ಶನಿವಾರಸಂತೆ, ಮಾ. ೩: ಸಮೀಪದ ಆಲೂರುಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡ್ಲೆಮಕ್ಕಿ ಗ್ರಾಮದ ಕೂಲಿ ಕಾರ್ಮಿಕರಾದ ರಾಜು(೪೮)-ಸುಶೀಲ(೩೮) ದಂಪತಿ ಕಾಣೆಯಾಗಿರುವುದಾಗಿ ಅವರ ಮಗಳು ಐಶ್ವರ್ಯ ಫೆ.೨೪ ರಂದು ಶನಿವಾರಸಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮಗಳು ಫೆ.೨೨ ರಂದು ಕಡ್ಲೆಮಕ್ಕಿ ಗ್ರಾಮಕ್ಕೆ ಬಂದು ನೋಡಲಾಗಿ ಮನೆಗೆ ಬೀಗ ಜಡಿದಿರುವುದು ಗಮನಕ್ಕೆ ಬಂದು, ಅಕ್ಕಪಕ್ಕದವರಲ್ಲಿ, ನೆಂಟರಿಷ್ಟರಲ್ಲಿ ವಿಚಾರಿಸಿದರೂ ಪತ್ತೆಯಾಗಿರುವುದಿಲ್ಲ. ಕಾಣೆಯಾದವರ ಬಗ್ಗೆ ಮಾಹಿತಿ ಇದ್ದಲ್ಲಿ ಶನಿವಾರಸಂತೆ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಪ್ರಕಟಣೆ ಕೋರಿದೆ.