ಕಣಿವೆ, ಮಾ. ೩: ಕುಶಾಲನಗರ ಬಳಿಯ ಗುಮ್ಮನಕೊಲ್ಲಿ ಗ್ರಾಮದೇವತೆಗಳಾದ ಮಾರಮ್ಮ ಹಾಗೂ ಹುಚ್ಚಮ್ಮ ದೇವರ ವಾರ್ಷಿಕ ಪೂಜೋತ್ಸವ ತಾ. ೫ ರಿಂದ (ನಾಳೆಯಿಂದ) ಎರಡು ದಿನಗಳ ಕಾಲ ನಡೆಯಲಿದೆ.
ತಾ. ೫ ರಂದು ಬೆಳಿಗ್ಗೆ ೭ ಗಂಟೆಗೆ ಕಾವೇರಿ ನದಿಯಿಂದ ಪೂರ್ಣ ಕುಂಭ ಕಲಶಗಳೊಂದಿಗೆ ಗಂಗಾ ಪೂಜೆ, ಬೆಳಿಗ್ಗೆ ೯ ಗಂಟೆಯಿAದ ಪ್ರಧಾನ ಕಲಶ ಪ್ರತಿಷ್ಠೆ, ಕಲಾತತ್ವಾದಿವಾಸ ಹೋಮ, ಪೂರ್ಣಾಹುತಿ, ಶಿಖರ ಕಲಶಾಭಿಷೇಕ ಮಹಾಪೂಜೆ ಮಹಾಮಂಗಳಾರತಿ ನಡೆದ ನಂತರ ಭಕ್ತರಿಗೆ ಪ್ರಸಾದ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ನಂತರ ರಾತ್ರಿ ಹುಚ್ಚಮ್ಮ ಹಾಗೂ ಮಾರಮ್ಮ ತಾಯಂದಿರಿಗೆ ತಂಪು ಮಾಡಿಸುವುದು.
ತಾ. ೬ ರಂದು ಬೆಳಿಗ್ಗೆ ಬಲಿಪೂಜೆ ಇರುವುದರಿಂದ ಹರಕೆ ಹೊತ್ತ ಭಕ್ತಾದಿಗಳು ಬೆಳಿಗ್ಗೆ ೯ ಗಂಟೆಯ ಒಳಗೆ ತಲುಪಿಸಲು ದೇವಾಲಯ ಸಮಿತಿ ಕೋರಿದೆ.