ವೀರಾಜಪೇಟೆ, ಮಾ. ೧೦: ಮಂಗಳೂರು ವಿಶ್ವವಿದ್ಯಾನಿಲಯದ ೨೦೨೪-೨೫ನೇ ಸಾಲಿನ ಅಂತಿಮ ಪದವಿ ಪರೀಕ್ಷೆಯಲ್ಲಿ ಡೀವಿನ ಸಲ್ಡಾನ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಶ್ರೀದೇವಿ ಕಾಲೇಜ್ ಆಫ್ ಫ್ಯಾಷನ್ ಡಿಸೈನ್, ಬಲ್ಲಾಳ್ ಭಾಗ್, ಮಂಗಳೂರಿನಲ್ಲಿ ಬಿ.ಎಸ್.ಸಿ. ಇನ್ ಫ್ಯಾಷನ್ ಡಿಸೈನ್ ವ್ಯಾಸಂಗ ಮಾಡಿದ ಇವರು ಫ್ಯಾಷನ್ ಡಿಸೈನ್ ಪದವಿ ವಿಭಾಗದಲ್ಲಿ ಅತಿ ಹೆಚ್ಚು ಅಂಕಗಳಿಸಿ ಮೊದಲ ರ್ಯಾಂಕ್ನೊAದಿಗೆ ಚಿನ್ನದ ಪದಕ ಪಡೆದಿದ್ದಾರೆ. ಡಿವೀನ ಸಲ್ಡಾನ ಮೂಲತಃ ವೀರಾಜಪೇಟೆ ಅಪ್ಪಯ್ಯ ಸ್ವಾಮಿ ರಸ್ತೆಯ ಲಾರ್ಡ್ಸ್ ಮೋಟಾರ್ ಡ್ರೆöÊವಿಂಗ್ ಶಾಲೆಯ ಮುಖ್ಯಸ್ಥರು, ವೀರಾಜಪೇಟೆ ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಬೆನೆಡಿಕ್ಟ್ ಆರ್ ಸಲ್ಡಾನ ಹಾಗೂ ಅನಿತ ಸಲ್ಡಾನ ಅವರ ಪುತ್ರಿ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ವೀರಾಜಪೇಟೆ ಸಂತ ಅನ್ನಮ್ಮ ಶಾಲೆ, ಪದವಿಪೂರ್ವ ಶಿಕ್ಷಣವನ್ನು ಸೈಂಟ್ ಆ್ಯನ್ಸ್ ಪಿ.ಯು. ಕಾಲೇಜಿನಲ್ಲಿ ಪಡೆದಿದ್ದಾರೆ.