ಶ್ರೀಮಂಗಲ, ಮಾ. ೫: ಜಮ್ಮಾ ವಿಧೇಯಕ ತಿದ್ದುಪಡಿಗೆ ಅಂಗೀಕಾರ ತರುವ ಮೂಲಕ ಕೊಡಗಿನಲ್ಲಿ ಜಮ್ಮಾ ವಿಚಾರದಲ್ಲಿ ಪಟ್ಟೆದಾರ ಸೇರಿದಂತೆ ಇನ್ನಿತರ ಅಂಶಗಳ ತೊಂದರೆಯನ್ನು ಸರಿಪಡಿಸಲು ಪಾತ್ರವಹಿಸಿರುವ ವೀರಾಜಪೇಟೆ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರನ್ನು ಇತ್ತೀಚೆಗೆ ಶ್ರೀಮಂಗಲ ನಾಡು ಕೊಡವ ಸಮಾಜ ಪೊಮ್ಮಕ್ಕಡ ಕೂಟದಿಂದ ಸನ್ಮಾನಿಸಲಾಯಿತು.

ಕೂಟದ ಅಧ್ಯಕ್ಷೆ ಪೆಮ್ಮಂಡ ಸಬಿತಾ ಕುಶಾಲಪ್ಪ, ಉಪಾಧ್ಯಕೆÀ ಕಾಳಿಮಾಡ ಸೀಮಾ ಪ್ರಶಾಂತ್, ಕಾರ್ಯದರ್ಶಿ ಚಟ್ಟಂಡ ಲತಾ ಚರ್ಮಣ, ಖಜಾಂಚಿ ಮಚ್ಚಮಾಡ ಶ್ವೇತಾ ಉದಯ ಸೇರಿದಂತೆ ಪದಾಧಿಕಾರಿಗಳಾದ ಚೋನಿರ ಪವಿ ರತ್ತು, ಕೋಟ್ರಮಾಡ ಶೈಮಾ ರೋಷನ್, ಶೀತಲ್ ಮಾದಪ್ಪ, ಶೃತಿ ನಿತಿನ್, ಚೇಂದAಡ ತಾನ್ಸಿ ಚೇತನ್ ಹಾಜರಿದ್ದರು.