ಶನಿವಾರಸಂತೆ, ಮಾ.೧೭: ಪೋಷಕರು, ಕ್ರೀಡಾ ತರಬೇತುದಾರ ಹಾಗೂ ಜನತೆಯ ಪ್ರೋತ್ಸಾಹ ಇದ್ದರೆ ಕ್ರೀಡಾಪಟುಗಳು ಸಾಧನೆ ಮಾಡಲು ಸಾಧ್ಯ ಎಂದು ಶನಿವಾರಸಂತೆ ವೃತ್ತನಿರೀಕ್ಷಕ ಜಿ.ಕೃಷ್ಣರಾಜ್ ಅಭಿಪ್ರಾಯ ವ್ಯಕ್ತಪಡಿಸಿದರು.

ಸಮೀಪದ ಮಾಲಂಬಿ ಗ್ರಾಮದಲ್ಲಿ ಮಾಲಂಬಿ ಬ್ರದÀರ್ಸ್ ವತಿಯಿಂದ ಸೋಮವಾರಪೇಟೆ - ಕುಶಾಲನಗರ ತಾಲೂಕು ಹಾಗೂ ಹಾಸನ ಜಿಲ್ಲೆಯ ಮರಿಯ ನಗರ ಮತ್ತು ಅರಗಲ್ಲು ತಂಡಗಳಿಗೆ ಹಮ್ಮಿಕೊಳ್ಳಲಾಗಿದ್ದ ವಾಲಿಬಾಲ್ ಕ್ರೀಡಾಕೂಟದ ಸಮಾರಂಭವನ್ನು ಜ್ಯೋತಿ ಬೆಳಗಿಸಿ, ಉದ್ಘಾಟಿಸಿ ಅವರು ಮಾತನಾಡಿದರು.

ಶಾಲಾ-ಕಾಲೇಜು ಹಂತದಲ್ಲೆ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಕ್ರೀಡಾ ಪ್ರತಿಭೆ ಸುಪ್ತವಾಗಿರುತ್ತದೆ.ಅದನ್ನು ಪೋಷಕರು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರು ಗುರುತಿಸಿ, ಪ್ರೋತ್ಸಾಹ ನೀಡಿ ಉತ್ತಮ ಕ್ರೀಡಾಪಟುಗಳನ್ನು ರೂಪಿಸಬೇಕು.ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳನ್ನು ಗುರುತಿಸಿ ತರಬೇತಿ ನೀಡಿದರೆ ಅವರು ರಾಷ್ಟç ಮತ್ತು ಅಂತರರಾಷ್ಟಿçÃಯ ಮಟ್ಟದ ಕ್ರೀಡಾಪಟುಗಳಾಗಿ ಸಾಧನೆ ಮಾಡಿ ದೇಶಕ್ಕೆ ಕೊಡುಗೆ ನೀಡುತ್ತಾರೆ.ಇಂದು ಯುವ ಸಮೂಹ ಕ್ರಿಕೆಟ್ ಮ್ಯಾಚ್ ನೋಡಲು ಟಿವಿ ಮುಂದೆ ಕುಳಿತು ಕಾಲಹರಣ ಮಾಡುವ ಬದಲು ಗ್ರಾಮಗಳಲ್ಲಿ ನಡೆಯುವ ವಾಲಿಬಾಲ್ ಮತ್ತಿತರ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡು ಸಾಧನೆ ಮಾಡಬೇಕು ಎಂದು ಕರೆ ನೀಡಿದರು.

ಮುಖ್ಯ ಅತಿಥಿ ಆಲೂರುಸಿದ್ದಾಪುರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಸನ್ನಕುಮಾರ್ ಮಾತನಾಡಿ, ಇಂದು ಗ್ರಾಮೀಣ ಪ್ರದೇಶದ ಬಹುತೇಕ ಕ್ರೀಡಾಪಟುಗಳು ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತಂದಿದ್ದಾರೆ.ಮಾಲAಬಿ ಬ್ರದರ್ಸ್ ತಂಡದವರು ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳನ್ನು ಗುರುತಿಸಿ, ಬೆಳೆಸಬೇಕು.ಸಾಧನೆ ಮಾಡಲು ಸಹಕಾರ ನೀಡಬೇಕು ಎಂದರು.

ಕಾಫಿ ಬೆಳೆಗಾರ ಎಂ.ಡಿ.ಸುರೇಶ್ ಮಾತನಾಡಿ, ಕ್ರೀಡಾಪ್ರತಿಭೆಗಳನ್ನು ಗುರುತಿಸಲು ಹಾಗೂ ಕ್ರೀಡಾ ಕ್ಷೇತ್ರದ ಬೆಳವಣಿಗೆಗಾಗಿ ಕ್ರೀಡಾ ಕೂಟವನ್ನು ಆಯೋಜಿಸಿರುವುದು ಶ್ಲಾಘನೀಯ ಎಂದರು. ಉದ್ಯಮಿ ಆಲೂರು ಜಯಕುಮಾರ್ ಮಾತನಾಡಿ, ಕ್ರೀಡಾಕೂಟಗಳನ್ನು ಏರ್ಪಡಿಸಿ ಕ್ರೀಡಾಪಟುಗಳನ್ನು ಗುರುತಿಸುವುದರಿಂದ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಯುವಜನತೆ ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕು ಎಂದು ಕರೆ ನೀಡಿದರು.

ಮಾಲಂಬಿ ಬ್ರದರ್ಸ್ ತಂಡದ ಅಧ್ಯಕ್ಷ ಸಿದ್ದಪ್ಪಾಜಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಶೋಕ್, ಪ್ರಮುಖರಾದ ಸರೋಜಾ ಮಹಾಂತಪ್ಪ, ಉದ್ಯಮಿ ಶೇಖರ್, ತೀರ್ಥಪ್ರಸಾದ, ಗ್ರಾಮ ಸಮಿತಿ ಅಧ್ಯಕ್ಷ ಮಹೇಶ್, ವಿನಾಯಕ ಸೇವಾ ಸಮಿತಿ ಅಧ್ಯಕ್ಷ ಲಿಂಗರಾಜು, ದಯಾನಂದ್, ಸುಬ್ರಹ್ಮಣ್ಯ, ಎಚ್.ಜೆ.ಲೋಕೇಶ್, ಮಲ್ಲೇಶ್, ಹೊನ್ನಪ್ಪ, ಸಂತೋಷ್, ಸುಂದರ್, ಬಿಪಿನ್, ಶಿಕ್ಷಕಿ ರೀನಾ, ಮುತ್ತಪ್ಪ, ಚೆನ್ನಕೇಶವ್, ಉಣ್ಣಿಕೃಷ್ಣ, ಸುಬ್ರಹ್ಮಣ್ಯ ಇತರರು ಹಾಜರಿದ್ದರು.