ವಿಶೇಷ ವರದಿ: ಹೆಚ್.ಕೆ. ಜಗದೀಶ್
ಗೋಣಿಕೊಪ್ಪಲು, ಮಾ. ೧೩: ದೂರದ ಅಸ್ಸಾಂನಿAದ ಕಾರ್ಮಿಕರಾಗಿ ಕೊಡಗಿನ ನಾನಾ ಭಾಗದ ರೈತರ, ಬೆಳೆಗಾರರ ಕಾಫಿ ತೋಟಕ್ಕೆ ಆಗಮಿಸಿದ ಅಸ್ಸಾಂ ಕಾರ್ಮಿಕರು ನೆಲೆಕಂಡುಕೊAಡಿದ್ದು ತೋಟದಲ್ಲಿರುವ ಕರಿಮೆಣಸಿನ ಮೇಲೆ ಕಣ್ಣಿಟ್ಟಿದ್ದಾರೆ. ಕಾರ್ಮಿಕರಾಗಿ ದುಡಿಸಿಕೊಳ್ಳುತ್ತಿರುವ ಬೆಳೆಗಾರರು ಇವರಿಂದ ಎಚ್ಚರವಹಿಸುವ ಅನಿವಾರ್ಯತೆ ಎದುರಾಗಿದೆ. ಬಂಗಾರದ ಬೆಳೆಗೆ ಹೆಚ್ಚಿನ ಹಣ ಲಭಿಸುತ್ತಿದೆ ಎಂದು ಅಸ್ಸಾಂ ಕಾರ್ಮಿಕರಿಗೆ ತಿಳಿಯುತ್ತಿದ್ದಂತೆಯೇ, ಇವುಗಳನ್ನು ಕಳ್ಳತನ ಮಾಡುವ ವಾಮಮಾರ್ಗವನ್ನು ಕಂಡುಕೊAಡಿದ್ದಾರೆ.
ಕಳ್ಳತನದಿAದ ಬರುವ ಕರಿಮೆಣಸನ್ನು ಖರೀದಿಸಲು ಗೋಣಿಕೊಪ್ಪ ನಗರದ ಬಸ್ ನಿಲ್ದಾಣದ ಆಸು ಪಾಸಿನಲ್ಲಿ ಇರುವ ಕೆಲವು ಚಿಲ್ಲರೆ ವ್ಯಾಪಾರಿಗಳು ಅಸ್ಸಾಂ ಕಾರ್ಮಿಕರು ಆಗಮಿಸುವುದನ್ನೇ ಎದುರು ನೋಡುತ್ತಿದ್ದಾರೆ. ಕೈಚೀಲಗಳಲ್ಲಿ ತರುವ ಹಸಿಯ ಕರಿಮೆಣಸನ್ನು ಸಿಕ್ಕಿದ ಬೆಲೆಗೆ ಮಾರಾಟ ಮಾಡಿ ಯಾರ ಭಯವಿಲ್ಲದಂತೆ ಇಲ್ಲಿಂದ ತೆರಳುತ್ತಿದ್ದಾರೆ. ಕದ್ದು ತರುವ ಕರಿಮೆಣಸಿಗೆ ಗೋಣಿಕೊಪ್ಪ ಪಟ್ಟಣವು ರಾಜ ಮಾರ್ಗವಾಗಿ ಪರಿಣಮಿಸಿದೆ. ರೈತರ, ಬೆಳೆಗಾರರ ತೋಟಗಳಿಂದ ಕರಿಮೆಣಸನ್ನು ಅಕ್ರಮವಾಗಿ ತರುವ ಮೂಲಕ ವಾರದ ಸಂತೆ ದಿನದಂದು ಸಿಕ್ಕಿದ ಹಣಕ್ಕೆ ಮಾರಾಟ ಮಾಡಿ ಅದರಿಂದ ಬರುವ ಹಣದಿಂದ ತಮಗೆ ಬೇಕಾದ ವಸ್ತುಗಳನ್ನು ಖರೀದಿಸಿ ತೆರಳುತ್ತಿರುವುದು ಇದೀಗ ಪಟ್ಟಣದಲ್ಲಿ ಕಂಡು ಬರುತ್ತಿದೆ. ಕಳ್ಳತನದಿಂದ ತರುವ ಕರಿಮೆಣಸಿಗೆ ಕೆಲವು ಮಧ್ಯವರ್ತಕರು ಮುಗಿಬೀಳುತ್ತಿದ್ದು ಇಂತಹವರಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದಾರೆ. ಇದರಿಂದ ವಾರ ವಾರದ ಸಂತೆಯ ದಿನದಂದು ಕರಿಮೆಣಸು ಪಟ್ಟಣದ ಮಾರ್ಕೆಟ್ ಆವರಣದಲ್ಲಿ ರಾಜರೋಷವಾಗಿ ಬಿಕರಿಯಾಗುತ್ತಿವೆ.
ಕಾರ್ಮಿಕರ ಕೊರತೆಯನ್ನು ಎದುರಿಸುತ್ತಿರುವ ಕೊಡಗಿನ ಬೆಳೆಗಾರರು ಅಸ್ಸಾಂ ಕಾರ್ಮಿಕರ ಮೇಲೆಯೇ ಅವಲಂಬನೆಯಾಗಿರುವುದರಿAದ ಇಂತಹ ವಿಷಯಗಳಿಗೆ ಅಷ್ಟಾಗಿ ತಲೆಕೆಡಿಸಿಕೊಳ್ಳುತ್ತಿಲ್ಲ. ಇದನ್ನು ಅರಿತ ಕಾರ್ಮಿಕರು ಕರಿಮೆಣಸನ್ನು ಸಣ್ಣಪುಟ್ಟ ಕೈಚೀಲದಲ್ಲಿ ಹಸಿಹಸಿಯಾಗಿಯೇ ತಂದು ಮಾರಾಟ ಮಾಡಿ ತೆರಳುತ್ತಿದ್ದಾರೆ.
ಕೊಡಗಿನ ಬೆಳೆಗಾರರು ಕರಿಮೆಣಸು ಕುಯ್ಯುವ ಸಂದರ್ಭದಲ್ಲಿ ವಿಶೇಷವಾಗಿ ಕಾರ್ಮಿಕರ ಮೇಲೆ ನಿಗಾವಹಿಸುವುದು ಅಗತ್ಯವಾಗಿದೆ. ನಿರ್ಲಕ್ಷö್ಯವಹಿಸಿದ್ದಲ್ಲಿ ಮುಂದೆ ಸಾಕಷ್ಟು ಪರಿಣಾಮಗಳನ್ನು ಎದುರಿಸಬೇಕಾದ ಅನಿವಾರ್ಯತೆ ಎದುರಾಗಲಿದೆ.