*ಗೋಣಿಕೊಪ್ಪ, ಮಾ. ೧೪: ಜೋಡುಬೀಟಿ ನೆಹರು ನಗರದ ಶ್ರೀ ವಿಷ್ಣಮಾಯ ಕುಟ್ಟಿಚಾತನ್ ದೇವಸ್ಥಾನದ ೪ನೇ ವರ್ಷದ ವಾರ್ಷಿಕೋತ್ಸವ ಮಾರ್ಚ್ ೨೩ ಮತ್ತು ೨೪ರಂದು ನಡೆಯಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಮುಖ್ಯಸ್ಥ ರವಿ ತಿಳಿಸಿದ್ದಾರೆ.

ಎರಡು ದಿನಗಳು ನಡೆಯುವ ಉತ್ಸವದಲ್ಲಿ ಶ್ರೀ ಭಗವತಿ, ಶ್ರೀ ಭದ್ರಕಾಳಿ, ಶ್ರೀ ಗುಳಿಗ, ಶ್ರೀ ಚಾಮುಂಡಿ, ಶ್ರೀ ನಾಗದೇವತೆ ದೇವರುಗಳ ದರ್ಶನ ಮತ್ತು ಪೂಜಾ ಕೈಂಕಾರ್ಯಗಳು ನಡೆಯಲಿದೆ.

ಪೂಜಾ ಕಾರ್ಯದಲ್ಲಿ ತೊಡಗಿಸಿಕೊಂಡ ಭಕ್ತಾದಿಗಳಿಗೆ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.