ಮುಳ್ಳೂರು, ಮಾ. ೮: ಸಮೀಪದ ಆಲೂರುಸಿದ್ದಾಪುರ ಸರಕಾರಿ ಪ್ರೌಢಶಾಲೆಯ ರಾಷ್ಟಿçÃಯ ಸೇವಾ ಯೋಜನೆಯ ಘಟಕ ಮತ್ತು ವನಸಿರಿ ಇಕೋ ಕ್ಲಬ್ ವತಿಯಿಂದ ಶಾಲೆಯ ಗ್ರಾಮೀಣ ಮಿನಿ ಕ್ರೀಡಾಂಗಣದ ಸಭಾಂಗಣದಲ್ಲಿ ಮಕ್ಕಳ ಸಂತೆಯನ್ನು ಹಮ್ಮಿಕೊಳ್ಳಲಾಯಿತು. ಶಾಲೆಯ ೮ ರಿಂದ ೧೦ನೇ ತರಗತಿಯ ವಿದ್ಯಾರ್ಥಿಗಳು ಸಂತೆ ನಡೆಸಿದರು.

ಮಕ್ಕಳು ತಮ್ಮ ತಮ್ಮ ಮನೆಗಳಲ್ಲಿ ಬೆಳೆದ ವಿವಿಧ ತರಕಾರಿ, ಸೊಪ್ಪು, ಗೆಡ್ಡೆ ಗೆಣಸು, ಹಣ್ಣು ಹಂಪಲು, ಮನೆಯಿಂದ ತಯಾರಿಸಿ ತಂದ ಆಹಾರ ಉತ್ಪನ್ನ ಸೇರಿದಂತೆ ಮುಂತಾದವುಗಳನ್ನು ಮಾರಾಟ ಮಾಡಿ ವ್ಯಾಪಾರದ ಅನುಭವ ಪಡೆದುಕೊಂಡರು. ಪಾನಿಪುರಿ, ಬೇಲ್‌ಪುರಿ, ಚುರಿಮುರಿ ಸಂತೆಯಲ್ಲಿ ತಯಾರಿಸಿ ಮಾರಾಟ ಮಾಡಿ ಗಮನ ಸೆಳೆದರು.