ಮಡಿಕೇರಿ, ಮಾ. ೨: ರಾಷ್ಟಿçÃಯ ಹೆದ್ದಾರಿ ಬದಿಯಲ್ಲಿ ಕಸ ಎಸೆದ ರಾಜಸ್ಥಾನ ನೋಂದಣಿ ಸಂಖ್ಯೆ ಹೊಂದಿದ ಲಾರಿಗೆ ಸ್ಥಳೀಯ ಪಂಚಾಯಿತಿ ರೂ. ೧೦ ಸಾವಿರ ದಂಡ ವಿಧಿಸಿತು.

ಭಾನುವಾರ ಬೆಳಿಗ್ಗೆ ಮದೆ ಗ್ರಾಮ ಪಂಚಾಯಿತಿ ವಾಪ್ತಿಯ ಕರ್ತೋಜಿ ಬಳಿ ರಾಜಸ್ಥಾನ ಮೂಲದ ಲಾರಿಯಲ್ಲಿ ಬಂದ ಹೊರ ರಾಜ್ಯದ ಚಾಲಕ ಮತ್ತು ಸಿಬ್ಬಂದಿ ೩೦ ರಿಂದ ೪೦ ಚೀಲದಷ್ಟು ಕಸವನ್ನು ಎಸೆಯುತ್ತಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಲಾರಿಯವರ ಕೈಯಲ್ಲೇ ಹಾಕಿದಂತಹ ಕಸದ ಚೀಲವನ್ನು ವಾಪಸು ಲಾರಿಗೆ ತುಂಬಿಸಿದ್ದಾರೆ.

ಈ ಬಗ್ಗೆ ಮದೆ ಗ್ರಾಮ ಪಂಚಾಯಿತಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪಂಚಾಯಿತಿ ಸಿಬ್ಬಂದಿ ಲಾರಿಯವರಿಗೆ ಒಟ್ಟು ರೂ. ೧೦ ಸಾವಿರ ದಂಡವನ್ನು ವಿಧಿಸಿದರು.