ಸಿದ್ದಾಪುರ, ಮಾ. ೧೬: ಅಮ್ಮತ್ತಿಯ ಎಎಫ್‌ಸಿ ಅಮ್ಮತ್ತಿ ಕೊಡಗು ವತಿಯಿಂದ ಜಿಲ್ಲಾ ಮಟ್ಟದ ಲೆಜೆಂಡ್ಸ್ ಪುಟ್ಬಾಲ್ ಪಂದ್ಯಾಟ ಏಪ್ರಿಲ್ ೪ ಮತ್ತು ೫ರಂದು ಅಮ್ಮತ್ತಿಯ ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದೆ. ಪಂದ್ಯಾಟದಲ್ಲಿ ಪ್ರಥಮ ಬಹುಮಾನವಾಗಿ ರೂ. ೩೦,೦೦೦ ಹಾಗೂ ಟ್ರೋಫಿ, ದ್ವಿತೀಯ ಬಹುಮಾನವಾಗಿ ರೂ.೨೦,೦೦೦ ಹಾಗೂ ಟ್ರೋಫಿ ನೀಡಲಾಗುತ್ತದೆ. ಪಂದ್ಯಾಟವು ೪೦ ವರ್ಷ ಮೇಲ್ಪಟ್ಟವರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ೯೫೩೫೫೫೩೩೧೫, ೯೪೮೦೭೩೦೭೮೧ ಹಾಗೂ ೯೪೪೯೭೦೪೨೩೨ ಸಂಪರ್ಕಿಸಲು ಕೋರಿದ್ದಾರೆ.