷೆಯನ್ನು ಮುಂದೆ ಬರೆಯುತ್ತೇವೆ. ಇನ್ನುಳಿದ ಐದು ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡುವಂತೆ ಆಡಳಿತ ಮಂಡಳಿ ಹಾಗೂ ಇಲಾಖಾ ಅಧಿಕಾರಿಗಳಲ್ಲಿ ಭಿನ್ನವಿಸಿಕೊಂಡಿದ್ದಾರೆ.
ಅಧಿಕಾರಿ ಭೇಟಿ
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ಮಾತನಾಡಿ; ಶಾಲೆಗೆ ನಿಯಮಾನುಸಾರ ಅನುಮತಿ ಇರಲಿಲ್ಲ. ಆಡಳಿತ ಮಾಂಡಳಿಯವರು ನ್ಯಾಯಾಲಯದ ಮೂಲಕ ಪರೀಕ್ಷೆ ಬರೆಯಲು ಅನುಮತಿ ಪಡೆದು ನಿನ್ನೆ ಸಂಜೆ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಮಾಹಿತಿ ಕಳುಹಿಸಿದ ಮೇರೆಗೆ ಮೇಲಾಧಿಕಾರಿಗಳೊಂದಿಗೆ ಮಾತನಾಡಿ ಪ್ರವೇಶ ಪತ್ರ ಕಳುಹಿಸಿಕೊಟ್ಟಿರುವದಾಗಿ ಮಾಹಿತಿ ನೀಡಿದರು.
ದೂರು ನೀಡಲು ನಿರ್ಧಾರ
ಈ ಪ್ರಕರಣಕ್ಕೆ ಸಂಬAಧಿಸಿದAತೆ ಪರೀಕ್ಷೆ ವಂಚಿತ ವಿದ್ಯಾರ್ಥಿಗಳ ಪೋಷಕರು ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಶಾಲಾ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳ ಮೇಲೆ ಇಲಾಖೆಯ ಅಧಿಕಾರಿಗಳು ಹಾಗೂ ಶಾಸಕರಿಗೆ ದೂರು ಸಲ್ಲಿಸಲು ನಿರ್ಧರಿಸಿದ್ದಾರೆ.