ಮಡಿಕೇರಿ, ಮಾ. ೧೫: ಬೆಂಗಳೂರು ರಾಜ್ಯದ ರಾಜಧಾನಿ... ಇಲ್ಲಿನ ಯಲಹಂಕ ವ್ಯಾಪ್ತಿಯಲ್ಲಿ ಕಳೆದೆರಡು ದಿನಗಳಿಂದ ಕೊಡಗಿನ ಸಂಭ್ರಮ ಅಲ್ಲಿನ ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಸಾವಿರಾರು ಕೊಡವರು ಒಂದೆಡೆ ಕಲೆತದ್ದು ವಿಶೇಷವಾಗಿದ್ದರೆ, ಇದರಲ್ಲಿ ಪಾಲ್ಗೊಂಡವರ ಉತ್ಸಾಹವೂ ಇಮ್ಮಡಿಗೊಂಡಿತ್ತು. ಇದು ಬೆಂಗಳೂರೋ... ಅಥವಾ ಕೊಡವರ ತವರು ಜಿಲ್ಲೆಯಾದ ಕೊಡಗೋ ಎಂಬAತೆ ಎರಡು ದಿನಗಳ ಕಾಲ ಇಲ್ಲಿ ಸಡಗರದ ವಾತಾವರಣ ಕಂಡುಬAದಿತು.

ಒAದೆಡೆ ಪುರುಷರ ಹಾಕಿ ರಭಸ, ಮತ್ತೊಂದೆಡೆ ಮಹಿಳೆಯರ ಹಾಕಿ ಪಂದ್ಯದ ಪೈಪೋಟಿ, ಥ್ರೋಬಾಲ್ ಪಂದ್ಯದ ಬಿರುಸು... ಕೊಡಗಿನ; ಕೊಡವರ ವಿಶೇಷ ತಿಂಡಿ - ತಿನಿಸುಗಳ ಆಹಾರ ಮೇಳದಲ್ಲಿ ಸವಿ - ಸವಿಯಾದ ಊಟೋಪಚಾರ, ಸಂತೆಮೇಳ, ಮಕ್ಕಳ ವೈವಿಧ್ಯತೆಗಳು... ನಂಗಡ ನೆಲ - ನಂಗಡ ನಮ್ಮೆ ಹೆಸರಿನಲ್ಲಿ ಬೆಂಗಳೂರು ಕೊಡವ ಸಮಾಜಕ್ಕೆ ದೊರೆತಿರುವ ಯಲಹಂಕ ಹೊಸಳ್ಳಿಯಲ್ಲಿ ಮೇಳೈಸಿತ್ತು. ವಾರಾಂತ್ಯದ ಹಿನ್ನೆಲೆಯಲ್ಲಿ ಸಾವಿರಾರು ಮಂದಿ ಇಲ್ಲಿ ಒಂದಾಗಿ ಕಲೆತಿದ್ದರು. ಶನಿವಾರ ಹಾಗೂ ಭಾನುವಾರ ಬೆಳಿಗ್ಗೆ ೯ ರಿಂದ ತಡರಾತ್ರಿಯ ತನಕವೂ ಈ ಪ್ರದೇಶ ಚಟುವಟಿಕೆಗಳ ತಾಣವಾಗಿತ್ತು.

ಕ್ರೀಡಾಕಲರವದ ನಡುವೆ ಭಾನುವಾರ ವಿಶೇಷವಾಗಿ ಮೇಳೈಸಿದ್ದು, ಕೊಡವ ಸಂಸ್ಕೃತಿಯ ಪ್ರತೀಕವಾಗಿರುವ ಕೊಂಬ್ ಕೊಟ್ಟ್ ವಾಲಗದ ವೈಭವ... ಹಾಕಿ, ಥ್ರೋಬಾಲ್ ಕ್ರೀಡೆಗಳೊಂದಿಗೆ ವಿಶೇಷವಾಗಿ ಕೊಡವ ವಾಲಗ ಸ್ಪರ್ಧೆಯನ್ನೂ ಆಯೋಜಿಸಲಾಗಿದ್ದು, ಕೊಡವ ಸಂಸ್ಕೃತಿಯ ಅವಿಭಾಜ್ಯ ಅಂಗದAತಿರುವ ವಾಲಗದಲ್ಲಿ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಮಿಳಿತವಾಗಿರುವ ೧೩ ಪ್ರಾಕಾರಗಳ ವಾದ್ಯ ನುಡಿಸುವ ಸ್ಪರ್ಧೆ ಈ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತಂದAತಿತ್ತು. ವಾಲಗದ ನಿನಾದಕ್ಕೆ ನೆರೆದಿದ್ದ ಮಂದಿ ಕುಳಿತಲ್ಲಿ - ನಿಂತಲ್ಲಿ ಹೆಜ್ಜೆ ಹಾಕುವ ಮೂಲಕ ಉತ್ತೇಜನ ನೀಡಿದರು. ಕೊಡಗಿನಿಂದ ಹಲವು ವಾಲಗ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.

ಕ್ರೀಡಾ ಸ್ಪರ್ಧೆಗಳು ಬೆಂಗಳೂರು ವ್ಯಾಪ್ತಿಯ ಅಂತರ ಕೊಡವ ಸಂಘಗಳ ನಡುವೆ ಆಯೋಜಿತಗೊಂಡಿತ್ತು. ಎಲ್ಲಾ ಸ್ಪರ್ಧೆಗಳ ಫೈನಲ್ ಹೊನಲು ಬೆಳಕಿನಲ್ಲಿ ನಡೆಯಿತು. ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಸುರೇಶ್ ನಂಜಪ್ಪ ತಂಡದ ನೇತೃತ್ವದಲ್ಲಿ ಸಮಾಜದ ವಿವಿಧ ಉಪ ಸಮಿತಿಗಳಾದ ಪೊಮ್ಮಕ್ಕಡ ಕೂಟ, ಕ್ರೀಡಾ ಸಮಿತಿ, ಸಾಂಸ್ಕೃತಿಕ ಸಮಿತಿ, ಯೂತ್ ಕೌನ್ಸಿಲ್‌ನಂತಹ ವಿಭಾಗಗಳು ಕಾರ್ಯಕ್ರಮದ ಯಶಸ್ಸಿಗೆ ಶ್ರಮವಹಿಸಿದ್ದವು. ಫೈನಲ್ ಸೇರಿದಂತೆ ಸಭಾ ಕಾರ್ಯಕ್ರಮದಲ್ಲಿ ಪ್ರಮುಖರು, ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು. ಆಟ್ - ಕೊಟ್ಟ್ - ಪಾಟ್‌ನ ಸಂಭ್ರಮದಲ್ಲಿ ಯುವಜನತೆ ಭಾಗಿಗಳಾಗಿದ್ದರು.