ವೀರಾಜಪೇಟೆ, ಮಾ. ೧೫: ಕೇಂದ್ರ ಸರಕಾರವು ನಿತ್ಯ ಬಳಕೆಯ ಗ್ಯಾಸ್ ದರವನ್ನು ಏರಿಕೆ ಮಾಡಿರುವುದನ್ನು ಖಂಡಿಸಿ ವೀರಾಜಪೇಟೆಯ ಗಡಿಯಾರ ಕಂಬದ ಬಳಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸವಾದಿ) ವೀರಾಜಪೇಟೆ ಘಟಕದ ವತಿಯಿಂದ ಪ್ರತಿಭಟನೆ ನಡೆಯಿತು.

ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸವಾದಿ) ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಎ.ಸಿ. ಸಾಬು ಅವರ ನೇತೃತ್ವದಲ್ಲಿ ನಡೆದ ಗ್ಯಾಸ್ ಬೆಲೆ ಎರಿಕೆ ಖಂಡಿಸಿ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸವಾದಿ) ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹೆಚ್.ಬಿ. ರಮೇಶ್ ಅವರು ಪಶ್ವಿಮ ಏಷ್ಯಾದ ಇಸ್ರೇಲ್ ಮತ್ತು ಇರಾನ್ ದೇಶಗಳ ಮಧ್ಯೆ ಯುದ್ದ ನಡೆಯುತ್ತಿರುವುದು ದೇಶದ ಆಂತರಿಕ ವ್ಯವಸ್ಥೆಯ ಬಗ್ಗೆ. ಯುದ್ದಕ್ಕೆ ಅಮೇರಿಕಾ ಸಾಥ್ ನೀಡಿದ್ದು ಈ ಸಂಘರ್ಷದಿAದಾಗಿ ತೈಲ ಉತ್ವನ್ನಗಳು ಆಮದುವಿಗೆ ತಡೆಯಾಗಿದೆ. ಯುದ್ಧ ನಡೆಯುವುದಕ್ಕಿಂತ ಮುಂಚೆ ಕೇಂದ್ರ ಸರಕಾರವು ನಿತ್ಯ ಬಳಕೆಯಾಗುವ ಗ್ಯಾಸ್ ಬೆಲೆ ಏರಿಕೆ ಮಾಡಿರುವುದು ಖಂಡನೀಯ. ಗ್ಯಾಸ್ ನಂಬಿಕೊAಡು ಜೀವನ ಸಾಗಿಸುವವರು ಇಂದು ಬೀದಿಗೆ ಬಂದಿದ್ದಾರೆ. ಜನತೆಯ ಹಿತ ಕಾಪಾಡಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಮುಂದಾಗಬೇಕು ಎಂದು ಹೇಳಿದರು.

ಜಿಲ್ಲಾ ಸಮಿತಿ ಸದಸ್ಯ ಎ.ಸಿ. ಸಾಬು ಮಾತನಾಡಿ, ಕಟ್ಟಿಗೆ ಒಲೆ ಬಿಟ್ಟು ಗ್ಯಾಸ್ ಬಳಸಿ ಹೋಗೆ ರಹಿತ ಜೀವನ ನಿಮ್ಮದಾಗಿಸಿ ಎಂದು ಹೇಳಿಕೊಂಡು ಬಂದ ಕೇಂದ್ರ ಸರಕಾರವು ಮತ್ತೊಮ್ಮೆ ಜನತೆಯನ್ನು ಗ್ಯಾಸ್ ಬೆಲೆ ಏರಿಕೆಗೊಳಿಸಿ ಸಂಕಷ್ಟಕ್ಕೆ ತಳ್ಳಿದೆ ಎಂದು ಆರೋಪಿಸಿದರು.

ಗ್ಯಾಸ್ ಬೆಲೆ ಎರಿಕೆಗೊಳಿಸಿರುವ ಕೇಂದ್ರ ಸರ್ಕಾರವು ಜನರ ಮೇಲೆ ಒತ್ತಡ ಹೇರುವುದನ್ನು ಬಿಟ್ಟು ಶೀಘ್ರದಲ್ಲೇ ಬೆಲೆ ಇಳಿಸಬೇಕು ಎಂದು ಪಕ್ಷದ ವತಿಯಿಂದ ಒತ್ತಾಯ ಮಾಡುತ್ತಿದ್ದೇವೆ ಎಂದು ಹೇಳಿದರು.

ಸಿ.ಪಿ.ಐ. ಪಕ್ಷದ ಪ್ರಮುಖರಾದ ವಕೀಲ ಕೆ.ವಿ. ಸುನೀಲ್ ಮಾತನಾಡಿ, ಇತ್ತೀಚೆಗೆ ದೇಶದ ತೈಲ ಮಾರುಕಟ್ಟೆ ಕಂಪನಿಗಳು ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ದರಗಳಲ್ಲಿ ಹೆಚ್ಚಳ ಮಾಡಿರುವುದು ದೇಶದ ಬಡ ಹಾಗೂ ಮಧ್ಯಮ ವರ್ಗದ ಜನರ ಮೇಲೆ ಮತ್ತೊಂದು ಭಾರೀ ಹೊರೆ ಹಾಕಿದಂತಾಗಿದೆ.

ಸಿಪಿಐಎAನ ಜಿಲ್ಲಾ ಮುಖಂಡರಾದ ಡಾ. ಇ.ಆರ್. ದುರ್ಗಾಪ್ರಸಾದ್ ಮಾತನಾಡಿ, ವಿಶ್ವದ ಮುಂದೆ ಭಾರತದ ಸ್ವಾಭಿಮಾನವನ್ನು ರಕ್ಷಿಸುವ ಬಲವಾದ ರಾಜತಾಂತ್ರಿಕ ನಿಲುವು ತಾಳಬೇಕಾದ ಸಂದರ್ಭದಲ್ಲಿ ಸರ್ಕಾರದ ದುರ್ಬಲ ಧೋರಣೆ ಕಂಡುಬರುತ್ತಿರುವುದು ವಿಷಾದನೀಯ. ಸಾಮಾನ್ಯ ಜನರ ಬದುಕನ್ನು ದುಬಾರಿಯಾಗಿಸುತ್ತಿರುವ ಕೇಂದ್ರ ಬಿಜೆಪಿ ಸರ್ಕಾರದ ನೀತಿಗಳನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದರು.

ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿಯ ಸತೀಶ್, ಸಿಪಿಐಎಂನ ಶಾಖಾ ಘಟಕದ ಸದಸ್ಯರಾದ ಕೆ.ಎಸ್. ರತೀಶ್, ಪಿ. ಖಾಲಿದ್, ಕೆ.ಕೆ. ಹರಿದಾಸ್, ಕೆ.ಎ. ಖಾಸಿಂ, ಡಿವೈಎಫ್‌ಐನ ಜಿಲ್ಲಾ ಮುಖಂಡರಾದ ಸಾದಿಕ್, ಸಿಪಿಐಎಂನ ಶಾಖಾ ಕಾರ್ಯದರ್ಶಿ ಕೆ.ಎಸ್. ಶಾಜಿ ರಮೇಶ್ ಸೇರಿದಂತೆ ಪಕ್ಷದ ಇನ್ನಿತರ ಮುಖಂಡರು ಭಾಗವಹಿಸಿದ್ದರು. ಬೆಲೆ ಏರಿಕೆ ವಿರುದ್ಧ ಘೋಷಣೆಗಳನ್ನು ಕೂಗಿದರು.