ಮಡಿಕೇರಿ, ಮಾ. ೬: ವೀರಾಜಪೇಟೆ ತಾಲೂಕು ಕಣ್ಣಂಗಾಲ ಗ್ರಾಮದಲ್ಲಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಭೇಟಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು.

ಇಲ್ಲಿನ ಕುಮ್ಮೆಹೊಳೆಗೆ ಚೆಕ್ ಡ್ಯಾಮ್ ನಿರ್ವಹಿಸುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಶಾಸಕರು, ಈ ಕಾಮಗಾರಿಯು ರೂ. ೧.೫೦ ಕೋಟಿ ವೆಚ್ಚದಲ್ಲಿ ನಡೆಯಲಿದ್ದು, ಸಣ್ಣ ನೀರಾವರಿ ಇಲಾಖೆ ಮೂಲಕ ನಡೆಯುವ ಕಾಮಗಾರಿಯು ಸುತ್ತಮುತ್ತಲಿನ ಜಮೀನಿಗೆ ನೀರಾವರಿ ಸೌಲಭ್ಯ ಒದಗುವುದರೊಂದಿಗೆ ಅಂತರ್ಜಲ ಸಹ ವೃದ್ಧಿಯಾಗಲಿದೆ ಎಂದು ತಿಳಿಸಿದರು.

ಕಾಮಗಾರಿಯನ್ನು ಗುಣಮಟ್ಟದಲ್ಲಿ ಹಾಗೂ ಅತಿ ಶೀಘ್ರವಾಗಿ ನಿರ್ವಹಿಸಬೇಕೆಂದು ಇದೇ ಸಂದರ್ಭ ಸ್ಥಳದಲ್ಲಿ ಉಪಸ್ಥಿತರಿದ್ದ ಗುತ್ತಿಗೆದಾರರಿಗೆ ಶಾಸಕರು ಸೂಚಿಸಿದರು.

ಬಳಿಕ ಇಲ್ಲಿಯ ಚಾಮುಂಡಿ ಪೈಸಾರಿಗೆ ಭೇಟಿ ನೀಡಿದ ಶಾಸಕರು, ತಮ್ಮ ಅನುದಾನದ ೧೫ ಲಕ್ಷ ರೂ.ಗಳಲ್ಲಿ ನಿರ್ಮಿಸಿದ ರಸ್ತೆಯನ್ನು ಸಾರ್ವಜನಿಕರ ಬಳಕೆಗಾಗಿ ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಪಟ್ಟಡ ರಂಜಿ ಪೂಣಚ್ಚ, ವಲಯ ಅಧ್ಯಕ್ಷರಾದ ಮಚ್ಚಾರಂಡ ಕಿರಣ್, ಹನೀಫ್, ರಫೀಕ್, ಅಂದಾಯಿ, ಕುಂಡಚ್ಚಿರ ಮಂಜು ದೇವಯ್ಯ, ಇಟೀರ ಭವಿನ್, ಮಂಜುನಾಥ್, ಡಿಲ್ಲು ನಾಣಯ್ಯ, ಬೇರೆರ ಕಿರಣ್ ಶಿವಪ್ಪ, ಮಚ್ಚಾರಂಡ ವನಿತಾ ಗಣಪತಿ, ಸ್ಥಳೀಯರಾದ ಬೊಪ್ಪಂಡ ಜಗ ಬೆಳ್ಳಿಯಪ್ಪ, ವಿಜು ಕಾಳಪ್ಪ, ಗಣೇಶ್ ಇತರರು ಇದ್ದರು.

ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ : ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಚೆನ್ನಯ್ಯನಕೋಟೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿಯವರ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಭೂಮಿಪೂಜೆ ನೆರವೇರಿಸಿದರು.

ಚೆನ್ನಯ್ಯನಕೋಟೆಯ ಪರಿಶಿಷ್ಟ ಜಾತಿ ಸಮುದಾಯದವರ ಗದ್ದೆಯ ಬಳಿ ಹರಿಯುವ ಹಳ್ಳಕ್ಕೆ ಪಿಕಪ್ ಹಾಗೂ ಕಾಲುವೆ ಕೃಷಿ ಜಮೀನು ಹತ್ತಿರ ಹರಿಯುವ ಹಳ್ಳಕ್ಕೆ ಚೆಕ್ ಡ್ಯಾಂ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದರು.

ಈ ಕಾಮಗಾರಿಯೂ ಸುಮಾರು ರೂ. ೨ ಕೋಟಿ ವೆಚ್ಚದಲ್ಲಿ, ಸಣ್ಣ ನೀರಾವರಿ ಇಲಾಖೆ ಮೂಲಕ ನಡೆಯಲಿದೆ ಎಂದು ಶಾಸಕರು ತಿಳಿಸಿದರು. ಈ ಸಂದರ್ಭ ಗುತ್ತಿಗೆದಾರರಿಗೆ ಕಾಮಗಾರಿಯ ಗುಣಮಟ್ಟ ಕಾಯ್ದುಕೊಂಡು ಶೀಘ್ರದಲ್ಲಿ ಮುಕ್ತಾಯಗೊಳಿಸಬೇಕೆಂದು ಸೂಚಿಸಿದರು.

ಬಸವನಹಳ್ಳಿಯಲ್ಲಿ ಶಾಸಕರ ಅನುದಾನವಾದ ರೂ. ೧೦ ಲಕ್ಷಗಳಲ್ಲಿ ನಿರ್ಮಾಣವಾದ ಕಾಂಕ್ರೀಟ್ ರಸ್ತೆಯ ಲೋಕಾರ್ಪಣೆ ಮಾಡಿದರು. ಸ್ಥಳೀಯರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಶುಭ ಕೋರಿದರು.

ಸ್ಥಳೀಯ ಹಿರಿಯರು ಶಾಸಕರ ಅನುದಾನಕ್ಕಾಗಿ ಧನ್ಯವಾದ ಅರ್ಪಿಸಿದರಲ್ಲದೆ ಶಾಸಕರು ನೀಡುತ್ತಿರುವ ಅನುದಾನಗಳು ಹಾಗೂ ಜನಪರ ಕೆಲಸಗಳ ಬಗ್ಗೆ ಮನದಾಳದ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭ ಪಟ್ಟಡ ರಂಜಿ ಪೂಣಚ್ಚ, ಪಂಚಾಯಿತಿ ಅಧ್ಯಕ್ಷೆ ಜಯಲಕ್ಷಿö್ಮÃ, ಸದಸ್ಯರು ವಿಜು ನಾರಾಯಣ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು ಗಣೇಶ್, ಹನೀಫ್, ರಫೀಕ್, ಸಾಬಾ ಕಾಳಪ್ಪ, ಪಾಲಿಬೆಟ್ಟ ಪಂಚಾಯಿತಿ ಸದಸ್ಯರು ನಾಸಿರ್, ಅಜ್ಜಿಕುಟ್ಟಿರ ಪೊನ್ನು, ಚೆಕು, ಅನಿಲ್, ಕುಂಡಚ್ಚಿರ ಮಂಜು ದೇವಯ್ಯ, ರವೀಂದ್ರ ಭಾವೆ, ಸಭು, ಡಾ. ವಾಸು, ಪೂಣಚ್ಚ, ಎಂ.ಜಿ. ಬೆಳ್ಯಪ್ಪ, ಎಂ.ಬಿ ಅಪ್ಪಣ್ಣ, ಗಗನ್ ಕಾರ್ಯಪ್ಪ, ಹರ್ಷ, ಅಪ್ಪಚ್ಚು, ಗಣೇಶ್, ಅಪ್ಪಯ್ಯ, ಲೋಹಿತ್, ಶಾಂತಿ, ಲಕ್ಷಿö್ಮÃ ಇತರರು ಉಪಸ್ಥಿತರಿದ್ದರು.