ಪೊನ್ನಂಪೇಟೆ, ಮಾ. ೫: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆ ಪ್ರಾಥಮಿಕ ವಿಭಾಗದಲ್ಲಿ ರಾಷ್ಟ್ರೀಯ ವಿಜ್ಞಾನ ದಿನ ಆಚರಿಸಲಾಯಿತು. ಕಾರ್ಯಕ್ರಮವನ್ನು ಶಾಲಾ ಮುಖ್ಯ ಶಿಕ್ಷಕ ವಿಜಯ್ ಬಿ.ಎಂ ಉದ್ಘಾಟಿಸಿದರು. ವಿದ್ಯಾರ್ಥಿಗಳು ತಾವೇ ತಯಾರಿಸಿದ ವೈಜ್ಞಾನಿಕ ಉಪಕರಣಗಳನ್ನು ಪ್ರದರ್ಶಿಸಿದರು. ನಂತರ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ವಿಜ್ಞಾನ ಮಾದರಿ ತಯಾರಿಕೆಯಲ್ಲಿ ೧ ರಿಂದ ೫ ನೇ ತರಗತಿ ವಿಭಾಗದಲ್ಲಿ ಹರ್ಷಿತ್ ಗೌಡ ಪ್ರಥಮ, ಸಾನ್ವಿಕ ದ್ವಿತೀಯ, ಕನಸು ತೃತೀಯ ಬಹುಮಾನ, ೬ ರಿಂದ ೭ನೇ ತರಗತಿ ವಿಭಾಗದಲ್ಲಿ ದೀನಶ್ರೀ ಮತ್ತು ಆಜೀಂ ಫಾತೀಮ ಪ್ರಥಮ, ಮಹಮದ್ ಮುಜಿತಾಬ್ ಮತ್ತು ರೆಮೀತ್ ದ್ವಿತೀಯ, ಜಾಬಾಸ್ ಸರವಣ ಮತ್ತು ಧೀರನ್ ತೃತೀಯ ಬಹುಮಾನ ಪಡೆದುಕೊಂಡರು. ಶಿಕ್ಷಕಿ ಫಿಲೋಮಿನಾ ಮಕ್ಕಳಿಗೆ ಮಾರ್ಗದರ್ಶನ ನೀಡಿದರು. ರೋಜಿ ಐ.ಎಂ. ಕಾರ್ಯಕ್ರಮ ನಿರೂಪಣೆ ಮಾಡಿದರು.

ಈ ಸಂದರ್ಭ ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಶಿಕ್ಷಕರಾದ ಜಾನ್ಸಿ ಎಂ.ಎ, ರೇಖಾ ಪಿ.ಎ., ಶಕೀಲ ಬಾನು, ಶಾಹಿದ ಕೆ.ಬಿ., ವಿನಿತ ಕೆ.ಆರ್., ಗಂಗಾ ಮಣಿ ಸಿ.ಪಿ., ರೇಖಾ, ಪಿ.ಎ., ನಿಂಗರಾಜು. ಎನ್, ದೈಹಿಕ ಶಿಕ್ಷಣ ಶಿಕ್ಷಕ ಮಹೇಶ್ ಟಿ.ಎಸ್., ಅತಿಥಿ ಶಿಕ್ಷಕರಾದ ಜಿಶಾ, ಹಸೀನ, ಸಹಾಯಕಿ ಜೆಸ್ಸಿ ಇದ್ದರು