ಕೂಡಿಗೆ, ಮಾ. ೧೬: ಶಿರಂಗಾಲ ಗ್ರಾಮ ದೇವತಾ ಸಮಿತಿಯ ವತಿಯಿಂದ ನಡೆದ ಶ್ರೀ ಉಮಾಮಹೇಶ್ವರ ರಥೋತ್ಸವದ ಅಂಗವಾಗಿ ತೆಪ್ಪೋತ್ಸವದ ಶ್ರದ್ಧಾಭಕ್ತಿಯಿಂದ ನೆರವೇರಿತು.ತೆಪ್ಪೋತ್ಸವದ ಅಂಗವಾಗಿ ಶ್ರೀ ಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯಗಳು ನಡೆದು ನಂತರ ವಿದ್ಯುತ್ ಅಲಂಕೃತವಾದ ಭವ್ಯ ಮಂಟಪದಲ್ಲಿ ಶ್ರೀ ಸ್ವಾಮಿಯ ವಿಗ್ರಹವನ್ನು ಕುಳ್ಳಿರಿಸಿ, ಪೂಜೆ ಸಲ್ಲಿಸಿ ನಂತರ ಪಂಚಾಯಿತಿ ಮಟ್ಟದ ಊರುಗಳಾದ ಮೂಡಲಕೊಪ್ಪಲು, ನಲ್ಲೂರು, ಸಾಲುಕೊಪ್ಪಲು, ಶಿರಂಗಾಲ ಗೇಟ್, ಮಣಜೂರು ಸೇರಿದಂತೆ ಶಿರಂಗಾಲ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ನಂತರ ಪವಿತ್ರ ಕಾವೇರಿ ನದಿಯಲ್ಲಿ ತೆಪ್ಪೋತ್ಸವವು ಗಂಗಾ ಪೂಜೆಯೊಂದಿಗೆ ನೆರವೇರಿತು.

ಈ ಸಂದರ್ಭದಲ್ಲಿ ದೇವಾಲಯ ಸಮಿತಿ ಅಧ್ಯಕ್ಷ ನೇಮೇಶ್, ಕಾರ್ಯದರ್ಶಿ ಎಸ್.ಟಿ ವೆಂಕಟೇಶ್, ಉಪಾಧ್ಯಕ್ಷ ಬೋಜರಾಜ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಮೇಶ್, ಮಾಜಿ ಸದಸ್ಯ ಬಸವರಾಜ್, ಕುಶಾಲನಗರ ಸಹಕಾರ ಸಂಘದ ನಿರ್ದೇಶಕ ಲೋಕೇಶ್, ಗ್ಯಾರಂಟಿ ಸಮಿತಿ ನಿರ್ದೇಶಕ ಶ್ರೀನಿವಾಸ್, ದೇವಾಲಯ ಸಮಿತಿ ಮಾಜಿ ಅಧ್ಯಕ್ಷ ಚಂದ್ರಶೇಖರ್, ಧನೇಂದ್ರ ಕುಮಾರ್, ಉಮೇಶ್, ಡಿ ಶೇಖರ್, ವೀರಭದ್ರಪ್ಪ, ಹರ್ಷ, ಸೋಮಣ್ಣ ಸೇರಿದಂತೆ ಮಂಟಗಮ್ಮ ದೇವಾಲಯ ಸಮಿತಿ ನಿರ್ದೇಶಕರು, ಸೇರಿದಂತೆ ಪದಾಧಿಕಾರಿಗಳು, ಗ್ರಾಮಸ್ಥರು, ಭಕ್ತರು ಹಾಜರಿದ್ದರು.