ಶನಿವಾರಸAತೆ, ಮಾ. ೧೭ : ಪಟ್ಟಣದಿಂದ ೩ ಕಿ.ಮೀ.ದೂರದ ಚಿಕ್ಕಕೊಳತ್ತೂರು ಗ್ರಾಮದಲ್ಲಿ ೪೦೦ ವರ್ಷಗಳ ಇತಿಹಾಸವಿರುವ ಬಾವಿ ಬಸವೇಶ್ವರ ದೇವಾಲಯದಲ್ಲಿ ದೇವರ ವಾರ್ಷಿಕ ಆರಾಧನಾ ಪೂಜಾ ಮಹೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ಚಿಕ್ಕಕೊಳತ್ತೂರು ಗ್ರಾಮದ ಶನಿವಾರಸಂತೆ, ಯಸಳೂರು, ಸುತ್ತಮುತ್ತಲಿನ ಗ್ರಾಮಗಳಿಂದ ಬಂದಿದ್ದ ಸಾವಿರಾರು ಭಕ್ತರು ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡರು.

ವಿಶೇಷತೆ: ಪ್ರತಿವರ್ಷ ಶಿವರಾತ್ರಿ ಹಬ್ಬದ ನಂತರ ಯುಗಾದಿ ಹಬ್ಬದ ಒಳಗೆ ಇಲ್ಲಿ ವಾರ್ಷಿಕ ವಿಶೇಷ ಪೂಜೆ ನಡೆಸುವುದು ಗ್ರಾಮದ ಸಂಪ್ರದಾಯವಾಗಿದೆ.

ಪ್ರಕೃತಿಯ ಹಸಿರ ಸಿರಿಯ ನಡುವೆ ಮೇಲ್ಭಾಗದಲ್ಲಿ ಉದ್ಭವ ಶ್ರೀಬಸವೇಶ್ವರ ದೇವರ ಗುಡಿಯಿದೆ. ಕೆಳಭಾಗದಲ್ಲಿ ಸಿಹಿ ನೀರಿನ ತೀರ್ಥ ಕೊಳವಿದೆ. ಇದಕ್ಕೆ ಹೊಂದಿಕೊAಡAತೆ ಕೆರೆ ಇದೆ.ಮಹೋತ್ಸವದಲ್ಲಿ ಪಾಲ್ಗೊಂಡ ಭಕ್ತರು ಹೂ, ಹಣ್ಣು-ಕಾಯಿ, ಅಕ್ಕಿ-ಬೆಲ್ಲ, ತರಕಾರಿ ಸಮರ್ಪಿಸಿ ಪೂಜೆ ಸಲ್ಲಿಸಿದರು. ನಂತರ ತೀರ್ಥದ ಕೊಳಕ್ಕೆ ಹರಕೆ ರೂಪದಲ್ಲಿ ಹಿಡಿ ನಾಣ್ಯ ಹಾಕಿ ತೀರ್ಥ ತೆಗೆದುಕೊಂಡು ಹೋದರು..ಕೊಳಕ್ಕೆ ಹಾಕಿದ ನಾಣ್ಯವನ್ನು ಮುಂದಿನ ವರ್ಷ ವಾರ್ಷಿಕೋತ್ಸವಕ್ಕೆ ಮೊದಲು ತೆಗೆದು ಸಂಗ್ರಹವಾದ ಹಣವನ್ನು ಸಮಿತಿಯವರು ಪೂಜಾ ಕಾರ್ಯಕ್ಕೆ ಬಳಸುತ್ತಾರೆ.

ಈ ತೀರ್ಥವನ್ನು ಜಾನುವಾರುಗಳಿಗೆ ಕುಡಿಸಿದರೆ ವಿವಿಧ ಕಾಯಿಲೆ ವಾಸಿಯಾಗುವುದು ಎಂಬ ನಂಬಿಕೆ ರೈತರಲ್ಲಿದೆ. ಉತ್ಸವಕ್ಕೆ ಬಂದಿದ್ದ ಹಲವು ಭಕ್ತರು ತಮ್ಮ ಮಕ್ಕಳ ಮುಡಿ ತೆಗೆಸಿದರು. ಹರಕೆ ಹೊತ್ತವರು ೧೦೧ ಈಡುಗಾಯಿ ಹೊಡೆದು ಭಕ್ತಿ ಸಮರ್ಪಿಸಿದರು. ಮಹಿಳೆಯರು, ಮಕ್ಕಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಅನ್ನಸಂತರ್ಪಣೆ ನಡೆಯಿತು. ಗ್ರಾಮದ ಮುಖಂಡರು ಮಹೋತ್ಸವದ ನೇತೃತ್ವವನ್ನು ವಹಿಸಿದ್ದರು. ಗ್ರಾಮದಿಂದ ಹೊರ ಊರುಗಳಿಗೆ ವಿವಾಹವಾಗಿ ಹೋದ ಹೆಣ್ಣುಮಕ್ಕಳು ವಾರ್ಷಿಕ ಪೂಜಾ ದಿನದಂದು ತವರಿಗೆ ಬಂದು ಪೂಜಾ ಕಾರ್ಯಕ್ರಮದಲ್ಲಿ ಸಂಭ್ರಮದಿAದ ಪಾಲ್ಗೊಂಡರು.

ಅರ್ಚಕರಾದ ದಯಾನಂದ್ ಹಾಗೂ ಮಂಜುನಾಥ್ ಪೂಜಾ ಕೈಂಕರ್ಯ ನೆರವೇರಿಸಿದರು. ಶ್ರೀಬಾವಿ ಬಸವೇಶ್ವರ ಗ್ರಾಮಾಭಿವೃದ್ಧಿ ಸಮಿತಿ ಪದಾಧಿಕಾರಿಗಳು, ಗ್ರಾಮ ಪ್ರಮುಖರು ಹಾಗೂ ಯುವಕರ ತಂಡ ಅನ್ನಸಂತರ್ಪಣೆ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳ ಯಶಸ್ಸಿಗೆ ಶ್ರಮಿಸಿದರು.