ಮಡಿಕೇರಿ, ಮಾ.೫: ಅನಾರೋಗ್ಯದ ಹಿನ್ನೆಲೆ ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೋರ್ವರು ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಡಿಕೇರಿ ನಗರದಲ್ಲಿ ಸಂಭವಿಸಿದೆ.
ಮೂಲತಃ ಭಾಗಮಂಡಲ ನಿವಾಸಿ, ಮಡಿಕೇರಿಯ ಮುಳಿಯ ಹಿಮವನ ಬಡಾವಣೆಯಲ್ಲಿ ನೆಲೆಸಿದ್ದ ಅಮೆಮನೆ ದೇವಿಪ್ರಸಾದ್(೪೧) ಎಂಬವರೇ ಆತ್ಮಹತ್ಯೆಗೆ ಶರಣಾದವರಾಗಿದ್ದಾರೆ. ಗುತ್ತಿಗೆದಾರರಾಗಿ ಕೆಲಸ ನಿರ್ವಹಿಸಿಕೊಂಡಿದ್ದ ದೇವಿಪ್ರಸಾದ್ ಬೆನ್ನುಮೂಳೆ ತೊಂದರೆಯಿAದ ಬಳಲುತ್ತಿದ್ದರು. ಕಳೆದ ಎರಡು ತಿಂಗಳ ಹಿಂದೆಯಷ್ಟೇ ಶಸ್ತçಚಿಕಿತ್ಸೆ ಕೂಡ ಆಗಿತ್ತು. ಸ್ವಲ್ಪಮಟ್ಟಿಗೆ ಸುಧಾರಿಸಿಕೊಂಡಿದ್ದರಾದರೂ ನೋವಿನಿಂದ ನರಳುತ್ತಿದ್ದುದರಿಂದ ಎರಡು ದಿನಗಳ ಹಿಂದೆಯಷ್ಟೇ ಮೈಸೂರಿಗೆ ತೆರಳಿ ಚಿಕಿತ್ಸೆ ಪಡೆದು ಬಂದಿದ್ದರು. ಇಂದು ಮಧ್ಯಾಹ್ನ ಊಟ ಮಾಡಿ ಮಲಗಿದ್ದವರು ೪ಆರನೇ ಪುಟಕ್ಕೆ
(ಮೊದಲ ಪುಟದಿಂದ) ಸಂಜ ವೇಳೆ ಎದ್ದು ತಾಯಿಯನ್ನು ಯಾವದೋ ಫೈಲ್ ತರುವಂತೆ ಮನೆಯ ಮೇಲಿನ ಕೊಠಡಿಗೆ ಕಳುಹಿಸಿ ಮನೆಯಲ್ಲಿದ್ದ ಕೋವಿಯೊಂದಿಗೆ ಹೊರಬಂದು ರಸ್ತೆಯಲ್ಲಿ ಎದೆಗೆ ಗುಂಡು ಹೊಡೆದುಕೊಂಡು ಪ್ರಾಣ ಕಳೆದುಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ, ಡಿವೈಎಸ್ಪಿ ಸೂರಜ್, ವೃತ್ತ ನಿರೀಕ್ಷಕ ಪಿ.ಕೆ. ರಾಜು, ನಗರ ಠಾಣಾಧಿಕಾರಿ ಅನ್ನಪೂರ್ಣ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಗಾಯಕರಾಗಿಯೂ ಗುರುತಿಸಿಕೊಂಡಿದ್ದ ದೇವಿಪ್ರಸಾದ್ ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.