.*ಗೋಣಿಕೊಪ್ಪ, ಮಾ. ೯: ಕಾಡಿನಲ್ಲಿ ಸಂಚಾರ ಮಾಡುತ್ತಿದ್ದಾಗ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದ ಅಭಿಮನ್ಯು (೨೩) ನರಳಾಟದಲ್ಲಿ ಕೊನೆ ಉಸಿರೆಳೆದಿದೆ.
ತಿತಿಮತಿ ಕಂಠಪುರ ಆನೆ ಕ್ಯಾಂಪ್‌ನಲ್ಲಿ ಭಾನುವಾರ ಸಂಜೆ ೬.೩೦ಕ್ಕೆ ಅಭಿಮನ್ಯು ದೇಹತ್ಯಾಗ ಮಾಡಿದೆ. ಮೈಸೂರು ಜೂನಲ್ಲಿ ಅಭಿಮನ್ಯು ಜನಿಸಿದ. ತುಂಬಾ ರಗಳೆ ಮಾಡಿಕೊಂಡು ಮಾವುತನನ್ನೇ ಕೊಂದ ಅಭಿಮನ್ಯು ಕಂಠಪುರ ಆನೆ ಶಿಬಿರಕ್ಕೆ ಸಂಯಮ ತರಬೇತಿಗೆ ದಾಖಲಾಗಿದ್ದ.
ಕಳೆದ ಮೂರು ವರ್ಷಗಳಿಂದ ಆನೆ ಕ್ಯಾಂಪ್‌ನಲ್ಲಿ ತರಬೇತಿ ಪಡೆಯುತ್ತಿದ್ದ ಅಭಿಮನ್ಯುವನ್ನು ಕಾಡಿನ ಬದುಕಿಗೆ ಒಗ್ಗಿಸಿಕೊಳ್ಳಲು ಅರಣ್ಯಾಧಿಕಾರಿಗಳು ಮಾವುತ ಮತ್ತು ಕಾವಡಿಯೊಂದಿಗೆ ಕಾಡಿಗೆ ಬಿಟ್ಟಿದ್ದರು. ಕಾಡಿನ ಬಗ್ಗೆ ಮಾಹಿತಿ ಇಲ್ಲದ ಅಭಿಮನ್ಯು ಕಾಡಿನ ನಡುವೆ ನಡೆದು ಹೋಗುತ್ತಿದ್ದಾಗ ಎಡವಿ ಹೊಂಡಕ್ಕೆ ಕಾಲು ಸಿಲುಕಿಕೊಂಡಿತ್ತು. ಪರಿಣಾಮ ಕಳೆದ ಒಂಬತ್ತು ತಿಂಗಳಿನಿAದ ಕಾಲಿನ ಚಿಕಿತ್ಸೆಯನ್ನು ಅಭಿಮನ್ಯು ಪಡೆದುಕೊಳ್ಳುತ್ತಿದ್ದ. ಚಿಕಿತ್ಸೆಯಿಂದ ಚೇತರಿಸಿಕೊಳ್ಳುವಂತೆ ಕಾಣಿಸುತ್ತಿದ್ದರೂ, ಒಳಗೊಳಗೆ ಅಭಿಮನ್ಯು ನರಳುತ್ತಿದ್ದ. ಹೀಗಾಗಿ, ವಿಪರೀತ ನೋವಿನಿಂದ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.ಸೋಮವಾರ ಆನೆ ಕ್ಯಾಂಪ್, ಅರಣ್ಯಕ್ಕೆ ಸಂಬAಧಿಸಿದ ಸ್ಥಳದಲ್ಲಿ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಅಭಿಮನ್ಯು ಅಂತ್ಯಕ್ರಿಯೆ ನಡೆಸಲಾಯಿತು. ಡಿ.ಸಿ.ಎಫ್ ಸೀಮಾ, ಎ.ಸಿ.ಎಫ್ ಲಕ್ಷಿ÷್ಮÃಕಾಂತ್, ಆರ್.ಎಫ್.ಓ ದೇವರಾಜು,ಅರಣ್ಯ ಇಲಾಖೆ ಪಶು ವೈದ್ಯಾಧಿಕಾರಿಗಳು, ಪಶು ವೈದ್ಯಾಧಿಕಾರಿ ಭವಿಷ್ಯತ್‌ಕುಮಾರ್, ಮಾವುತ ಕಾವಾಡಿಗರು ಮತ್ತು ಸಿಬ್ಬಂದಿಗಳು ಅಭಿಮನ್ಯುವಿನ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು.
-ಎನ್.ಎನ್. ದಿನೇಶ್