ಸೋಮವಾರಪೇಟೆ, ಮಾ.೩ : ಆಕಸ್ಮಿಕವಾಗಿ ಅಗ್ನಿ ಅವಘಡ ಸಂಭವಿಸಿ ಸಿ.ಆರ್.ಪಿ.ಎಫ್.ನ ಮಾಜಿ ಯೋಧರೋರ್ವರು ದುರ್ಮರಣಕ್ಕೀಡಾಗಿರುವ ಘಟನೆ ಸಮೀಪದ ತೋಳೂರುಶೆಟ್ಟಳ್ಳಿ ಗ್ರಾಮದಲ್ಲಿ ನಡೆದಿದೆ.
ತೋಳುರುಶೆಟ್ಟಳ್ಳಿ ಜಂಕ್ಷನ್ ನಿವಾಸಿ ಹೆಚ್.ಎ.ವೆಂಕಟೇಶ್ (೬೪) ಎಂಬವರೇ ಮೃತ ದುರ್ದೈವಿ. ಮನೆಯಲ್ಲಿ ತೋಟ ಬಳಕೆಯ ಯಂತ್ರಗಳಿಗೆAದು ತಂದಿಟ್ಟಿದ್ದ ಪೆಟ್ರೋಲ್ ಸೋರಿಕೆಯಾಗಿದ್ದು, ಇದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಕ್ಷಣಾರ್ಧದಲ್ಲಿ ಬೆಂಕಿ ವ್ಯಾಪಿಸಿದೆ.
ವೆಂಕಟೇಶ್ ಅವರು ಗ್ಯಾಂಗ್ರಿನ್ ಸಮಸ್ಯೆಯಿಂದಾಗಿ ಒಂದು ಕಾಲನ್ನು ಕಳೆದುಕೊಂಡಿದ್ದರಿAದ ತಕ್ಷಣ ಸ್ಥಳದಿಂದ ಹೊರಬರಲು ಸಾಧ್ಯವಾಗದೆ ಬೆಂಕಿಗೆ ಸಿಲುಕಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಬೆಂಕಿಯ ತೀವ್ರತೆಗೆ ವೆಂಕಟೇಶ್ ಅವರ ದೇಹ ಸಂಪೂರ್ಣ ಸುಟ್ಟಿದ್ದು, ಮನೆಯ ಒಂದು ಭಾಗವೂ ಸುಟ್ಟು ಕರಕಲಾಗಿದೆ.ಮನೆಯಲ್ಲಿ ಬೇರೆ ಯಾರೂ ಇಲ್ಲದ ಸಂದರ್ಭ ಘಟನೆ ನಡೆದಿದ್ದು, ಮನೆಯ ಮೇಲಿನಿಂದ ದಟ್ಟ ಹೊಗೆ ಕಾಣಿಸಿಕೊಂಡ ಹಿನ್ನೆಲೆ ಸ್ಥಳೀಯರು ಸ್ಥಳಕ್ಕೆ ಧಾವಿಸಿದ್ದು, ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿ, ಬೆಂಕಿ ನಂದಿಸುವ ಪ್ರಯತ್ನ ಮಾಡಿದ್ದಾರೆ. ಅಷ್ಟರಲ್ಲೇ ವೆಂಕಟೇಶ್ ಅವರು ಸಾವನ್ನಪ್ಪಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿದ್ದಾರೆ.
ಸ್ಥಳಕ್ಕೆ ಸೋಮವಾರಪೇಟೆ ವೃತ್ತ ನಿರೀಕ್ಷಕ ಮುದ್ದುಮಾದೇವ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಡಿಕೇರಿಯಿಂದ ಆಗಮಿಸಿದ ವಿಧಿ ವಿಜ್ಞಾನ ಪ್ರಯೋಗಾಲದ ಸಿಬ್ಬಂದಿಗಳು ಮಹಜರು ನಡೆಸಿದ್ದಾರೆ. ಮೃತರು ಪತ್ನಿ ಸವಿತಾ ಸೇರಿದಂತೆ ಈರ್ವರು ಪುತ್ರಿಯರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ತಾ. ೪ರಂದು (ಇಂದು) ನಡೆಯಲಿದೆ.