ಕೂಡಿಗೆ, ಮಾ.೧೬: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕ ಅಳುವಾರ, ತೊರೆನೂರು, ಹೆಬ್ಬಾಲೆ, ಶಿರಂಗಾಲ ವ್ಯಾಪ್ತಿಯಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ ಸುರಿಯಿತು. ಕೆಲಕಾಲ ಸುರಿದ ಮಳೆಯಿಂದ ಭೂಮಿ ತಂಪಾಯಿತು. ಸೋಮವಾರ ಸಂಜೆ ಕುಶಾಲನಗರ ಬಳಿಯ ಗುಡ್ಡೆಹೊಸೂರು ಭಾಗದಲ್ಲಿ ೪-೩೦ ರ ಸುಮಾರಿಗೆ ಆಲಿಕಲ್ಲು ಮಳೆ ಸುರಿಯಿತು.