ಪೊನ್ನಂಪೇಟೆ, ಮಾ. ೩: ಪೊನ್ನಂಪೇಟೆ ಪಟ್ಟಣದ ಟಿ.ಆರ್ ರಸ್ತೆ, ತೊರೆಬೀದಿ, ನಿಸರ್ಗನಗರ ಸೇರಿದಂತೆ ಪಟ್ಟಣದ ಹಲವು ಬಡಾವಣೆಗಳಲ್ಲಿ ಕಳೆದ ಎರಡು ತಿಂಗಳಿನಿAದ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ಇದೀಗ ಸಮಸ್ಯೆ ಮತ್ತಷ್ಟು ತೀವ್ರವಾಗಿದ್ದು, ನೀರಿಲ್ಲದೆ ಇಲ್ಲಿನ ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಪೊನ್ನಂಪೇಟೆ ಪಟ್ಟಣಕ್ಕೆ ನೀರು ಪೂರೈಕೆ ಮಾಡುವ ಟ್ಯಾಂಕ್‌ಗೆ ಅಳವಡಿಸಿರುವ ಬೋರ್‌ವೆಲ್‌ನಲ್ಲಿ ಅಂತರ್ಜಲ ಬತ್ತಿ ಹೋಗಿರುವ ಕಾರಣ, ಬಹುತೇಕ ನಲ್ಲಿಗಳಲ್ಲಿ ನೀರು ಕಾಣದೆ ಹಲವು ದಿನಗಳೇ ಕಳೆದು ಹೋಗಿವೆ. ಬಾವಿಯೊಂದಕ್ಕೆ ಅಳವಡಿಸಿರುವ ಬೋರ್‌ವೆಲ್‌ನಿಂದ ಟ್ಯಾಂಕ್‌ಗೆ ನೀರು ಪೂರೈಕೆ ಮಾಡಲಾಗುತ್ತಿತ್ತು. ಆದರೆ ಇತ್ತೀಚೆಗೆ ಅಂತರ್ಜಲ ಕಡಿಮೆ ಆಗಿರುವ ಕಾರಣ ಬಾವಿಯಲ್ಲಿ ನೀರಿಲ್ಲದೆ ನೀರು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ.

ಪಟ್ಟಣ ಪಂಚಾಯಿತಿ ಆದರೂ ಪ್ರಾಯೋಜನವಿಲ್ಲ

ಕುಡಿಯುವ ನೀರಿನ ಸಮಸ್ಯೆಯಿಂದ ಹಲವು ವರ್ಷಗಳಿಂದ ಇಲ್ಲಿನ ನಾಗರಿಕರು ತೊಂದರೆ ಅನುಭವಿಸುತ್ತಿದ್ದರು. ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಆಗಿ ಮೇಲ್ದರ್ಜೆಗೇರಿದ ಮೇಲಾದರೂ ಸಮಸ್ಯೆ ಪರಿಹಾರ ಆಗಬಹುದು ಎಂಬ ಆಶಾಭಾವನೆಯನ್ನು ನಾಗರೀಕರು ಹೊಂದಿದ್ದರು. ಆದರೆ ಪಟ್ಟಣ ಪಂಚಾಯಿತಿ ಆಗಿ ವರುಷಗಳು ಕಳೆದರೂ, ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡುವ ಕಾರ್ಯ ಪಟ್ಟಣ ಪಂಚಾಯಿತಿ ವತಿಯಿಂದ ಇದುವರೆಗೂ ಆಗಿಲ್ಲ.

ಬಾವಿಗೆ ಅಳವಡಿಸಿರುವ ಬೋರ್‌ವೆಲ್‌ಗಳನ್ನೇ ನಂಬಿಕೊAಡಿರುವ ಆಡಳಿತ ಮಂಡಳಿ, ಸೂಕ್ತ ಸ್ಥಳ ಹುಡುಕಿ ನೀರಿನ ಸೆಲೆ ಹುಡುಕಿ ಹೊಸ ಬೋರ್‌ವೆಲ್ ತೆಗೆದು ನೀರಿನ ಸಮಸ್ಯೆ ಪರಿಹರಿಸುವ ಗೋಜಿಗೆ ಹೋಗಿಲ್ಲ.

ತೊರೆಬೀದಿಯಲ್ಲಿ ನೀರಿಗೆ ಪರದಾಟ - ಮಿನಿ ಟ್ಯಾಂಕ್‌ನಲ್ಲಿ ಕಿರಿಕಿರಿ

ಇಲ್ಲಿನ ಟಿ.ಆರ್ ರಸ್ತೆಯಲ್ಲಿ ನಲ್ಲಿಗಳಲ್ಲಿ ನೀರು ಬಾರದೆ ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ಈ ವ್ಯಾಪ್ತಿಗೂ ಕೂಡ ಪಟ್ಟಣದ ಮುಖ್ಯ ಟ್ಯಾಂಕ್‌ನಿAದ ವಾರಕ್ಕೆ ಒಮ್ಮೆಯಾದರೂ ನೀರು ಪೂರೈಕೆಯಾಗುತ್ತಿತ್ತು.

ಜನರು ಬರುವ ನೀರನ್ನು ಡ್ರಮ್ ಹಾಗೂ ಪಾತ್ರೆ, ಬಿಂದಿಗೆಗಳಲ್ಲಿ ಶೇಖರಿಸಿಟ್ಟುಕೊಂಡು, ಬಳಕೆ ಮಾಡಿಕೊಳ್ಳುತ್ತಿದ್ದರು. ಈಗ ನಲ್ಲಿಗಳಲ್ಲಿ ನೀರು ಬಾರದ ಕಾರಣ, ನೀರಿಗಾಗಿ ಪರದಾಟ ಶುರುವಾಗಿದೆ.

ಟಿ.ಆರ್ ರಸ್ತೆಯಲಿ ಇಲ್ಲಿನ ನಿವಾಸಿಯೊಬ್ಬರ ಮನೆಗೆ ಹೊಂದಿಕೊAಡAತೆ ಅವರ ಖಾಸಗಿ ಸ್ಥಳದಲ್ಲಿ ಹಲವು ವರ್ಷಗಳ ಹಿಂದೆ ಒಂದು ಮಿನಿ ಟ್ಯಾಂಕ್ ನಿರ್ಮಿಸಿದ್ದು, ಆ ಟ್ಯಾಂಕ್‌ನಲ್ಲಿರುವ ನಾಲ್ಕು ನಲ್ಲಿಗಳ ಪೈಕಿ ಒಂದು ನಲ್ಲಿಯನ್ನು ಮನೆಯ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಮಾಲೀಕರಿಗೆ ಬಿಟ್ಟು, ಉಳಿದ ಮೂರು ನಲ್ಲಿಯಲ್ಲಿ ಸಾರ್ವಜನಿಕರು ನೀರು ತೆಗೆದುಕೊಳ್ಳುವಂತೆ ನಿರ್ಧರಿಸಲಾಗಿದೆ. ಶಿವ ಕಾಲೋನಿಯಲ್ಲಿರುವ ಗೌರಿಕೆರೆ ಸಮೀಪದ ಬಾವಿಗೆ ಅಳವಡಿಸಿರುವ ಬೋರ್‌ವೆಲ್‌ನಿಂದ ಆ ಮಿನಿ ಟ್ಯಾಂಕ್ ತುಂಬಿಸಿ, ಅಲ್ಲಿಂದ ಈ ಭಾಗದ ಜನರು ನೀರು ತೆಗೆದುಕೊಳ್ಳಬಹುದು, ವಾರಕ್ಕೆ ಮೂರು ಬಾರಿ ಈ ಮಿನಿಟ್ಯಾಂಕ್‌ಗೆ ನೀರು ಸರಬರಾಜು ಮಾಡಲಾಗುತ್ತೆ. ಒಂದು ಕುಟುಂಬಕ್ಕೆ ಇದರಿಂದ ಸುಮಾರು ೧೦ ಬಿಂದಿಗೆಯಷ್ಟು ನೀರು ಸಿಗುತ್ತದೆ. ಸರತಿಯಲ್ಲಿ ನಿಂತು ನೀರು ತೆಗೆದುಕೊಳ್ಳುತ್ತಾರೆ.

ಆದರೆ ಇತ್ತೀಚೆಗೆ ಟ್ಯಾಂಕ್ ನಿರ್ಮಿಸಲು ಸ್ಥಳ ನೀಡಿದ ಮನೆಯ ಮಾಲಕಿ, ಜನರು ಬಿಂದಿಗೆಯನ್ನು ಮನೆ ಮುಂದೆ ಇಡುವುರಿಂದ ಸಮಸ್ಯೆಯಾಗುತ್ತದೆ ಎಂದು ಪ್ರತಿದಿನ ನೀರು ತೆಗೆಯಲು ಬರುವ ಜನರೊಂದಿಗೆ ಕಿರಿಕಿರಿ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರಿಂದ ದೂರು ಕೇಳಿಬರುತ್ತಿದೆ.

ಆದ್ದರಿಂದ ಆ ಟ್ಯಾಂಕ್ ಅನ್ನು ಬೇರೆ ಸ್ಥಳದಲ್ಲಿ ಇಡಬೇಕು ಎಂದು ಪಟ್ಟಣ ಪಂಚಾಯಿತಿಯನ್ನು ಸ್ಥಳೀಯ ನಾಗರಿಕರು ಒತ್ತಾಯಿಸಿದ್ದಾರೆ.

ವರದಿ: ಚನ್ನನಾಯಕ