ಮಡಿಕೇರಿ, ಮಾ. ೧೪: ಬೆಂಗಳೂರು ಕೊಡವ ಸಮಾಜದ ವತಿಯಿಂದ ಸಮಾಜಕ್ಕೆ ಅಲ್ಲಿನ ಯಲಹಂಕ ಹೊಸಳ್ಳಿ ಗ್ರಾಮದಲ್ಲಿ ಮಂಜೂರಾಗಿರುವ ಜಾಗದಲ್ಲಿ ಪ್ರಥಮ ಬಾರಿಗೆ ಹಮ್ಮಿಕೊಂಡಿರುವ ನಂಗಡ ನೆಲ - ನಂಗಡ ನಮ್ಮೆ ಕಾರ್ಯಕ್ರಮ ಇಂದು ಆರಂಭಗೊAಡಿತು.

ಹಾಕಿ, ಥ್ರೋಬಾಲ್, ಆಹಾರಮೇಳ, ಸಂತೆಮೇಳ, ಮಕ್ಕಳ ವೈವಿಧ್ಯಮಯ ಚಟುವಟಿಕೆ, ವಿಶೇಷವಾಗಿ ವಾಲಗ ತಂಡಗಳಿಗೆ ವಾಲಗ ಸ್ಪರ್ಧೆಯಂತಹ ಕಾರ್ಯಕ್ರಮದೊಂದಿಗೆ ಶನಿವಾರ ಹಾಗೂ ಭಾನುವಾರ ಇಲ್ಲಿ ಸಂಭ್ರಮ ನಡೆಯುತ್ತಿದೆ.

ಬೆಳಿಗ್ಗೆ ಉದ್ಘಾಟನಾ ಸಮಾರಂಭ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡಿದ್ದ ವಿಧಾನ ಪರಿಷತ್ ಸದಸ್ಯ ಮಂಡೇಪAಡ ಪಿ. ಸುಜಾ ಕುಶಾಲಪ್ಪ ಅವರು ಈ ಜಾಗದಲ್ಲಿ ಸಮಾಜದ ಮೂಲಕ ಅಭಿವೃದ್ಧಿ ಕಾರ್ಯಗಳು ನಡೆಯಬೇಕಿದ್ದು, ಸರಕಾರದಿಂದ ಅನುದಾನ ಪಡೆಯಲು ಶ್ರಮಿಸುವುದಾಗಿ ಹೇಳಿದರು.

ಮತ್ತೋರ್ವ ಅತಿಥಿ ಕರ್ನಾಟಕ ಚೀಫ್ ಇಲೆಕ್ಟಿçಕಲ್ ಇಂಜಿನಿಯರ್ ತೀತಿರ ರೋಷನ್ ಅಪ್ಪಚ್ಚು ಅವರು ಮಾತನಾಡಿ, ಜನಾಂಗದ ಜನಸಂಖ್ಯೆ ಕ್ಷೀಣಿಸುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿ ಈ ಬಗ್ಗೆ ಚಿಂತನೆ ಮಾಡಬೇಕಿದೆ ಎಂದರು. ಹಾಕಿ ಕರ್ನಾಟಕದ ಕಾರ್ಯದರ್ಶಿ ಡಾ.ಎ.ಬಿ. ಸುಬ್ಬಯ್ಯ, ರಿಪಬ್ಲಿಕ್ ವಾಹಿನಿಯ ಉಪಾಧ್ಯಕ್ಷ ಚೇರಂಡ ಕಿಶನ್, ಕೊಡವ ಸಮಾಜದ ಮಾಜಿ ಅಧ್ಯಕ್ಷರುಗಳಾದ ಚೆಪ್ಪುಡಿರ ತಿಲಕ್ ಸುಬ್ಬಯ್ಯ, ಕೋಡಿರ ಅಪ್ಪಯ್ಯ, ಮಲ್ಲೇಂಗಡ ದಾದಾ ಬೆಳ್ಯಪ್ಪ, ಮಾಜಿ ಕಾರ್ಯದರ್ಶಿ, ಚೆಪ್ಪುಡಿರ ವಿವೇಕ್ ಮುತ್ತಣ್ಣ , ಮಾಜಿ ಉಪಾಧ್ಯಕ್ಷೆ ಮೊಣ್ಣಂಡ ಸೀತಾ ಅಯ್ಯಣ್ಣ, ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಸುರೇಶ್ ನಂಜಪ್ಪ, ಉಪಾಧ್ಯಕ್ಷೆ ಚಿರಿಯಪಂಡ ಆಶಾ, ಕಾರ್ಯದರ್ಶಿ ಬೇರೆರ ಮಧು ಅಯ್ಯಣ್ಣ, ಜಂಟಿ ಕಾರ್ಯದರ್ಶಿ ಹಾಗೂ ಕ್ರೀಡಾ ಸಮಿತಿ ಅಧ್ಯಕ್ಷೆ ಚೊಟ್ಟೆಯಂಡ ಆರತಿ ಅಯ್ಯಮ್ಮ, ಖಜಾಂಚಿ ಚೇಮಿರ ಸಿ. ಪೊನ್ನಪ್ಪ, ಜಂಟಿ ಖಜಾಂಚಿ ಮಲ್ಲೇಂಗಡ ಮುತ್ತಣ್ಣ, ಕ್ರೀಡಾ ಸಂಚಾಲಕ ಮುದ್ದಂಡ ರಶಿನ್ ಸುಬ್ಬಯ್ಯ, ಪೊಮ್ಮಕ್ಕಡ ಕೂಟದ ನಂದೇಟಿರ ಶೈಲಾ ಸುಬ್ಬಯ್ಯ, ಮತ್ತಿತರರು ಪಾಲ್ಗೊಂಡಿದ್ದರು.

ಬಳಿಕ ಆಹಾರಮೇಳ, ಸಂತೆಮೇಳ, ಮಳಿಗೆಗಳ ಉದ್ಘಾಟನೆ, ಪುರುಷರ ಹಾಕಿ, ಥ್ರೋಬಾಲ್ ಪಂದ್ಯಾವಳಿ ಜರುಗಿತು. ತಾ. ೧೫ ರಂದು (ಇಂದು) ಅಂತಿಮ ಪಂದ್ಯ, ಮಹಿಳೆಯರ ಹಾಕಿ, ವಾಲಗ ಸ್ಪರ್ಧೆ ಮತ್ತಿತರ ಕಾರ್ಯಕ್ರಮಗಳು ಜರುಗಲಿದೆ.