ಸುಂಟಿಕೊಪ್ಪ, ಮಾ. ೧೦: ಕಂಬಿಬಾಣೆಯ ಶ್ರೀ ರಾಮ ಮತ್ತು ಶ್ರೀ ಚಾಮುಂಡೇಶ್ವರಿ ದೇವಸ್ಥಾನಕ್ಕೆ ನೂತನವಾಗಿ ಸಭಾ ಭವನ ನಿರ್ಮಾಣಕ್ಕೆ ಭೂಮಿಪೂಜೆಯನ್ನು ಮಾಗಡೂರು ತೋಟದ ಮಾಲೀಕ ಹಾಗೂ ಜಾಗ ನೀಡಿದ ದಾನಿಗಳಾದ ಟಿ.ಕೆ. ಸಜೀವ ಅವರು ಇತ್ತೀಚೆಗೆ ನೆರವೇರಿಸಿದರು.
ದೇವಾಲಯದ ಆವರಣದಲ್ಲಿ ಸುಮಾರು ರೂ. ೧೦ ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಸಭಾ ಭವನ ನಿರ್ಮಾಣವಾಗುತ್ತಿದ್ದು, ದೇವಾಲಯದ ಅರ್ಚಕ ಪ್ರಭಾಕರ್ ಕುದ್ದಣ್ಣಯ್ಯ ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆದವು.
ದೇವಾಲಯ ಸಮಿತಿ ಅಧ್ಯಕ್ಷ ಡಾ. ಶಶಿಕಾಂತ ರೈ, ಕಾರ್ಯದರ್ಶಿ ಗಣೇಶ, ಖಜಾಂಚಿ ಅಜಿತ್, ಸಮಿತಿಯ ಪಳಂಗಪ್ಪ ಸಾಬು, ಜಯಂತ್, ಗಂಗಾಧರ, ರವಿಕುಮಾರ್ ಹಾಗೂ ಮಾತೃ ಮಂಡಳಿಯ ಸದಸ್ಯರಾದ ಪೂರ್ಣಿಮ, ಮೀನಾ, ಹರೀಶ್, ರಮಣಿ, ಸುಧಾ ಸೇರಿದಂತೆ ಇತರರು ಹಾಜರಿದ್ದರು. ಇದೇ ಸಂದರ್ಭ ದಾನಿಗಳಾದ ಟಿ.ಕೆ. ಸಜೀವ ಅವರನ್ನು ದೇವಾಲಯದ ಪರವಾಗಿ ಸನ್ಮಾನಿಸಲಾಯಿತು.