ವೀರಾಜಪೇಟೆ, ಮಾ. ೧೩: ವೀರಾಜಪೇಟೆ ನಗರದ ಕೊಡವ ಸಮಾಜದ ರಸ್ತೆಯಿಂದ ಅಮ್ಮತ್ತಿ - ಒಂಟಿಯAಗಡಿ ಮುಖ್ಯರಸ್ತೆಯ ಬದಿಯಲ್ಲಿ ದೇವಣಗೇರಿ ಪ್ಲಾಂಟರ್ಸ್ ಕ್ಲಬ್ ವತಿಯಿಂದ ಶ್ರಮದಾನ ಮಾಡಿ ಸ್ವಚ್ಛತಾ ಕಾರ್ಯ ನಡೆಸಲಾಯಿತು.

ದೇವಣಗೇರಿ ರಸ್ತೆಯ ಕೋದಂಡಮೊಟ್ಟೆ ಎಂಬಲ್ಲಿ ಕಸದ ರಾಶಿ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿತ್ತು. ಕೆಲವರು ತಮ್ಮ ಅನುಪಯುಕ್ತ ವಸ್ತುಗಳನ್ನು ಬಿಸಾಡಿಹೋಗಿದ್ದರು. ಇದನ್ನು ಅರಿತ ಕ್ಲಬ್ ಸದಸ್ಯರು ಗ್ರಾಮ ಪಂಚಾಯಿತಿ ಸಹಕಾರದೊಂದಿಗೆ ಕಾರ್ಮಿಕರು ನೆರವಿನಿಂದ ಸುಮಾರು ಅರವತ್ತು ಚೀಲದಲ್ಲಿ ಕಸದ ರಾಶಿ ಸಂಗ್ರಹಿಸಿ ವೀರಾಜಪೇಟೆ ಪುರಸಭೆಗೆ ಸೇರಿದ ಕಸ ವಿಲೇವಾರಿ ಘಟಕಕ್ಕೆ ತಂದು ಹಾಕಿ ಮಾನವೀಯತೆ ಮೆರೆದರು. ಬಳಿಕ ಕಸ ಹಾಕದಂತೆ ಎಚ್ಚರಿಕೆ ಫಲಕ ಅಳವಡಿಸಲಾಯಿತು.

ಕ್ಲಬ್‌ನ ಸದಸ್ಯರಾದ ಮೂಕೊಂಡ ಶಶಿ ಸುಬ್ರಮಣಿ ಮಾತನಾಡಿ, ಕೊಡಗು ಸುಂದರ ಜಿಲ್ಲೆ, ಕೊಡಗಿನ ಕಾಶ್ಮೀರ ಹಚ್ಚಹಸುರಿನ ತಾಣ ಎಂದು ಹೆಸರು ವಾಸಿಯಾಗಿದೆ. ಪ್ರವಾಸಿಗರು ಇಲ್ಲಿ ಬಂದು ತಾವು ಉಪಯೋಗಿಸಿದ ವಸ್ತುಗಳನ್ನು ಹಾಗೂ ಮದ್ಯದ ಬಾಟಲಿಗಳನ್ನು ಎಲ್ಲೆಂದರಲ್ಲಿ ಬಿಸಾಕುತ್ತಿದ್ದಾರೆ. ಇದರಿಂದ ಪರಿಸರ ನಾಶವಾಗುತ್ತಿದೆ. ಮೇಯಲು ಬಿಟ್ಟ ಹಸು, ಕರುಗಳು, ನಾಯಿಗಳು ಇದನ್ನು ತಿಂದು ಆರೋಗ್ಯದಲ್ಲಿ ಎರುಪೇರು ಆಗುತ್ತಿದೆ. ಆದುದರಿಂದ ಈ ಭಾಗದಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿ ಕಸ ಹಾಕುವವರಿಗೆ ಎರಡು ಸಾವಿರ ದಂಡ ವಿಧಿಸುವುದಲ್ಲದೇ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಕ್ಲಬ್‌ನ ಸದಸ್ಯರು ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ನಿರ್ಧಾರ ಕೈಗೊಂಡಿದ್ದೇವೆ, ಇದೇ ರೀತಿ ತಾಲೂಕಿನ ಎಲ್ಲಾ ಗ್ರಾಮದಲ್ಲೂ ನಡೆಸಬೇಕು ಎಂದು ತಿಳಿಸಿದರು.

ಈ ಸಂದರ್ಭ ಕ್ಲಬ್ ಅಧ್ಯಕ್ಷ ಐಚಂಡ ಈರಪ್ಪ, ಸದಸ್ಯರಾದ ರಾಜ ಬೋಪಣ್ಣ, ಆಲಪಂಡ ಮೊಣ್ಣಯ್ಯ, ರವಿ, ಚಂಬAಡ ಮುದ್ದಪ್ಪ ಸೇರಿದಂತೆ ಹಲವಾರು ಸದಸ್ಯರು ಭಾಗವಹಿಸಿದ್ದರು.