ಸಿದ್ದಾಪುರ, ಮಾ.೯: ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ವಿದ್ಯಾರ್ಥಿನಿ ಮೃತಪಟ್ಟ ಘಟನೆ ಮಾಸುವ ಮುನ್ನವೇ ಆನೆ ದಾಳಿಗೆ ಮಹಿಳೆ ಬಲಿಯಾದ ಘಟನೆ ವರದಿಯಾಗಿದ್ದು, ಮಿತಿಮೀರಿರುವ ಕಾಡಾನೆ-ಮಾನವ ಸಂಘರ್ಷಕ್ಕೆ ಕೊನೆ ಇಲ್ಲ ಎಂಬAತಾಗಿದೆ.

ಇAದು ಬೆಳಿಗ್ಗೆ ಮನೆಯ ಬಳಿ ಸೀಗೆಕಾಯಿ ಎರಕಲು ಹೊರ ತೆರಳಿದ್ದ ಮಹಿಳೆಯ ಮೇಲೆ ಕಾಡಾನೆ ದಾಳಿ ನಡೆಸಿ ಕೊಂದು ಹಾಕಿರುವ ಘಟನೆ ವಾಲ್ನೂರು ಗ್ರಾಮದ ಬಾಳೆಗುಂಡಿ ಹಾಡಿಯಲ್ಲಿ ನಡೆದಿದೆ.

ವಾಲ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳೆಗುಂಡಿಯ ನಿವಾಸಿ ಹಾಗೂ ಅಭ್ಯತ್‌ಮಂಗಲ ಗ್ರಾಮದ ಗ್ರಾಮ ಸಹಾಯಕ ಸ್ವಾಮಿ ಎಂಬವರ ಪತ್ನಿ ೫೦ ವರ್ಷ ಪ್ರಾಯದ ಜಲಜಾಕ್ಷಿ (ಜುಲ) ಮೃತ ದುರ್ದೈವಿ.

ವಾಲ್ನೂರು ಗ್ರಾಮ ಪಂಚಾಯಿತಿಯ ಸದಸ್ಯೆ ಆಗಿದ್ದ ಜಲಜಾಕ್ಷಿ ಅವರು ಸೋಮವಾರ ಬೆಳಿಗ್ಗೆ ಅಂದಾಜು ೧೦ ಗಂಟೆಗೆ ಮನೆ ಸಮೀಪದಲ್ಲೇ ಸೀಗೆಕಾಯಿ ಎರಕಲು ಹೋಗಿದ್ದರು ಎಂದು ತಿಳಿದುಬಂದಿದೆ. ಈ ಸಂದರ್ಭದಲ್ಲಿ ಏಕಾಏಕಿ ಕಾಡಾನೆಯು ಜಲಜಾಕ್ಷಿ ಮೇಲೆ ದಾಳಿ ನಡೆಸಿ ಸೊಂಡಿಲಿನಿAದ ಎತ್ತಿ ಎಸೆದಿದೆ. ಅಲ್ಲದೆ ದಂತದಿAದ ತಿವಿದು ಹಾಕಿದೆ. ಕಾಡಾನೆ ದಾಳಿಗೆ ಸಿಲುಕಿ ಜಲಜಾಕ್ಷಿ ಅವರು ಸ್ಥಳದಲ್ಲಿಯೇ ದುರ್ಮರಣಗೊಂಡಿದ್ದಾರೆ.

ಈ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ ಮೇರೆಗೆ ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್ ಕುಶಾಲನಗರ ತಹಶೀಲ್ದಾರ್ ಕಿರಣ್ ಗೌರಯ್ಯ, ಅರಣ್ಯ ಇಲಾಖೆಯ ಎ.ಸಿ.ಎಫ್ ಗೋಪಾಲ್ ಎ.ಎ, ಕುಶಾಲನಗರ ವಲಯ ಅರಣ್ಯ ಅಧಿಕಾರಿ ರಕ್ಷಿತ್ ಎನ್ ನಗರ್ ಹಾಗೂ ಸಿಬ್ಬಂದಿಗಳು, ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಮೃತ ಮಹಿಳೆಯ ಪತಿ ಸ್ವಾಮಿ ಅವರು ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜಲಜಾಕ್ಷಿ ಅವರ ಮೃತದೇಹವನ್ನು ಸಿದ್ದಾಪುರದ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಯಿತು. ಮೃತರು ಪತಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ. ಆನೆ - ಮಾನವ ಸಂಘರ್ಷಕ್ಕೆ ಸರಕಾರ ತ್ವರಿತ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಅರಣ್ಯ ಇಲಾಖೆಯಿಂದ ತುರ್ತು ಪರಿಹಾರ - ರೂ.೫ ಲಕ್ಷ

ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟ ಜಲಜಾಕ್ಷಿಯವರ ಕುಟುಂಬಕ್ಕೆ ಸರಕಾರದ ವತಿಯಿಂದ ಅರಣ್ಯ ಇಲಾಖೆಯ ಮುಖಾಂತರ ನೀಡುವ ರೂ.೨೦ ಲಕ್ಷ ಪರಿಹಾರದ ಮೊತ್ತದಲ್ಲಿ ಅರಣ್ಯ ಇಲಾಖೆ ವತಿಯಿಂದ ತುರ್ತಾಗಿ ರೂ.೫ ಲಕ್ಷ ಪರಿಹಾರದ ಚೆಕ್ ಅನ್ನು ಎ.ಸಿ.ಎಫ್ ಗೋಪಾಲ್ ಎ.ಎ ಹಾಗೂ ಕುಶಾಲನಗರ ವಲಯ ಅರಣ್ಯ ಅಧಿಕಾರಿ ರಕ್ಷಿತ್ ಅವರು ಶಾಸಕ ಡಾ ಮಂತರ್ ಗೌಡ ಸಮ್ಮುಖದಲ್ಲಿ ಕುಟುಂಬ ವರ್ಗಕ್ಕೆ ನೀಡಿದರು. -ವಾಸು