ಕಣಿವೆ, ಮಾ. ೨: ಗಳಿಸಿದ ಸಂಪಾದನೆಯ ಒಂದು ಬಾಗವನ್ನು ದಾನ- ಧರ್ಮಗಳಲ್ಲಿ ವಿನಿಯೋಗಿಸಿದರೆ ನೆಮ್ಮದಿಯ ಬದುಕು ದೊರೆಯುತ್ತದೆ ಎಂದು ಶನಿವಾರಸಂತೆ ಮನೆಹಳ್ಳಿ ತಪೋಕ್ಷೇತ್ರದ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ ಹೇಳಿದರು.

ಕುಶಾಲನಗರ ತಾಲೂಕು ಹುಲುಸೆ ಗ್ರಾಮದಲ್ಲಿ ನೂತನವಾಗಿ ಪ್ರತಿಷ್ಠಾಪಿಸಿದ ಮಾರಮ್ಮ ದೇವಾಲಯದ ಲೋಕಾರ್ಪಣೆ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ದೇವಾಲಯಗಳು, ಮಠ ಮಂದಿರಗಳು ಮನುಷ್ಯನ ನೆಮ್ಮದಿಯ ತಾಣಗಳಾಗಿವೆ. ಪ್ರತಿಯೊಬ್ಬರು ಪರಿಸರ ಸಂರಕ್ಷಣೆಯತ್ತ ಪಣ ತೊಡುವಂತೆ ಕರೆ ನೀಡಿದರು.

ಕೆ.ಆರ್.ನಗರ ತಾಲೂಕು ಅರಕೆರೆ ವಿರಕ್ತ ಮಠದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಹಿಂದೂ ಸನಾತನ ಪರಂಪರೆಯಲ್ಲಿ ಪ್ರಕೃತಿ, ನದಿ, ಮರ, ಗಿಡಗಳು ಹಾಗೂ ಗೋ ಮಾತೆಗೆ ಪೂಜನೀಯ ಸ್ಥಾನವಿದೆ. ಇಂತಹ ಭಕ್ತಿ ಪರಂಪರೆ ಉಳಿದಿರುವುದೇ ಹಳ್ಳಿಗಳಿಂದ ಎಂದರು.

ತೊರೆನೂರು ವಿರಕ್ತ ಮಠದ ಶ್ರೀ ಮಲ್ಲೇಶ ಸ್ವಾಮೀಜಿ, ಅಖಿಲ ಭಾರತ ವೀರಶೈವ ಮಹಾ ಸಭಾ ಅಧ್ಯಕ್ಷ ಹೆಚ್.ವಿ.ಶಿವಪ್ಪ ಮಾತನಾಡಿದರು.

ಗ್ರಾಮದ ದೇವಾಲಯ ಸಮಿತಿ ಅಧ್ಯಕ್ಷ ಹೆಚ್.ಎನ್.ಶಿವನಂಜಪ್ಪ, ಕಾರ್ಯದರ್ಶಿ ಹೆಚ್.ಎನ್.ಶಂಕರಾಚಾರಿ ಇದ್ದರು.

ಇದೇ ಸಂದರ್ಭ ದೇವಾಲಯ ನಿರ್ಮಾಣಕ್ಕೆ ಸಹಕರಿಸಿದ ಗ್ರಾಮದ ಕೃಷಿಕರಾದ ಗುರುನಂಜಪ್ಪ, ರೇಣುಕಪ್ಪ, ನಂಜುAಡ, ಅಶ್ವಿನಿ, ಶಂಕರಾಚಾರಿ, ಮಲ್ಲಿಕಾರ್ಜುನ, ನಾಗರಾಜು, ರೇಣುಬಸಪ್ಪ, ಶಿವನಂಜಪ್ಪ, ಗುರುಮಲ್ಲಪ್ಪ, ಚಂದ್ರಪ್ಪ ಮೊದಲಾದವರನ್ನು ಗೌರವಿಸಲಾಯಿತು. ಶಿಕ್ಷಕ ಬಸವರಾಜು ನಿರೂಪಿಸಿದರು.ಬಸಪ್ಪ ಸ್ವಾಗತಿಸಿದರು. ರವಿ ವಂದಿಸಿದರು.