ಮಡಿಕೇರಿ, ಮಾ. ೧೨: ಕುಶಾಲನಗರ ತಾಲೂಕಿನ ಚೆಟ್ಟಳ್ಳಿಯ ಚೇರಳ ಗೌಡ ಸಮಾಜದ ನೂತನ ಸಮುದಾಯ ಭವನದ ಉದ್ಘಾಟನಾ ಸಮಾರಂಭ ತಾ.೧೫ ರಂದು ನಡೆಯಲಿದೆ ಎಂದು ಅಧ್ಯಕ್ಷ ಅಯ್ಯಂಡ್ರ ರಾಘವಯ್ಯ ಮಾಹಿತಿ ನೀಡಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾನಿಗಳು, ಸಮಾಜದ ಬಾಂಧವರು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಸಹಕಾರದಿಂದ ನೂತನ ಸಮುದಾಯ ಭವನವನ್ನು ಎಲ್ಲಾ ಮೂಲಭೂತ ಸೌಲಭ್ಯಗಳೊಂದಿಗೆ ನಿರ್ಮಿಸಲಾಗಿದೆ. ನೂತನ ಸಮುದಾಯ ಭವನವನ್ನು ಬೆಳಿಗ್ಗೆ ೧೦ ಗಂಟೆಗೆ ವಿಧಾನಸಭೆಯ ಮಾಜಿ ಅಧ್ಯಕ್ಷ ಕೊಂಬಾರನ ಜಿ. ಬೋಪಯ್ಯ ಅವರು ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ, ಮಾಜಿ ಸಚಿವ ಮಂಡೇಪAಡ ಪಿ. ಅಪ್ಪಚ್ಚುರಂಜನ್, ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಮಂಡೇಪAಡ ಪಿ. ಸುನಿಲ್ ಸುಬ್ರಮಣಿ ಪಾಲ್ಗೊಳ್ಳಲಿದ್ದಾರೆ.
ವಿಶೇಷ ಆಹ್ವಾನಿತರಾಗಿ ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ ಕರಂದ್ಲಾಜೆ, ಉಪಾಧ್ಯಕ್ಷ ಡಾ.ತೇನನ ರಾಜೇಶ್, ಕೊಡಗು ಗೌಡ ಸಮಾಜದ ಅಧ್ಯಕ್ಷ ದಂಬೆಕೋಡಿ ಆನಂದ, ಮಾಜಿ ಅಧ್ಯಕ್ಷ ಪೇರಿಯನ ಜಯಾನಂದ, ಜಿ.ಪಂ ಮಾಜಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ, ಸಮಾಜ ಸೇವಕರು ಹಾಗೂ ಬೆಳೆಗಾರ ನಾಪಂಡ ಮುತ್ತಪ್ಪ, ಉದ್ಯಮಿ ಸುಳ್ಯಕೋಡಿ ಪ್ರದೀಪ್ ಕುಮಾರ್ ಹಾಗೂ ಕಾಫಿ ಬೆಳೆಗಾರ ಮರದಾಳು ಬಸಪ್ಪ ಉಪಸ್ಥಿತರಿರುವರು ಎಂದು ತಿಳಿಸಿದರು.
ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೫ ಗ್ರಾಮಗಳ ಪೈಕಿ ಚೇರಳ ಗ್ರಾಮದ ಆಗ್ನೇಯ ಭಾಗದಲ್ಲಿ ನೆಲೆಸಿರುವ ೨೨ ಕುಟುಂಬದ ಗೌಡ ಸಮುದಾಯದವರು ೨೦೦೮ರಲ್ಲಿ ಮರದಾಳು ದೊಡ್ಡಮನೆಯಲ್ಲಿ ಸಭೆ ಸೇರಿ ಸಂಘವನ್ನು ರಚಿಸಲಾಯಿತು. ಮೂರು ವರ್ಷಗಳ ಸತತ ಪ್ರಯತ್ನದ ನಂತರ ಸೂಕ್ತ ನಿವೇಶನವನ್ನು ಖರೀದಿ ಮಾಡಲಾಯಿತು. ನಿವೇಶನಕ್ಕೆ ಬೇಕಾದ ಹಣವನ್ನು ಸಮಾಜದ ಪ್ರತಿಯೊಂದು ಕುಟುಂಬದಿAದ ದಾನದ ರೂಪದಲ್ಲಿ ಸಂಗ್ರಹಿಸಿ ೨೦೧೧ರಲ್ಲಿ ಕಟ್ಟಡ ನಿರ್ಮಾಣಕ್ಕೆ ಶಿಲನ್ಯಾಸ ನೆರವೇರಿಸಲಾಯಿತು. ಸದಸ್ಯರು ನೀಡಿದ ದಾನದ ಹಣದಿಂದ ಕಟ್ಟಡ ನಿರ್ಮಾಣ ಪ್ರಾರಂಭವಾಯಿತು. ಸರಕಾರದ ಹಿಂದುಳಿದ ವರ್ಗಗಳ ಇಲಾಖೆಯಿಂದ ೨೦೧೫ ಮತ್ತು ೨೦೨೦ರಲ್ಲಿ ರೂ.೭೦ ಲಕ್ಷ ಬಿಡುಗಡೆಯಾಯಿತು. ಕಟ್ಟಡ ಕಾಮಗಾರಿ ಮುಂದುವರೆದAತೆ ಜಿಲ್ಲೆಯ ಹಾಗೂ ಇತರ ಜಿಲ್ಲೆಗಳಲ್ಲಿ ನೆಲೆಸಿರುವ ಗೌಡ ಸಮುದಾಯದ ಮಂದಿಯಿAದ ದಾನದ ರೂಪದಲ್ಲಿ ೩೦ ಲಕ್ಷ ರೂ. ಹಣ ಸಂಗ್ರಹಿಸಲಾಯಿತು ಎಂದು ರಾಘವಯ್ಯ ವಿವರಿಸಿದರು.
ಕಟ್ಟಡ ನಿರ್ಮಾಣಕ್ಕೆ ರೂ. ೫೦ ಲಕ್ಷದ ಅಗತ್ಯತೆ ಇದ್ದಾಗ ಗೌಡ ಸಮಾಜಗಳ ಒಕ್ಕೂಟ ಸುಮಾರು ೨೦ ಲಕ್ಷ ರೂ. ಗಳನ್ನು ದಾನಿಗಳಿಂದ ಸಂಗ್ರಹಿಸಿ ನೀಡಿತು. ಉಳಿದ ಹಣವನ್ನು ಚೇರಳ ಗೌಡ ಸಮಾಜದ ಸದಸ್ಯರು ಮನೆ ಮನೆಗೆ ತೆರಳಿ ಸಂಗ್ರಹಿಸಿದರು ಎಂದರು.
ಸಹ ಖಜಾಂಚಿ ಪೇರಿಯನ ಉದಯ ಕುಮಾರ್ ಮಾತನಾಡಿ, ಸುಮಾರು ೧೭ ವರ್ಷಗಳ ಸತತ ಪ್ರಯತ್ನದ ನಂತರ ನೂತನ ಭವ್ಯವಾದ ಸಮುದಾಯ ಭವನ ನಿರ್ಮಾಣಗೊಂಡು ಲೋಕಾರ್ಪಣೆಗೊಳ್ಳುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಹೊಸಮನೆ ಪೂವಯ್ಯ, ಉಪ ಕಾರ್ಯದರ್ಶಿ ನೂಜಿಬೈಲು ನಾಣಯ್ಯ, ನಿರ್ದೇಶಕರಾದ ಕಲ್ಪಡ ಶೋಭ ಹಾಗೂ ನೂಜಿಬೈಲು ಅರುಣಾಕ್ಷಿ ಉಪಸ್ಥಿತರಿದ್ದರು.