ಮಡಿಕೇರಿ, ಮಾ. ೯: ವೀರಾಜಪೇಟೆ ಸಮೀಪದ ಚೋಕಂಡಳ್ಳಿ ನಲ್ವತೋಕ್ಲು ಮೊಹಿದೀನ್ ಜುಮಾ ಮಸೀದಿಗೆ ಅನುದಾನ ನೀಡಲು ಒತ್ತಾಯಿಸಿ ಸಂಸದರಿಗೆ ಮನವಿ ಮಾಡಲಾಯಿತು.

ಸಿದ್ದಾಪುರದ ಎಸ್ .ಎನ್. ಡಿ .ಪಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಎಸ್.ಎನ್.ಡಿ.ಪಿ ವನಿತಾ ಮಹಿಳಾ ಸಮಾವೇಶ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮೈಸೂರು -ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್ ಚಾಮರಾಜ ದತ್ತ ಒಡೆಯರ್ ಅವರನ್ನು ವೀರಾಜಪೇಟೆ ತಾಲೂಕು ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಮಜೀದ್ ಚೊಕಂಡಳ್ಳಿ ಅವರ ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿಸಲಾಯಿತು. ಮೊಹಿದೀನ್ ಜುಮಾ ಮಸೀದಿಯ ಕೆಲವು ಕಾಮಗಾರಿಗಳಿಗೆ ಸಂಸದರ ವಿಶೇಷ ನಿಧಿಯಿಂದ ಅನುದಾನವನ್ನು ನೀಡಲು ಮನವಿ ಪತ್ರವನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಜೆಡಿಎಸ್ ಎಸ್.ಸಿ.ಎಸ್.ಟಿ ಘಟಕದ ಜಿಲ್ಲಾಧ್ಯಕ್ಷ ಜಯಮ್ಮ ಅಮ್ಮತ್ತಿ, ಮಡಿಕೇರಿ ತಾಲೂಕು ಕ್ಷೇತ್ರದ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಅಶ್ರಫ್ ಹಾಕತ್ತೂರು, ಕುಶಾಲನಗರ ತಾಲೂಕು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಶಿಯಾಬುದ್ದೀನ್ ವಿ.ಪಿ.ಎಸ್ ನೆಲ್ಯಹುದಿಕೇರಿ. ವೀರಾಜಪೇಟೆ ತಾಲೂಕು ಯುವ ಜನತಾದಳದ ಅಧ್ಯಕ್ಷರಾದ ಸೈಫುದ್ದೀನ್ ಜಾಮಿಯಾಲ ಹಾಜರಿದ್ದರು.