ಶನಿವಾರಸAತೆ, ಮಾ. ೧೨: ಶಾಲೆಗಳು ಸರ್ಕಾರಿಯಾಗಲೀ ಖಾಸಗಿಯಾಗಲಿ ಗುಣಾತ್ಮಕ ಶಿಕ್ಷಣ ದೊರೆಯಬೇಕು. ಶಾಲೆ ತೆರೆಯುವುದು ಮುಖ್ಯವಲ್ಲ, ಉತ್ತಮ ಗುಣಮಟ್ಟದ ಶಿಕ್ಷಣ ಕೊಡುವುದು ಮುಖ್ಯ ಎಂದು ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಕೃಷ್ಣಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ವಿಘ್ನೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಬ್ರೆöÊಟ್ ಅಕಾಡೆಮಿ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವ “ಬ್ರೆöÊಟ್ ದರ್ಪಣ ೨೦೨೫-೨೬” ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾವಂತ ಪೋಷಕರು ನುರಿತ ಶಿಕ್ಷಕರಿರುವ, ಮೂಲ ಸೌಲಭ್ಯಗಳಿರುವ ಶಾಲೆಗಳನ್ನೇ ಆಯ್ಕೆ ಮಾಡುತ್ತಾರೆ. ಅಂಕ ಗಳಿಸುವಿಕೆಯೇ ಶಿಕ್ಷಣವಲ್ಲ; ಕಲಿಕೆ ಪ್ರಾಯೋಗಿಕವಾಗಿ ಸಂವಹನ ಕಲಿಕಾ ಶಕ್ತಿ ಮಕ್ಕಳಲ್ಲಿ ಬರಬೇಕು. ಶಾಲೆಗಳು ಪೋಷಕರು ಇಚ್ಛಿಸುವ ಗುಣಾತ್ಮಕ ಶಿಕ್ಷಣ ಕೊಡಬೇಕು ಎಂದು ಕರೆ ನೀಡಿದರು. ಮುಖ್ಯ ಅತಿಥಿ ವೃತ್ತ ನಿರೀಕ್ಷಕ ಜಿ.ಕೃಷ್ಣರಾಜ್ ಮಾತನಾಡಿ, ಪ್ರತಿಬಿಂಬಿಸುವ ಶಿಕ್ಷಣ ಪ್ರಗತಿ ಕಾಣುತ್ತದೆ. ಪೋಷಕರು ಮಕ್ಕಳ ಸುರಕ್ಷತೆಯ ಬಗ್ಗೆ ಆಲೋಚಿಸಬೇಕು. ಇಂದು ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಮೊಬೈಲ್ ಫೋನ್‌ಗಳ ಬಳಕೆ ಮುಖ್ಯ ಕಾರಣವಾಗಿದೆ. ಮಕ್ಕಳ ಬಾಲ್ಯ ಮೊಬೈಲ್‌ನಲ್ಲೇ ಕಳೆದು ಹೋಗುತ್ತಿದ್ದು ಪೋಷಕರು ಎಚ್ಚರ ವಹಿಸಬೇಕು ಎಂದರು.

ಗೌರವ ಅತಿಥಿ ಪತ್ರಕರ್ತೆ ಶ.ಗ ನಯನತಾರಾ ಮಾತನಾಡಿ, ಶಾಲಾ ವಾರ್ಷಿಕೋತ್ಸವವು ಮಕ್ಕಳ ಸಂಭ್ರಮದ ಹಬ್ಬ. ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಬಹುಮುಖ ಪ್ರತಿಭೆಯನ್ನು ಪ್ರದರ್ಶಿಸುವ, ಶೈಕ್ಷಣಿಕ ಸಾಧನೆಗಳನ್ನು ಸಂಭ್ರಮಿಸುವ ಹಾಗೂ ಶಾಲಾ ಸಮುದಾಯವನ್ನು ಒಂದೆಡೆ ಸೇರಿಸುವ ಪ್ರಮುಖ ಶಾಲಾ ಹಬ್ಬವಾಗಿದೆ ಎಂದರು.

ಮುಖ್ಯ ಭಾಷಣಕಾರ ಎಸ್ ಭಾರ್ಗವ್ ಎಂಸಿಎ ಮಾತನಾಡಿ, ಅಂತರರಾಷ್ಟಿçÃಯ ಹಾಗೂ ರಾಜ್ಯ ಶಿಕ್ಷಣದಲ್ಲಿ ವ್ಯತ್ಯಾಸವಿದೆ. ಕೃತಕ ಬುದ್ಧಿವಂತಿಕೆಯನ್ನು ಬಳಸಲಾಗುತ್ತಿದೆ. ಮನಸ್ಸಿನಲ್ಲಿ ಮೂಡುವ ಆಲೋಚನೆಗಳ ಬಗ್ಗೆ ಮಕ್ಕಳು ಜಾಗೃತರಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಪಠ್ಯ, ಪಠ್ಯೇತರ, ಕ್ರೀಡಾ ಚಟುವಟಿಕೆಗಳ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಅತಿಥಿ ಗಣ್ಯರು ಬಹುಮಾನ ವಿತರಿಸಿದರು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿ ರಂಜಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬ್ರೆöÊಟ್ ಅಕಾಡೆಮಿ ವಿದ್ಯಾಸಂಸ್ಥೆ ಅಧ್ಯಕ್ಷ ಪರಮೇಶ್ ಮಾತನಾಡಿದರು. ಸಂಸ್ಥೆ ಕಾರ್ಯದರ್ಶಿ ಹೇಮಾ ಪರಮೇಶ್, ಪ್ರಾಂಶುಪಾಲ ಹರೀಶ ಲಕ್ಷö್ಮಣ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಗೀತಾ ಹರೀಶ್, ದುಂಡಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಭವಾನಿ ಗುರುಪ್ರಸನ್ನ, ಸಮೂಹ ಸಂಪನ್ನೂಲ ವ್ಯಕ್ತಿಗಳಾದ ಸಿ.ಕೆ ದಿನೇಶ್, ಆರ್ ರವೀಶ್, ಮುರಳಿಧರ್, ಶೇಖರ್, ಶಿಕ್ಷಕವೃಂದದವರು ಉಪಸ್ಥಿತರಿದ್ದರು.

ವಿದ್ಯಾರ್ಥಿನಿಯರಾದ ವಾಸುಕಿ ಸ್ವಾಗತಿಸಿ, ಜೈವಿತಾ ವಂದಿಸಿದರು. ಸುನೈನಾ ಕಾರ್ಯಕ್ರಮ ನಿರೂಪಿಸಿದರು.