ಮಡಿಕೇರಿ, ಮಾ. ೩: ಬೆಟ್ಟಗೇರಿ ಮಂಡಲ ವ್ಯಾಪ್ತಿಯ ಹಿಂದೂ ಸಂಗಮ ಸಂಭ್ರಮದಿAದ ಜರುಗಿತು. ಬೆಟ್ಟಗೇರಿ ನಾಪೋಕ್ಲು ಜಂಕ್ಷನ್ ಬಳಿಯಿಂದ ಉದಯ ಪ್ರೌಢಶಾಲೆಯವರೆಗೆ ಬೃಹತ್ ಶೋಭಾಯಾತ್ರೆ ನಡೆಯಿತು.
ಈ ಶೋಭಾಯಾತ್ರೆಗೆ ಕೇರಳ ಚಂಡೆ, ಕೊಡಗಿನ ಸಾಂಪ್ರದಾಯಿಕ ವಾಲಗ, ಭಜನೆ ಕುಣಿತ ಹಾಗೂ ಟ್ಯಾಬ್ಲೋಗಳು ಮೆರುಗು ನೀಡಿದವು.
ಬೆಟ್ಟಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಟಗೇರಿ, ಹೆರವನಾಡು, ಪಾಲೂರು, ಕಾರುಗುಂದ ಅರುವತ್ತೋಕ್ಲು, ಅವಂದೂರು ಗ್ರಾಮಸ್ಥರು ಬೆಟ್ಟಗೇರಿ ನಾಪೋಕ್ಲು ಜಂಕ್ಷನ್‌ನಲ್ಲಿ ಸೇರಿ ಅಲ್ಲಿಂದ ಪ್ರಾರಂಭವಾದ ಶೋಭಾಯಾತ್ರೆಗೆ ಶ್ರೀ ಸೋಮನಾಥನಂದ ಪುರಿ ಸ್ವಾಮೀಜಿ ಚಾಲನೆ ನೀಡಿದರು. ಬಳಿಕ ಉದಯ ಪ್ರೌಢ ಶಾಲೆಯಲ್ಲಿ ಸಮಾರಂಭ ನಡೆಯಿತು.
ಮುಖ್ಯ ಭಾಷಣಕಾರಾಗಿ ಆಗಮಿಸಿದ್ದÀ ನವೀನ್ ಸುಬ್ರಮಣ್ಯ ಮಾತನಾಡಿ ಸಾವಿರಾರು ವರ್ಷಗಳಿಂದ ಭಾರತ ದೇಶದ ಮೇಲೆ ಆಕ್ರಮಣ ನಡೆದರೂ ಕೂಡ ಭಾರತ ತನ್ನ ಅಸ್ಮಿತೆಯನ್ನು ಕಳೆದುಕೊಂಡಿಲ್ಲ. ಹಿಂದೂಗಳು ಸಂಘಟಿತರಾದಾಗ ಭಾರತ ಮಾತೆ ಜಗನ್ಮಾತೆಯಾಗಿ ಭಾರತ ವಿಶ್ವಗುರುವಾಗುತ್ತದೆ ಎಂದರು.
ಸಮಿತಿಯ ಅಧ್ಯಕ್ಷ ತಳೂರು ದಿನೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ರಾಷ್ಟಿçÃಯ ಸ್ವಯಂ ಸೇವಕ ಸಂಘದ ನೂರನೇ ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಅಧ್ಯಕ್ಷತೆಯನ್ನು ವಹಿಸಿದ್ದ ಕಟ್ರತಂಡ ಅಪ್ಪಯ್ಯ ಮಾತನಾಡಿ, ಹಿಂದೂಗಳು ಸಂಘಟಿತರಾದಾಗ ಮಾತ್ರ ಭಾರತದ ಭವ್ಯ ಭವಿಷ್ಯ ನಿರ್ಮಾಣ ಸಾಧ್ಯವಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ, ಕಾಫಿ ಮಂಡಳಿ ಸದಸ್ಯ ತಳೂರು ಕಿಶೋರ್ ಕುಮಾರ್, ಕಡ್ಲೇರ ಕೀರ್ತನ, ಸಂಘ ಪರಿವಾರದ ಪ್ರಮುಖರಾದ ಚಂದ್ರ ಉಡೋತ್, ತಿರುಪತಿ, ತಿರುಮಲ, ಸೂರಿ, ಯತೀಶ್, ವಿಜು, ಬೆಪ್ಪುರನ ಮೇದಪ್ಪ, ಇನ್ನಿತರರು ಇದ್ದರು. ಕಡ್ಲೇರ ತುಳಸಿ ಮೋಹನ್ ವಂದೇ ಮಾತರಂ ಹಾಡಿ ಕಾರ್ಯಕ್ರಮ ನಿರೂಪಣೆ ಮಾಡಿದರು, ಕೊಡಪಾಲು ಗಣಪತಿ ಸ್ವಾಗತಿಸಿ, ನಾಪಂಡ ರ‍್ಯಾಲಿ ಮಾದಯ್ಯ ವಂದಿಸಿದರು.