ಸುಂಟಿಕೊಪ್ಪ, ಮಾ. ೧೦: ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಪೋಷಣ ಅಭಿಯಾನ ಏರ್ಪಡಿಸಲಾಯಿತು.

ಕಾನ್‌ಬೈಲ್ ಸರಕಾರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಆಯೋಜಿಸಲಾದ ಸಮಾರಂಭವನ್ನು ಮುಖ್ಯ ಅತಿಥಿಯಾಗಿ ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಯು. ಅಸ್ಮಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಸಾವಿತ್ರವ್ವ ಸರಕಾರದ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.

ಆರೋಗ್ಯ ಸುರಕ್ಷಾ ಅಧಿಕಾರಿ ಲತಾಕುಮಾರಿ ಸಿ., ರೋಶಿತ ಅವರುಗಳು ಮಾತನಾಡಿ ಇಂದಿನ ದಿನಗಳಲ್ಲಿ ಗ್ರಾಮೀಣ ಭಾಗದ ಮಹಿಳೆಯರು ಮತ್ತು ಮಕ್ಕಳಲ್ಲಿ ಅನಾರೋಗ್ಯ ಕಾಣಿಸಿಕೊಂಡಾಗ ನಿರ್ಲಕ್ಷö್ಯತೆ ವಹಿಸುತ್ತಿರುವುದರಿಂದ ರೋಗಗಳು ಉಲ್ಭಣವಾಗಲು ಕಾರಣವಾಗುತ್ತಿದೆ. ಯಾವುದೇ ರೀತಿಯಿಂದಲೂ ಮಹಿಳೆಯರು ಮಕ್ಕಳ ಆರೋಗ್ಯದಲ್ಲಿ ಏರುಪೇರು ಕಂಡು ಬಂದಾಗ ನುರಿತ ವೈದ್ಯರು ಸೂಕ್ತ ರೀತಿಯ ಪರೀಕ್ಷೆ ಒಳಗೊಂಡು ರೋಗದಿಂದ ಮುಕ್ತಿ ಹೊಂದುವAತೆ ಸಲಹೆ ನೀಡಿದರು.

ಸರಕಾರವು ಪೋಷಣ ಅಭಿಯಾನ ಯೋಜನೆಯನ್ನು ಜಾರಿಗೆ ತಂದಿದ್ದು, ಜನತೆಯು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಸಮಾರAಭದ ಅಧ್ಯಕ್ಷತೆಯನ್ನು ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಕೆ.ಎಸ್.ಮೂರ್ತಿ ವಹಿಸಿದರು. ಸಮಾರಂಭದ ವೇದಿಕೆಯಲ್ಲಿ ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ನಿಕಟಪೂರ್ವ ಅಧ್ಯಕ್ಷ ಮಂದೋಡಿ ಜಗನ್ನಾಥ್, ನಿಕಟಪೂರ್ವ ಉಪಾಧ್ಯಕ್ಷ ಬಿ.ಈ. ಸತೀಶ್, ಸದಸ್ಯರುಗಳಾದ ರಾಧಮಣಿ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಚಂದ್ರಶೇಖರ್, ಶಿಕ್ಷಕರುಗಳಾದ ಪಾರ್ವತಿ, ಮಾಲಾದೇವಿ, ಸುಂಟಿಕೊಪ್ಪ ವಾಹನ ಚಾಲಕರ ಸಂಘದ ಅಧ್ಯಕ್ಷ ಕಿಟ್ಟಣ್ಣ ರೈ, ಫ್ರೆಂಡ್ಸ್ ಯೂತ್ ಕ್ಲಬ್‌ನ ಅಧ್ಯಕ್ಷ ಶಂಕರನಾರಾಯಣ. ಅಂಗನವಾಡಿ ಕಾರ್ಯಕರ್ತೆಯರಾದ ಯೋಗಿತ, ಶುಭ, ವಿಶಾಲಕ್ಷಿ, ಧನಲಕ್ಷಿö್ಮ, ಶೋಭಾವತಿ, ಸರಳಾ, ಕಾವ್ಯ, ಕೆ.ಜೆ.ಲೀಲಾವತಿ, ಎಸ್.ಎನ್.ಸಾವಿತ್ರಿ ಮತ್ತಿತರರು ಇದ್ದರು.