ಅಹಮದಾಬಾದ್, ಮಾ. ೮: ಗುಜರಾತ್‌ನ ಅಹಮದಾಬಾದ್ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪುರುಷರ ವಿಶ್ವಕಪ್ ಟಿ-೨೦ ಅಂತಿಮ ಪಂದ್ಯದಲ್ಲಿ ಎದುರಾಳಿ ನ್ಯೂಜಿಲ್ಯಾಂಡ್ ವಿರುದ್ಧ ೯೬ ರನ್‌ಗಳ ಅಂತರದಲ್ಲಿ ಗೆಲುವು ಸಾಧಿಸಿದ ಭಾರತ ಕ್ರಿಕೆಟ್ ತಂಡವು ೩ನೇ ಬಾರಿ ಟಿ-೨೦ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲ್ಯಾಂಡ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರಿAದ ಮೊದಲು ಬ್ಯಾಟ್ ಮಾಡಿದ ಭಾರತ ೫ ವಿಕೆಟ್ ನಷ್ಟಕ್ಕೆ ಭರ್ಜರಿ ೨೫೫ ರನ್ ಗಳಿಸಿತು. ಆರಂಭಿಕ ಆಟಗಾರ ಅಭಿಷೇಕ್ ಹಾಗೂ ಸಂಜು ಸ್ಯಾಮ್‌ಸನ್ ಉತ್ತಮ ಆಟದ ಮೂಲಕ ಆರಂಭಿಕ ಮುನ್ನಡೆ ನೀಡಿದರು. ಅಭಿಷೇಕ್ ಶರ್ಮಾ ೧೮ ಎಸೆತಗಳಲ್ಲಿ ಅರ್ಧ ಶತಕ ಬಾರಿಸಿ ಈ ವಿಶ್ವಕಪ್‌ನಲ್ಲಿ ಅತಿ ವೇಗದ ಅರ್ಧ ಶತಕ ಪೇರಿಸಿದರು. ನಂತರ ಸಂಜು ಸ್ಯಾಮ್‌ಸನ್ ಹಾಗೂ ಇಶಾನ್ ಕಿಶನ್ ವೇಗದ ಆಟ ಮುಂದುವರಿಸಿ ಸಂಜು ೪೬ ಎಸೆತಗಳಲ್ಲಿ ೮೯ ಹಾಗೂ ಇಶಾನ್ ೨೫ ಎಸೆತಗಳಲ್ಲಿ ೫೪ ರನ್ ಗಳಿಸಿದರು ಹಾಗೂ ಶಿವಮ್ ದೂಬೆ ೮ ಎಸೆತಗಳಲ್ಲಿ ೨೬ ರನ್ ಕಲೆ ಹಾಕಿದರು.

ಗುರಿ ಬೆನ್ನತ್ತಿದ ನ್ಯೂಜಿಲ್ಯಾಂಡ್ ೧೯ ಓವರ್‌ಗಳಲ್ಲಿ ೧೫೯ ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡು ೯೬ ರನ್‌ಗಳ ಅಂತರದಲ್ಲಿ ಸೋಲನುಭವಿಸಿತು. ಭಾರತದ ಪರ ಬೂಮ್ರ ೪ ವಿಕೆಟ್ ಹಾಗೂ ಅಕ್ಸರ್ ಪಟೇಲ್ ೩ ವಿಕೆಟ್‌ಗಳನ್ನು ಕಬಳಿಸಿದರು.

ಧೋನಿ ನಾಯಕತ್ವದಲ್ಲಿ ೨೦೦೭ರ ಚೊಚ್ಚಲ ಟಿ-೨೦ ವಿಶ್ವಕಪ್ ಆವೃತ್ತಿ ಗೆದ್ದಿದ್ದ ಭಾರತ ನಂತರದಲ್ಲಿ ೨೦೨೪ರಲ್ಲಿ ನಡೆದ ೯ನೇ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಆವೃತ್ತಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ೨ನೇ ಬಾರಿಗೆ ಚಾಂಪಿಯನ್ ಆಗಿತ್ತು. ಇದೀಗ ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ೩ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಈ ಸಾಧನೆಗೈದ ಮೊದಲನೇ ತಂಡವಾಗಿ ಹೊರಹೊಮ್ಮಿದೆ.

೨೦೨೬ರ ವಿಶ್ವಕಪ್ ಟೂರ್ನಿ ಅತಿ ಹೆಚ್ಚು ವೀಕ್ಷಕರನ್ನು ಆಕರ್ಷಿಸಿದ್ದು, ೧೨ ಲಕ್ಷ ಮಂದಿ ಭಾರತ ಹಾಗೂ ಶ್ರೀಲಂಕಾದ ವಿವಿಧೆಡೆಯ ಕ್ರೀಡಾಂಗಣಗಳಲ್ಲಿ ಪಂದ್ಯಗಳನ್ನು ವೀಕ್ಷಿಸಿದ್ದಾರೆ. ಅಂತಿಮ ಪಂದ್ಯವನ್ನು ಜಿಯೋ ಹಾಟ್ ಸ್ಟಾರ್‌ನಲ್ಲಿ ೭೫ ಕೋಟಿ ಮಂದಿ ವೀಕ್ಷಿಸಿದ್ದಾರೆ.