ಕೋವರ್‌ಕೊಲ್ಲಿ ಇಂದ್ರೇಶ್
ಬೆAಗಳೂರು, ಮಾ. ೯: ಕುಟುಂಬ ವಿಭಜನೆ ನಿಬಂಧನೆಗಳ ದುರುಪಯೋಗವನ್ನು ಉಲ್ಲೇಖಿಸಿ, ಐದು ಗುಂಟೆ ಅಥವಾ ಅದಕ್ಕಿಂತ ಕಡಿಮೆ ಅಳತೆಯ ಕೃಷಿ ಭೂಮಿಯ ಭೂ ಪರಿವರ್ತನೆಯನ್ನು ಕಡ್ಡಾಯವಾಗಿ ಮರು ಪರಿಶೀಲನೆಗೆ ಒಳಪಡಿಸಿ ರಾಜ್ಯ ಸರ್ಕಾರ ಕಳೆದ ತಿಂಗಳು ಆದೇಶ ಹೊರಡಿಸಿದೆ.
ಐದು ಗುಂಟೆಗಳಿಗಿAತ ( ಸುಮಾರು ೫೪೪೫ ಚದರ ಅಡಿ, (ಎಕರೆಗೆ ೪೦ ಗುಂಟೆ) ಕಡಿಮೆ ವಿಸ್ತೀರ್ಣದ ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಗಳಿಗೆ ಬಳಕೆ ಮಾಡಲು ಭೂ ಪರಿವರ್ತನೆಯನ್ನು ಕಡ್ಡಾಯವಾಗಿ ಈ ಹಿಂದೆಯೇ ಸರ್ಕಾರ ನಿಷೇಧ ಮಾಡಿತ್ತು. ಆದರೆ ಸಣ್ಣ ರೈತ ಕುಟುಂಬಗಳ ನಡುವೆ ಆಸ್ತಿಯು ವಿಭಜನೆ ಆದಾಗ ಐದು ಗುಂಟೆಗಿAತ ಕಡಿಮೆ ವಿಸ್ತೀರ್ಣ ಪಾಲಿಗೆ ಬಂದಿದ್ದರೆ ಅಂತಹವರು ಕೃಷಿ ಭೂಮಿಯನ್ನು ಪರಿವರ್ತನೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಈ ಅವಕಾಶ ಈಗಲೂ ಮುಂದುವರೆದಿದ್ದು ಅದರಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಕಳೆದ ತಿಂಗಳು ಹೊರಡಿಸಿರುವ ಸುತ್ತೋಲೆಯಲ್ಲಿ ಜಿಲ್ಲಾಧಿಕಾರಿಗಳು ಭೂ ಪರಿವರ್ತನೆಗಾಗಿ ಕಡಿಮೆ ವಿಸ್ತೀರ್ಣದ ಅರ್ಜಿಗಳನ್ನು ಸ್ವೀಕರಿಸಿದಾಗ ಅಂತಹ ಭೂಮಿಯನ್ನು ಗುರುತಿಸಲು ಮತ್ತು ಮುಂದಿನ ಕ್ರಮಕ್ಕಾಗಿ ಫೈಲ್‌ಗಳನ್ನು ಕಡ್ಡಾಯವಾಗಿ ಭೂ ದಾಖಲೆಗಳ ಉಪ ನಿರ್ದೇಶಕರಿಗೆ ಹಿಂತಿರುಗಿಸಲು ಸೂಚಿಸಿದೆ. ಬೆಂಗಳೂರು ಸೇರಿದಂತೆ ಬಹುತೇಕ ಕಡೆಗಳಲ್ಲಿ ಭೂಮಾಲೀಕರು ಸುಲಭ ನೋಂದಣಿಗಾಗಿ ಕೃಷಿ ಭೂಮಿಯನ್ನು ಐದು ಗುಂಟೆಗಳಿಗಿAತ ಕಡಿಮೆ ವಿಸ್ತೀರ್ಣಗಳಾಗಿ ವಿಂಗಡಿಸಿ ಭೂ ಪರಿವರ್ತನೆಯನ್ನು ಸುಲಭವಾಗಿ ಮಾಡಿಸಿಕೊಂಡು ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ನಂತರ ಲಾಭಕ್ಕಾಗಿ ಇತರರಿಗೆ ಮಾರಾಟ ಮಾಡುತ್ತಿರುವ ಪ್ರಕರಣಗಳನ್ನು ಗಮನಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಈ ರೀತಿಯ ಭೂ ಪರಿವರ್ತನೆಯಿಂದ ನಗರ ಪ್ರದೇಶಗಳಲ್ಲಿ ಅಕ್ರಮ ವಸತಿ ಲೇಔಟ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈಗಾಗಲೇ ಸರ್ಕಾರ ಅನಧಿಕೃತ ಲೇ ಔಟ್‌ಗಳ ನಿರ್ಮಾಣಕ್ಕೆ ಸಂಪೂರ್ಣ ತಡೆ ಹಾಕಿದ್ದು ನೋಂದಣಿಯನ್ನೇ ನಿಷೇಧಿಸಲಾಗಿದೆ.
ಹೀಗಾಗಿ ಕುಟುಂಬ ನಿಬಂಧನೆ ನಿಯಮ ವಿನಾಯ್ತಿ ಮೂಲಕ ೫ ಗುಂಟೆ ಭೂಮಿಗಿಂತ ಕಡಿಮೆ ಭೂಮಿಗೆ ಅರ್ಜಿ ಬಂದಾಗ ಅವುಗಳನ್ನು ಸಂಪೂರ್ಣವಾಗಿ ಮರು ಪರಿಶೀಲಿಸಿ ಭೂ ದುರುಪಯೋಗ ತಡೆಗೆ ಸೂಚಿಸಲಾಗಿದೆ. ಒಂದು ವೇಳೆ ಇಂತಹ ಪ್ರಕರಣಗಳಿಗೆ ನಿಯಮ ಮೀರಿ ಅನುಮತಿ ನೀಡಿದರೆ ಅಂತಹ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮದ ಎಚ್ಚರಿಕೆಯನ್ನೂ ನೀಡಲಾಗಿದೆ.
ಕರ್ನಾಟಕ ಭೂ ಕಂದಾಯ ಕಾಯ್ದೆ, ೧೯೬೪ ರ ಪ್ರಕಾರ ಕುಟುಂಬ ಸದಸ್ಯರಲ್ಲಿ ವಿಭಜನೆಯ ಸಂದರ್ಭದಲ್ಲಿ ೫ ಗುಂಟೆಗಿAತ ಕಡಿಮೆ ಇರುವ ಭೂಮಿಗೆ ೧೧ಇ ಸ್ಕೆಚ್ ಅನ್ನು ಒಮ್ಮೆ ಮಾತ್ರ ಪಡೆಯಲು ವ್ಯಕ್ತಿಗೆ ಅವಕಾಶ ನೀಡುತ್ತದೆ. ಆದರೆ ಅನೇಕ ಸಂದರ್ಭಗಳಲ್ಲಿ, ಭೂಮಾಲೀಕರು ೧೧ಇ ಸ್ಕೆಚ್‌ಗಳನ್ನು ಹಲವು ಬಾರಿ ಪಡೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಈ ರೀತಿ ಮಾಡಿ ಕೃಷಿ ಭೂಮಿಯನ್ನು ವಸತಿ ನಿವೇಶನವಾಗಿ ಮಾರಾಟ ಮಾಡುವ ಅಥವಾ ಉಡುಗೊರೆ ರೂಪದಲ್ಲಿ ಮಾರಾಟ ಮಾಡುತ್ತಿರುವುದೂ ಸರ್ಕಾರದ ಗಮನಕ್ಕೆ ಬಂದಿದೆ. ಇಂತಹ ಪ್ರಕರಣಗಳಲ್ಲಿ ಭೂ ದಾಖಲೆಗಳ ವಿಭಾಗವು ಸ್ವಯಂ ಪ್ರೇರಿತ (Suo moಣo) ಪ್ರಕರಣಗಳನ್ನು ದಾಖಲಿಸಬೇಕು ಮತ್ತು ಅಂತಹ ೧೧ಇ ಸ್ಕೆಚ್‌ಗಳನ್ನು ರದ್ದುಗೊಳಿಸಬೇಕು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.